ನುಡಿದಂತೆ ನಡೆಯುವವರು ನಾವು ಎಂಬುದಕ್ಕೆ ಇಂದಿನಿಂದ ಅನುಷ್ಟಾನವಾಗುತ್ತಿರುವ 'ಶಕ್ತಿ' ಯೋಜನೆಯೇ ಸಾಕ್ಷಿ: ದಿನೇಶ್ ಗುಂಡೂರಾವ್
ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಟಾನವಾಗುತ್ತಿರುವ 'ಶಕ್ತಿ' ಯೋಜನೆಯೇ ಸಾಕ್ಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಹೇಳಿದ್ದಾರೆ.

ಬೆಂಗಳೂರು: ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಟಾನವಾಗುತ್ತಿರುವ 'ಶಕ್ತಿ' ಯೋಜನೆಯೇ ಸಾಕ್ಷಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಭಾನುವಾರ ಹೇಳಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ನಮ್ಮ ಸರ್ಕಾರದ 5 ಗ್ಯಾರಂಟಿಗಳ ಪೈಕಿ ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಇಂದಿನಿಂದ ಅನುಷ್ಟಾನವಾಗಲಿದೆ. ನಾವು ಅಧಿಕಾರಕ್ಕೆ ಬಂದ 1ತಿಂಗಳ ಒಳಗೇ ಈ ಯೋಜನೆ ಅನುಷ್ಟಾನವಾಗುತ್ತಿರುವುದು ಸಾರ್ಥಕತೆ ಮೂಡಿಸಿದೆಯ ನಾನು ಉಸ್ತುವಾರಿಯಾಗಿರುವ ದಕ್ಷಿಣ ಕನ್ನಡದ ಬಿಜೈನ ಕೆಎಸ್ಆರ್'ಟಿಸಿ ನಿಗಮದಲ್ಲಿ ನಾನು ಈ ಯೋಜನೆಗೆ ಇಂದು ಚಾಲನೆ ನೀಡಲಿದ್ದೇನೆಂದು ಹೇಳಿದ್ದಾರೆ.
ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟ 5 ಗ್ಯಾರಂಟಿಗಳ ಬಗ್ಗೆ BJPಯವರು ಹಾಗೂ ಕೆಲ ಪಟ್ಟಭಧ್ರ ಹಿತಾಸಕ್ತಿಗಳು ಅಪಪ್ರಚಾರ ನಡೆಸಿದ್ದರು. ಈ ಯೋಜನೆಗಳು ಅನುಷ್ಟಾನವಾಗುವುದೇ ಇಲ್ಲ ಎಂದು ಜನರಲ್ಲಿ ಗೊಂದಲ ಮೂಡಿಸಿದ್ದರು. ಆದರೆ, ನಾವು ನುಡಿದಂತೆ ನಡೆಯುವವರು ಎಂಬುದಕ್ಕೆ ಇಂದಿನಿಂದ ಅನುಷ್ಟಾನವಾಗುತ್ತಿರುವ 'ಶಕ್ತಿ' ಯೋಜನೆಯೇ ಸಾಕ್ಷಿ.
ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಅನುಷ್ಟಾನವಾಗುತ್ತಿರುವುದು ನಾವು ಕೊಟ್ಟ ಮಾತನ್ನು ಉಳಿಸಿಕೊಳ್ಳುವ ಪ್ರತೀಕ. ಇದೇ ರೀತಿ 'ಅನ್ನಭಾಗ್ಯ','ಗೃಹಲಕ್ಷ್ಮಿ', 'ಗೃಹಜ್ಯೋತಿ' ಮತ್ತು 'ಯುವನಿಧಿ' ಯೋಜನೆಗಳು ಕೂಡ ಜಾರಿಯಾಗಲಿವೆ. ಈ ಬಗ್ಗೆ ರಾಜಕೀಯ ವಿರೋಧಿಗಳು ಎಷ್ಟೇ ಅಪಪ್ರಚಾರ ಮಾಡಲಿ, ಈ ಯೋಜನೆಗಳು ಜನರಿಗೆ ತಲುಪುವುದು ಖಚಿತ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


