ರಾಜ್ಯ

ಬೆಂಗಳೂರು: ಮೊಬೈಲ್ ಕದ್ದು 1,000 ರೂ. ಗೆ ಬೇಡಿಕೆಯಿಟ್ಟ ಖದೀಮ ಪೊಲೀಸರ ಬಲೆಗೆ!

ಮೊಬೈಲ್ ಕಳವು ಮಾಡಿ, ಮಾಲೀಕನಿಗೆ ಕಲೆ ಮಾಡಿ ರೂ.1,000 ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಖದೀಮನೊಬ್ಬ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.

ಬೆಂಗಳೂರು: ಮೊಬೈಲ್ ಕದ್ದು 1,000 ರೂ. ಗೆ ಬೇಡಿಕೆಯಿಟ್ಟ ಖದೀಮ ಪೊಲೀಸರ ಬಲೆಗೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಮೊಬೈಲ್ ಕಳವು ಮಾಡಿ, ಮಾಲೀಕನಿಗೆ ಕಲೆ ಮಾಡಿ ರೂ.1,000 ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದ ಖದೀಮನೊಬ್ಬ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
 
ಎನ್ ಮನೋಜ್ (22) ಬಂಧಿತ ಆರೋಪಿಯಾಗಿದ್ದಾನೆ. ಆರೋಪಿ ಮಂಗಳೂರು-ಎಸ್‌ಎಂವಿಟಿ ಬೆಂಗಳೂರು ಎಕ್ಸ್‌ಪ್ರೆಸ್ ರೈಲಿನಲ್ಲಿ ಮೊಬೈಲ್ ಕಳವು ಮಾಡಿದ್ದ. ನಂತರ ಮಾಲೀಕರಿಗೆ ಕಲೆ ಮಾಡಿ ಫೋನ್ ಪೇ ಮೂಲಕ ರೂ.1,000 ನೀಡುವಂತೆ ಬೇಡಿಕೆ ಇಟ್ಟಿದ್ದಾನೆ.

ಮಾರ್ಚ್ 3 ರಂದು ಆರೋಪಿ ಫೋನ್ ಕದ್ದಿದ್ದು, ಮರುದಿನವೇ ಹಲಸೂರಿನಲ್ಲಿ ಪೊಲೀಸರು ಆರೋಪಿಯನ್ನು ಬಂಧನಕ್ಕೊಳಪಡಿಸಿದ್ದಾರೆ. ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 379 (ಕಳ್ಳತನ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆಯ ಮೊದಲ ವರ್ಷದ ಬಿಬಿಎ ವಿದ್ಯಾರ್ಥಿಯಾಗಿರುವ ಆರ್ ಶಶಾಂಕ್ ಮೊಬೈಲ್ ಕಳೆದುಕೊಂಡಿದ್ದರು.

ಶುಕ್ರವಾರ ಬೆಳಿಗ್ಗೆ ಬೆಂಗಳೂರಿನ ಹೋಗುತ್ತಿದ್ದೆ. ಮಲಗುವಾಗ ನನ್ನ ಫೋನ್ ಅನ್ನು ನನ್ನ ಹತ್ತಿರವೇ ಇಟ್ಟುಕೊಂಡಿದ್ದೆ. ರೈಲು ಮೈಸೂರು ತಲುಪಿದಾಗ 3.30ಕ್ಕೆ ಫೋನ್ ನೋಡಿದ್ದೆ. ಆದರೆ, ಬೆಳಗ್ಗೆ 5 ಗಂಟೆ ಸುಮಾರಿಗೆ ಚನ್ನಪಟ್ಟಣ ತಲುಪಿದಾಗ ನನ್ನ ಫೋನ್ ನಾಪತ್ತೆಯಾಗಿತ್ತು. ಫೋನ್ ಖರೀದಿಗೆ ರೂ.6,000 ಖರ್ಚು ಮಾಡಿದ್ದೆ. ಫೋನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ರೈಲ್ವೇ ಪೊಲೀಸರನ್ನು ಸಂಪರ್ಕಿಸಿದ್ದೆ.

ಆರೋಪಿಯನ್ನು ಸಂಪರ್ಕಿಸಲು ಪದೇ ಪದೇ ತಮ್ಮ ಫೋನ್'ಗೆ ಶಶಾಂಕ್ ಕರೆ ಮಾಡಿದ್ದಾರೆ. ಹಲವು ಕರೆಗಳ ಬಳಿಕ ಆರೋಪಿ ಒಮ್ಮೆ ಫೋನ್ ತೆಗೆದು ಮಾತನಾಡಿದ್ದಾನೆ. ಈ ವೇಳೆ ಫೋನ್ ಪೇ ಮೂಲಕ ರೂ.1,000 ನೀಡಿದರೆ ಫೋನ್ ಹಿಂತಿರುಗಿಸುವುದಾಗಿ ಹೇಳಿದ್ದಾನೆ. ಈ ಬಗ್ಗೆ ಶಶಾಂಕ್ ನಮಗೆ ಮಾಹಿತಿ ನೀಡಿದ್ದ. ಬಳಿಕ ಆರೋಪಿ ನೀಡಿದ್ದ ಫೋನ್ ಪೇ ನಂಬರ್'ನ್ನು ಟ್ರ್ಯಾಕ್ ಮಾಡಿದೆವು. ಆ ನಂಬರ್ ಹಲಸೂರು ಮೊಬೈಲ್ ಶಾಪ್ ಮಾಲೀಕರನ್ನು ಸಂಪರ್ಕಿಸಿತ್ತು. ಬಳಿಕ ಆ ವ್ಯಕ್ತಿಗೆ ಆರೋಪಿಯೊಂದಿಗೆ ಮಾತನಾಡಿಸುತ್ತಿರುವಂತೆ ತಿಳಿಸಿದ್ದೆವು. ನಮ್ಮ ನಿರ್ದೇಶನದಂತೆಯೇ ಅವರು ನಡೆದುಕೊಂಡರು. ಆರೋಪಿ ಹಣ ಪಡೆದುಕೊಳ್ಳಲು ಸ್ಥಳಕ್ಕೆ ಬರುತ್ತಿದ್ದಂತೆಯೇ ಆತನನನ್ನು ವಶಕ್ಕೆ ಪಡೆದುಕೊಂಡೆವು ಎಂದು ಜಿಆರ್'ಪಿ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.