ಹುಲಿಗೆಮ್ಮ ಜಾತ್ರೆ: ಅಧಿಕಾರಿಗಳ ಶ್ರಮಕ್ಕೆ ಸಿಕ್ಕ ಫಲ, ಈ ಬಾರಿ ನಡೆಯದ ಅನಿಷ್ಠ ದೇವದಾಸಿ ಪದ್ಧತಿ!
ಮೇ.13ರಂದು ಇಡೀ ರಾಜ್ಯ ಮತದಾನದತ್ತ ಬ್ಯುಸಿಯಾಗಿದ್ದರೆ, ಕೊಪ್ಪಳ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಬಡ ಯುವತಿಯರು ದೇವದಾಸಿಯರಾಗುವುದನ್ನು ತಡೆಯುವಲ್ಲಿ ನಿರತರಾಗಿದ್ದರು. ಅವರ ಈ ಪರಿಶ್ರಮ ಫಲ ನೀಡಿದ್ದು, ಈ ಬಾರಿಯ ಹುಲಿಗೆಮ್ಮ ಜಾತ್ರೆಯಲ್ಲಿ ಅನಿಷ್ಠ ದೇವದಾಸಿ ಪದ್ಧತಿಗಳು ನಡೆದಿಲ್ಲ.

ಕೊಪ್ಪಳ: ಮೇ.13ರಂದು ಇಡೀ ರಾಜ್ಯ ಮತದಾನದತ್ತ ಬ್ಯುಸಿಯಾಗಿದ್ದರೆ, ಕೊಪ್ಪಳ ಜಿಲ್ಲಾಡಳಿತ ಮಂಡಳಿಯ ಅಧಿಕಾರಿಗಳು ಬಡ ಯುವತಿಯರು ದೇವದಾಸಿಯರಾಗುವುದನ್ನು ತಡೆಯುವಲ್ಲಿ ನಿರತರಾಗಿದ್ದರು. ಅವರ ಈ ಪರಿಶ್ರಮ ಫಲ ನೀಡಿದ್ದು, ಈ ಬಾರಿಯ ಹುಲಿಗೆಮ್ಮ ಜಾತ್ರೆಯಲ್ಲಿ ಅನಿಷ್ಠ ದೇವದಾಸಿ ಪದ್ಧತಿಗಳು ನಡೆದಿಲ್ಲ.
ದೇವದಾಸಿ ಪದ್ಧತಿ ಅನಿಷ್ಠವಾಗಿದ್ದು, ಈ ಆಚರಣೆ ಶಿಕ್ಷಾರ್ಹ ಅಪರಾಧವಾಗಿದೆ. ಜಾತ್ರೆ ವೇಳೆ ದೇವರ ಹೆಸರಿನಲ್ಲಿ ಮುತ್ತು ಕಟ್ಟುವುದು, ಜಡೆ ಬಿಡುವುಡು, ದೇವದಾಸಿ ಪದ್ಧತಿಗಳನ್ನು ನಡೆಸಲಾಗುತ್ತದೆ.
ಹೀಗಾಗಿ ಈ ವರ್ಷ ದೇವಾಲಯದ ಸುತ್ತಲೂ ಇಂತಹ ಪ್ರಯತ್ನಗಳನ್ನು ತಡೆಯಲು ಜಿಲ್ಲಾಡಳಿತ ಮಂಡಳಿ ಸೂಕ್ತ ರೀತಿಯ ವ್ಯವಸ್ಥೆಗಳನ್ನು ಮಾಡಿತ್ತು. ಜಾತ್ರೆ ಮೇಲೆ ಹದ್ದಿನ ಕಣ್ಣಿಟ್ಟಿದ್ದ ಪೊಲೀಸರು ಮತ್ತು ಅಧಿಕಾರಿಗಳು ಜನಸಾಮಾನ್ಯರಂತೆ ಸಾಮಾನ್ಯ ಉಡುಪಿನಲ್ಲಿ ಸ್ಥಳದಲ್ಲಿ ಗಸ್ತು ತಿರುಗುತ್ತಿದ್ದರು. ಇದರಂತೆ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಪರಿವರ್ತಿಸುವ 30 ಪ್ರಕರಣಗಳನ್ನು ತಡೆದಿದ್ದಾರೆ.
2022ರಲ್ಲಿ ದೇವಸ್ತಾನದಲ್ಲಿ ಇಂತಹ 300 ಪ್ರಕರಣಗಳು ವರದಿಯಾಗಿದ್ದವು. ಆದರೆ, ಈ ಬಗ್ಗೆ ಯಾವುದೇ ಎಫ್ಐಆರ್ ಗಳು ದಾಖಲಾಗಿಲ್ಲ. ಆದರೆ, ಪೋಷಕರಿಗೆ ಕೌನ್ಸಿಲಿಂಗ್ ಮಾಡಿ ಕಳುಹಿಸಲಾಗಿತ್ತು.
ಮೇ.13ರಂದು ಇಂತಹ 30 ಪ್ರಕರಣಗಳನ್ನು ತಡೆಯಲಾಗಿದೆ. ಏನೇಕ ಸ್ಥಳಗಳಲ್ಲಿ, ಮನೆಗಳಲ್ಲಿ ರಾತ್ರಿ ವೇಳೆ ಇಂತಹ ಆಚರಣೆಗಳನ್ನು ನಡೆಸಲಾಗುತ್ತದೆ. ಬಡವರು ಹಾಗೂ ಅನಕ್ಷರಸ್ಥರು ಇಂತಹ ಅನಿಷ್ಟ ಪದ್ಧತಿಗೆ ಬಲಿಯಾಗುತ್ತಿದ್ದಾರೆ. ಬಲವಂತವಾಗಿ ಹೆಣ್ಣುಮಕ್ಕಳನ್ನು ಇಂತಹ ಅನಿಷ್ಟ ಪದ್ಧತಿಗೊಳಪಡಿಸಲಾಗುತ್ತಿದ್ದು, ಕೊನೆಗೆ ಲೈಂಗಿಕ ಕಾರ್ಯಕರ್ತೆಯರಾಗಿ ಪರಿವರ್ತನೆಗೊಳ್ಳುತ್ತಿದ್ದಾರೆ. ಇದನ್ನು ತಡೆಯುವುದು ಅತ್ಯಗತ್ಯವಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


