ಚಿಕ್ಕಬಳ್ಳಾಪುರ: ಯುವ ವೈದ್ಯೆಯ ‘ಅಶ್ಲೀಲ ಫೋಟೋ’ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್
ಹಣಕ್ಕಾಗಿ ಕಿಡಿಗೇಡಿಯೊಬ್ಬ ವೈದ್ಯೆಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಆಕೆಯ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಹಣಕ್ಕಾಗಿ ಕಿಡಿಗೇಡಿಯೊಬ್ಬ ವೈದ್ಯೆಯ ಅಶ್ಲೀಲ ಫೋಟೋ ಎಡಿಟ್ ಮಾಡಿ ಆಕೆಯ ತಂದೆಗೆ ಕಳುಹಿಸಿ ಬ್ಲ್ಯಾಕ್ ಮೇಲ್ ಮಾಡಿದ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ವೈದ್ಯೆಗೆ ಕರೆ ಮಾಡಿದ ಕಿಡಿಗೇಡಿಯೊಬ್ಬ ನೀವು ಆನ್ ಲೈನ್ ನಲ್ಲಿ 5 ಸಾವಿರ ಸಾಲ ಪಡೆದಿದ್ದೀರಿ…ವಾಪಸ್ ಕಟ್ಟಬೇಕು ಎಂದು ಬೆದರಿಕೆಯೊಡ್ಡಿದ್ದಾನೆ. ಆದರೆ ಯುವತಿ ನಾನು ಸಾಲ ಪಡೆದಿಲ್ಲ, ಹಾಗಾಗಿ ಯಾವುದೇ ಹಣ ಕಟ್ಟಲ್ಲ ಎಂದು ವೈದ್ಯೆ ಹೇಳಿದ್ದರು. ಮತ್ತೆ ಕರೆ ಮಾಡಿದ ಆತ, ಹಣ ನೀಡದಿದ್ದರೇ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ ಆಕೆ ಹಣ ಮರಳಿ ಪಾವತಿಸುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದರು. ಇದಾದ ಬಳಿಕ ʻನಿಮ್ಮ ಅಶ್ಲೀಲ ಫೋಟೊ ನಮ್ಮ ಬಳಿ ಇದೆ. ಅದನ್ನು ನಿಮ್ಮ ಮನೆಯವರು, ಸ್ನೇಹಿತರಿಗೆಲ್ಲ ಕಳುಹಿಸುತ್ತೇನೆʼʼ ಎಂದು ಆಕೆಗೆ ತಿಳಿಸಲಾಗಿದೆ. ಆದರೆ, ತಮ್ಮ ಫೋಟೊ ಅವರಿಗೆ ಹೇಗೆ ಸಿಗುತ್ತದೆ, ತಾನು ಆ ರೀತಿ ನಡೆದುಕೊಂಡಿದ್ದೇ ಇಲ್ಲ ಎಂದು ಧೈರ್ಯವಾಗಿದ್ದರು ಈ ವೈದ್ಯೆ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಯು ವೈದ್ಯೆಯ ಅಶ್ಲೀಲ ಫೋಟೋವನ್ನು ಆಕೆಯ ತಂದೆ ಮತ್ತು ಸಂಬಂಧಿಕರಿಗೆ ಕಳುಹಿಸಿದ ನಂತರ ದೂರು ದಾಖಲಿಸಲಾಗಿದೆ.
ಈ ನಡುವೆ, ಈ ವೈದ್ಯೆಯ ಅಸಭ್ಯ ಫೋಟೊ ಒಂದನ್ನು ಯುವತಿಯ ತಂದೆಯ ವಾಟ್ಸಾಪ್‌ಗೆ ಈ ಕಿರಾತಕ ಶೇರ್ ಮಾಡಿದ್ದಾನೆ. ಇದು ಅಶ್ಲೀಲವಾಗಿ ಎಡಿಟ್ ಮಾಡಿರುವ ಫೋಟೊ ಆಗಿದ್ದು, ಗೊತ್ತೇ ಆಗದಂತೆ ಎಡಿಟ್ ಮಾಡಲಾಗಿದೆ ಎನ್ನಲಾಗಿದೆ. ಜತೆಗೆ ಮನೆಯವರು, ಸಂಬಂಧಿಕರಿಗೂ ಈ ಫೋಟೊಗಳನ್ನು ಸೈಬರ್ ಕಳ್ಳ ಕಳುಹಿಸಿದ್ದಾನೆ. ಇದೀಗ ಯುವತಿಯ ತಂದೆ ಚಿಕ್ಕಬಳ್ಳಾಪುರದ ಸಿಇಎನ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಿಂದ ವೈದ್ಯೆಯ ಫೋಟೋ ತೆಗೆದು ಮಾರ್ಫ್ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕೃತ್ಯದ ಹಿಂದೆ ಸಂಘಟಿತ ದರೋಡೆಕೋರರ ಕೈವಾಡವಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


