ರಾಜ್ಯ

ಕೊಡಗಿನ ಫಾರೆಸ್ಟ್ರಿ ಕಾಲೇಜಿನಿಂದ ಅರಣ್ಯೀಕರಣ ಅಭಿಯಾನ, ಸ್ಥಳೀಯ ಮರಗಳಿಗೆ ಉತ್ತೇಜನ

ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜು, ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಕೊಡಗಿನಾದ್ಯಂತ ಅರಣ್ಯೀಕರಣ ಅಭಿಯಾನದಲ್ಲಿ ತೊಡಗಿದೆ. ‘ಸಸ್ಟೈನ್ ಲ್ಯಾಂಡ್‌ಸ್ಕೇಪ್ ಪ್ರಾಜೆಕ್ಟ್’ ಎಂಬ ಉಪಕ್ರಮದ ಅಡಿಯಲ್ಲಿ,...

ಕೊಡಗಿನ ಫಾರೆಸ್ಟ್ರಿ ಕಾಲೇಜಿನಿಂದ ಅರಣ್ಯೀಕರಣ ಅಭಿಯಾನ, ಸ್ಥಳೀಯ ಮರಗಳಿಗೆ ಉತ್ತೇಜನ
ಸ್ಥಳೀಯ ಮರದ ಸಸಿಗಳನ್ನು ನೆಡುತ್ತಿರುವ ಅರಣ್ಯ ಕಾಲೇಜ್ ವಿದ್ಯಾರ್ಥಿಗಳು
Published On :

ಮಡಿಕೇರಿ: ಪೊನ್ನಂಪೇಟೆಯಲ್ಲಿರುವ ಅರಣ್ಯ ಕಾಲೇಜು, ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಕೊಡಗಿನಾದ್ಯಂತ ಅರಣ್ಯೀಕರಣ ಅಭಿಯಾನದಲ್ಲಿ ತೊಡಗಿದೆ. ‘ಸಸ್ಟೈನ್ ಲ್ಯಾಂಡ್‌ಸ್ಕೇಪ್ ಪ್ರಾಜೆಕ್ಟ್’ ಎಂಬ ಉಪಕ್ರಮದ ಅಡಿಯಲ್ಲಿ, ರೈತರಿಗೆ ಸ್ಥಳೀಯ ತಳಿಗಳ ಮರಗಳ ಸಸಿಗಳನ್ನು ವಿತರಿಸಲಾಗುತ್ತಿದೆ ಮತ್ತು ಅವುಗಳನ್ನು ಜಿಲ್ಲೆಯ ಪವಿತ್ರ ತೋಪುಗಳಲ್ಲಿ ನೆಡಲು ಯೋಜನೆ ರೂಪಿಸಲಾಗಿದೆ.

'ಕರಿ ಮರ'(ಡಯೋಸ್ಪೈರೋಸ್ ಎಬೆನಮ್), 'ಕರಡಿಮರ'(ಚುಕ್ರಾಸಿಯಾ ಟ್ಯಾಬ್ಯುಲಾರಿಸ್), 'ಧೂಪ ಮರ' (ವಟೇರಿಯಾ ಇಂಡಿಕಾ), 'ಕರಿ ಧೂಪ'(ಕೆನರಿಯಂ ಸ್ಟ್ರಿಕ್ಟಮ್)... ಇವು ಒಂದು ಕಾಲದಲ್ಲಿ ಕೊಡಗಿನ ಭೂದೃಶ್ಯವನ್ನು ಆವರಿಸಿದ್ದ ಸ್ಥಳೀಯ ಮರಗಳು. 

ಈ ಸ್ಥಳೀಯ ಮರ ಪ್ರಭೇದಗಳು ಜಿಲ್ಲೆಯ ಹಳೆಯ ತಲೆಮಾರಿನ ನಿವಾಸಿಗಳಿಗೆ ಪರಿಚಿತವಾಗಿದ್ದರೂ, ಈಗಿನ ಪೀಳಿಗೆಗೆ ಅವು ವಿದೇಶಿಯಾಗಿ ಕಾಣುತ್ತಿವೆ. ನಗರೀಕರಣದ ಜೊತೆಗೆ ಮರ, ಔಷಧಿಗಳಿಗೆ ಹೆಚ್ಚಿದ ಬೇಡಿಕೆಯು ಈ ಸ್ಥಳೀಯ ಮರಗಳ ಸಂಖ್ಯೆಯನ್ನು ತೀವ್ರವಾಗಿ ಕಡಿಮೆ ಮಾಡಿದೆ. ಸ್ಥಳೀಯ ಮರಗಳ ವೈಭವ ಮರಳಿ ತರುವ ಗುರಿಯೊಂದಿಗೆ, ಸಕ್ಡೆನ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ಬೆಂಬಲದೊಂದಿಗೆ ಪೊನ್ನಂಪೇಟೆ ಅರಣ್ಯ ಕಾಲೇಜ್ ಈ ಯೋಜನೆಯನ್ನು ರೂಪಿಸಿದೆ.

ಜಿಲ್ಲೆಯ ರೈತರಿಗೆ ಸ್ಥಳೀಯ ಮರಗಳ ಸಸಿಗಳನ್ನು ವಿತರಿಸಲಾಗುತ್ತಿದೆ. ನಾವು ಈ ಉಪಕ್ರಮವನ್ನು ಕಳೆದ ಮೂರು ವರ್ಷಗಳಿಂದ ನಡೆಸುತ್ತಿದ್ದೇವೆ. ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳು ಸ್ಥಳೀಯ ಮರಗಳು ಮತ್ತು ಕೆಲವು ಆರ್ಥಿಕ ಬೆಳೆಗಳ ಮೊಳಕೆಗಳನ್ನು ಬೆಳೆಸುತ್ತಾರೆ. ವಿದ್ಯಾರ್ಥಿಗಳಿಗೆ ಸಕ್ಡೆನ್‌ನಿಂದ ವಿದ್ಯಾರ್ಥಿ ವೇತನ ಪಾವತಿಸಲಾಗುತ್ತಿದೆ ಮತ್ತು ನಂತರ ಕಾಲೇಜಿನ ನರ್ಸರಿಯಲ್ಲಿ ಬೆಳೆದ ಸಸಿಗಳನ್ನು ರೈತರಿಗೆ ವಿತರಿಸಲಾಗುತ್ತದೆ ಎಂದು ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಕೆ ನಾಣಯ್ಯ ವಿವರಿಸಿದ್ದಾರೆ.

ವಿದ್ಯಾರ್ಥಿಗಳು ಬೆಳೆದ ಸಸಿಗಳನ್ನು ರೈತರಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಶೇ. 70 ರಷ್ಟು ಸಸಿಗಳು ಸ್ಥಳೀಯ ಮರಗಳಾಗಿದ್ದರೆ, ಶೇ. 30 ರಷ್ಟು ಸಸಿಗಳು ರೈತರಿಗೆ ಸ್ವಲ್ಪ ಆರ್ಥಿಕ ಲಾಭ ತರುವ ಬೆಳೆಗಳಾಗಿವೆ" ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.