ರಾಜ್ಯ ಒಕ್ಕಲಿಗರ ಸಂಘದಲ್ಲಿ ಮತ್ತೆ ಭುಗಿಲೆದ್ದ ಅಸಮಾಧಾನ: ಅಧ್ಯಕ್ಷ ಬಾಲಕೃಷ್ಣ ವಿರುದ್ಧ ಅವಿಶ್ವಾಸ ನಿರ್ಣಯ!
ರಾಜ್ಯ ಒಕ್ಕಲಿಗರ ಸಂಘದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಸಂಘದ ಪದಾಧಿಕಾರಿಗಳು ಅಧ್ಯಕ್ಷ ಬಾಲಕೃಷ್ಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ.

ಬೆಂಗಳೂರು: ರಾಜ್ಯ ಒಕ್ಕಲಿಗರ ಸಂಘದಲ್ಲಿ ಮತ್ತೆ ಅಸಮಾಧಾನ ಭುಗಿಲೆದ್ದಿದೆ. ಒಕ್ಕಲಿಗ ಸಂಘದ ಅಧ್ಯಕ್ಷ ಬಾಲಕೃಷ್ಣ ವಿರುದ್ಧ ಅಸಮಾಧಾನ ವ್ಯಕ್ತವಾಗಿದ್ದು, ಸಂಘದ ಪದಾಧಿಕಾರಿಗಳು ಅಧ್ಯಕ್ಷ ಬಾಲಕೃಷ್ಣ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಿದ್ದಾರೆ.
ಈ ಬಗ್ಗೆ ಒಕ್ಕಲಿಗ ಸಂಘದ ನಿರ್ದೇಶಕ ಕೆಂಚಪ್ಪ ಮಾತನಾಡಿ, ಸಭೆಯಲ್ಲಿ 19 ನಿರ್ದೇಶಕರು ಭಾಗಿಯಾಗಿದ್ದರು. ಇದೇ 17ರಂದು ಒಕ್ಕಲಿಗ ಸಂಘದ ಅಧ್ಯಕ್ಷ ಸ್ಥಾನಕ್ಕೆ ನಿಯಮದ ಪ್ರಕಾರ ಚುನಾವಣೆ ನಡೆಯಲಿದೆ ಎಂದು ಹೇಳಿದ್ದಾರೆ.
ಒಕ್ಕಲಿಗ ಸಂಘದ ಕಾರ್ಯಕಾರಿ ಸಮಿತಿ ಕಳೆದ ಐದು ತಿಂಗಳಿನಿಂದ ಕರೆದಿಲ್ಲ, ಈ ಕುರಿತು ಸಂಘಕ್ಕೂ ಮಾಹಿತಿ ನೀಡಿದ್ದೇವೆ. ಅಧ್ಯಕ್ಷ ಬಾಲಕೃಷ್ಣ ಸಂಘದ ಅಭಿವೃದ್ದಿಗೆ ಸಹಕರಿಸುತ್ತಿಲ್ಲ, ಇದಕ್ಕಾಗಿ ಕಾರ್ಯಕಾರಿ ಸಮಿತಿ ಕರೆದಿದ್ದೇವೆ ಎಂದು ಒಕ್ಕಲಿಗ ಸಂಘದ ನಿರ್ದೇಶಕ ಕೆಂಚಪ್ಪ ಗೌಡ ಆರೋಪಿಸಿದ್ದಾರೆ. ಅವಿಶ್ವಾಸ ನಿರ್ಣಯ ಮಂಡನೆ ಮಾಡಿ 19 ನಿರ್ದೇಶಕರು ಸಹಿ ಹಾಕಿದ್ದಾರೆ. ಕೆಂಚಪ್ಪಗೌಡ ನೇತೃತ್ವದ ಬಣದಿಂದ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ
ಇದೇ ತಿಂಗಳ 17 ರಂದು ರಾಜ್ಯ ಒಕ್ಕಲಿಗ ಸಂಘಕ್ಕೆ ನೂತನ ಅಧ್ಯಕ್ಷರ ಆಯ್ಕೆ ಸಾಧ್ಯತೆಯಿದೆ. ರಾಜ್ಯ ಒಕ್ಕಲಿಗ ಸಂಘದ ಹಾಲಿ ಅಧ್ಯಕ್ಷ ಬಾಲಕೃಷ್ಣ ವಿರುದ್ಧ 35 ನಿರ್ದೇಶಕರ ಪೈಕಿ 19 ನಿರ್ದೇಶಕರಿಂದ ಅವಿಶ್ವಾಸ ನಿರ್ಣಯ ಮಂಡನೆಯಾಗಿದೆ. ಅಧ್ಯಕ್ಷರ ಆಯ್ಕೆಗೆ 18 ನಿರ್ದೇಶಕರಿಂದ ಬೆಂಬಲವಿರಬೇಕು, ಹಾಲಿ ನಿರ್ದೇಶಕ ಕೆಂಚಪ್ಪಗೌಡರಿಗೆ 19 ನಿರ್ದೇಶಕ ಬೆಂಬಲವಿದೆ. ಈ ಹಿಂದೆ ಕೆಂಚಪ್ಪಗೌಡ ಒಕ್ಕಲಿಗ ಸಂಘದಲ್ಲಿ ಅಧ್ಯಕ್ಷರಾಗಿದ್ದರು. ಈ ಬಾರಿ ಕೆಂಚಪ್ಪಗೌಡ ಒಕ್ಕಲಿಗ ಸಂಘದಲ್ಲಿ ನಿರ್ದೇಶಕರಾಗಿದ್ದು, ಹಾಲಿ ಅಧ್ಯಕ್ಷ ಬಾಲಕೃಷ್ಣ ವಿರುದ್ಧ, ಕೆಂಚಪ್ಪಗೌಡ ಬಣದಿಂದ 19 ಜನರ ಅವಿಶ್ವಾಸ ನಿರ್ಣಯದ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ವಿರುದ್ಧದ ಅವಿಶ್ವಾಸ ಮಂಡನೆ ಮಾಡಿರುವುದು ಕಾನೂನಾತ್ಮಕವಾಗಿಲ್ಲ ಎಂದು ಸಂಘದ ಅಧ್ಯಕ್ಷ ಸಿಎಂ ಬಾಲಕೃಷ್ಣ ಆರೋಪಿಸಿದ್ದಾರೆ. ನಮ್ಮ ನೋಟಿಸ್ಗೆ ಸರಿಯಾದ ಉತ್ತರ ನೀಡಿಲ್ಲ. ಕೆಂಪೇಗೌಡ ಭವನಕ್ಕೆ ಬಂದು ಸಭೆ ನಡೆಸಲು ಒತ್ತಾಯ ಮಾಡಿದ್ದಾರೆ. ಅವರು ಕಾನೂನು ಬಾಹಿರವಾಗಿ ನಡೆದುಕೊಂಡಿದ್ದಾರೆ. ಅವರಿಗೆ ತಿಳುವಳಿಕೆ ಮೂಲಕ ಪತ್ರದ ಮುಖೇನ ತಿಳಿಸಿದ್ದೇವೆ ಎಂದು ಹೇಳಿದ್ದಾರೆ.
ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ವಿರುದ್ಧ 21 ಸಹಿಗಳು ಆಗಿವೆ. ಈ ಬಗ್ಗೆ ಮೇ 21 ರಂದು ಅವಿಶ್ವಾಸ ಮಂಡನೆ ಮಾಡಿ ಪತ್ರ ನೀಡಿದ್ದಾರೆ. ಅದಾದ 7 ದಿನಗಳ ಒಳಗೆ ನಾವು ಪತ್ರ ನೀಡಬೇಕಿತ್ತು. ಆ ವೇಳೆ ಪದಾಧಿಕಾರಿ ಒಬ್ಬರು ರಾಜೀನಾಮೆ ನೀಡಿದರು. ನಮ್ಮ ಆಡಳಿತ ಮಂಡಳಿಯಲ್ಲಿ ಅನೇಕ ಗೌರ್ನಿಂಗ್ ಕೌನ್ಸಿಲ್ ಇವೆ. ಇಲ್ಲಿ ಯಾರೂ ಕೂಡ ರಾಜೀನಾಮೆ ಪತ್ರ ಸಲ್ಲಿಸದೆ ಅವಿಶ್ವಾಸ ಮಂಡಿಸಿದ್ದಾರೆ. ಈ ಬಗ್ಗೆ ನೀಡಿರುವ ನೊಟೀಸ್‌ಗಳಿಗೆ ಅವರು ಉತ್ತರ ನೀಡಿಲ್ಲ ಎಂದರು.
ನಾವು ಸಹಕಾರ ಇಲಾಖೆಯು ಸೂಚಿಸುವಂತೆ ಕಾನೂನಾತ್ಮಕವಾಗಿ ನಡೆದುಕೊಳ್ಳುತ್ತೇವೆ. ಅವರು ನಡೆಸಿರುವ ಸಭೆ ಬೈ ಲಾ ವಿರುದ್ಧವಾಗಿದೆ. ಅವಿಶ್ವಾಸ ಮಂಡನೆಗೆ 24 ನಿರ್ದೇಶಕರು ಸಭೆಯಲ್ಲಿ ಭಾಗಿಯಾಗಬೇಕು. ಆದರೇ ಸಭೆಯಲ್ಲಿ 19 ಜನ ಮಾತ್ರ ಇದ್ದರು. ಇದು ಕಾನೂನಾತ್ಮಕವಾಗಿಲ್ಲ ಎಂದು ಬಾಲಕೃಷ್ಣ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


