ರಾಜ್ಯ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಬ್ಬ ನರ್ಸ್ ಗೆ 40 ರೋಗಿಗಳು; 592 ದಾದಿಯರ ಕೊರತೆ

ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 592 ನರ್ಸ್ ಗಳನ್ನು ನೇಮಿಸಬೇಕಾಗಿದೆ. ಪ್ರಸ್ತುತ ರೋಗಿಗಳ ಹೆಚ್ಚಳದಿಂದ ತಮಗೆ ಸಿಬ್ಬಂದಿ ಕೊರತೆ ದೊಡ್ಡ ಹೊರೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಬ್ಬ ನರ್ಸ್ ಗೆ 40 ರೋಗಿಗಳು; 592 ದಾದಿಯರ ಕೊರತೆ
ವಿಕ್ಟೋರಿಯಾ ಆಸ್ಪತ್ರೆ (ಸಂಗ್ರಹ ಚಿತ್ರ)
Published On :

ಬೆಂಗಳೂರು: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 592 ನರ್ಸ್ ಗಳನ್ನು ನೇಮಿಸಬೇಕಾಗಿದೆ. ಪ್ರಸ್ತುತ ರೋಗಿಗಳ ಹೆಚ್ಚಳದಿಂದ ತಮಗೆ ಸಿಬ್ಬಂದಿ ಕೊರತೆ ದೊಡ್ಡ ಹೊರೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

1,000 ಹಾಸಿಗೆಗಳ ಆಸ್ಪತ್ರೆಯಲ್ಲಿ ಪ್ರತಿದಿನ ಸುಮಾರು 1,200 ರೋಗಿಗಳು ಹೊರರೋಗಿ ವಿಭಾಗದಲ್ಲಿ ದಾಖಲಾಗುತ್ತಾರೆ. ಸಾಂಕ್ರಾಮಿಕ ರೋಗದ ನಂತರ ಹಾಸಿಗೆಗಳ ಸಂಖ್ಯೆಯ ಹೆಚ್ಚಳದೊಂದಿಗೆ ಒಳರೋಗಿಗಳ ಸಂಖ್ಯೆಯೂ ಹೆಚ್ಚಾಗಿದೆ.

ಪ್ರಸ್ತುತ ಆಸ್ಪತ್ರೆಯಲ್ಲಿ 316 ನರ್ಸಿಂಗ್ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಸರಾಸರಿ ಒಬ್ಬ ನರ್ಸ್ 40 ರೋಗಿಗಳನ್ನು ನೋಡಿಕೊಳ್ಳಬೇಕಾಗಿದೆ. ಅಂದರೆ ದಾದಿಯರು ಹೆಚ್ಚಾಗಿ ಕೆಲಸ ಮಾಡುತ್ತಾರೆ. ದಾದಿಯರು ತಾಯ್ತನದ ರಜೆ, ವೈಯಕ್ತಿಕ ರಜೆ ಅಥವಾ ಅಹಿತಕರ ಅಪಘಾತಗಳ ಕಾರಣದಿಂದ ರಜೆ ಮೇಲೆ ಹೋದರೆ, ಉಳಿದ ಸಿಬ್ಬಂದಿಗೆ ಹೆಚ್ಚು ಹೊರೆಯಾಗುತ್ತದೆ ಎಂದು ವಿಕ್ಟೋರಿಯಾ ಆಸ್ಪತ್ರೆಯ ನರ್ಸಿಂಗ್ ಸೂಪರಿಂಟೆಂಡೆಂಟ್ ಕವಿತಾ ಎನ್ ಅವರು ಹೇಳಿದ್ದಾರೆ.

"ಕೋವಿಡ್ ಸಮಯದಲ್ಲಿ ಮಾತ್ರ ದಾದಿಯ ಕೆಲಸದ ಪ್ರಾಮುಖ್ಯತೆಯನ್ನು ಗುರುತಿಸಲಾಯಿತು ಮತ್ತು ಪ್ರಶಂಸಿಸಲಾಯಿತು. ಒಬ್ಬ ನರ್ಸ್ ರೋಗಿಯೊಂದಿಗೆ ಹೆಚ್ಚು ಸಂಪರ್ಕದಲ್ಲಿರುತ್ತಾರೆ ಮತ್ತು ನಿರಂತರವಾಗಿ ಆರೈಕೆ ಮತ್ತು ನೈತಿಕ ಸ್ಥೈರ್ಯ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ. ಅನೇಕ ದಾದಿಯರು ಕೆಲಸದ ಸಮಯದಲ್ಲಿ ಕೋವಿಡ್ ಸೋಂಕಿಗೆ ಒಳಗಾಗಿದ್ದರು ಮತ್ತು ಹಲವರು ಪ್ರಾಣ ಕಳೆದುಕೊಂಡರು. ಆದರೆ ಅವರ ಪ್ರಯತ್ನಗಳಿಗೆ ಯಾರೂ ಯಾವುದೇ ಪ್ರೋತ್ಸಾಹ ನೀಡಿಲ್ಲ" ಎಂದು ಕವಿತಾ ಹೇಳಿದ್ದಾರೆ.

ನರ್ಸ್ ಗಳು ನಮ್ಮ ಆಸ್ಪತ್ರೆಯ "ಬೆನ್ನೆಲುಬು" ಎಂದ ವಿಕ್ಟೋರಿಯಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ ರಮೇಶ್ ಕೃಷ್ಣ ಕೆ ಅವರು, ನರ್ಸ್ ಗಳ ಕೊರತೆಗೆ ಸಂಬಂಧಿಸಿದಂತೆ ಕರ್ನಾಟಕ ಆರೋಗ್ಯ ಇಲಾಖೆಗೆ ಪತ್ರ ಬರೆದಿದ್ದೇನೆ. ಚುನಾವಣೆ ಮುಗಿದ ನಂತರ ಆಸ್ಪತ್ರೆಯಲ್ಲಿ ಇನ್ನೂ 592 ನರ್ಸ್ ಗಳನ್ನು ನೇಮಕ ಮಾಡುವಂತೆ ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.