ಮಹಾಲಕ್ಷ್ಮಿಲೇಔಟ್ ವೃದ್ದೆ ಹತ್ಯೆ ಪ್ರಕರಣ: ಮೂವರ ಬಂಧನ
ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

ಬೆಂಗಳೂರು: ಮನೆಯಲ್ಲಿ ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ-ಕಾಲು ಕಟ್ಟಿ ಉಸಿರುಗಟ್ಟಿಸಿ ಕೊಲೆ ಮಾಡಿ ಕತ್ತಿನಲ್ಲಿದ್ದ ಚಿನ್ನದ ಸರ, ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಬಂಧಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.
ಕಳೆದ ಮೇ.೨೮ರಂದು ಸಂಜೆ ಮಹಾಲಕ್ಷ್ಮಿ ಲೇಔಟ್ ನ ಫೋಸ್ಟ್ ಆಫೀಸ್ ಬಳಿಯ ಮನೆಯಲ್ಲಿ ಒಂಟಿಯಾಗಿ ವಾಸವಿದ್ದ ಕಮಲಮ್ಮ(೮೨) ಅವರ ಕೈ ಕಾಲು ಕಟ್ಟಿ ಕೊಲೆ ಮಾಡಿ, ಚಿನ್ನಾಭರಣಗಳನ್ನು ದೋಚಿದ್ದ ಆರೋಪಿಗಳನ್ನು ಕಾರ್ಯಾಚರಣೆ ಕೈಗೊಂಡು ಬಂಧಿಸಲಾಗಿದೆ. ಸಿದ್ದರಾಜು, ಆಶೋಕ್ ಸೇರಿ ಮೂವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತ ಸಿದ್ದರಾಜು ಮೂರು ತಿಂಗಳ ಹಿಂದೆ ಪ್ಲಂಬರ್ ಕೆಲಸ ಮಾಡಿದ್ದು, ಮನೆಯಲ್ಲಿ ವೃದ್ದೆ ಒಬ್ಬರೆ ಇದ್ದು, ಅವರ ಬಳಿ ಚಿನ್ನಾಭರಣಗಳಿವೆ ಅದನ್ನ ದೋಚಿದರೇ ಉತ್ತಮ ಜೀವನ ನಡೆಸಬಹುದು ಎಂದು ಯೋಚಿಸಿ ವಿಷಯವನ್ನು ಗೆಳೆಯ ಆಶೋಕ್ ಬಳಿ ಪ್ರಸ್ತಾಪ ಮಾಡಿ ಸಂಚು ಮಾಡಿದ್ದರು. ಕೊಲೆ ನಡೆದ ದಿನ ಎರಡು ಬಾರಿ ಮನೆ ಹತ್ತಿರ ಹೋಗಿದ್ದಾರೆ. ಮೊದಲು ಸಂಜೆ ನಾಲ್ಕು ಘಂಟೆಗೆ ಹೋಗಿ, ಖಾಲಿ ಇದ್ದ ಒಂದು ಮನೆ ಬಾಡಿಗೆ ಕೊಡ್ತಿರಾ ಬಿಸ್ಕಟ್ ಗೋಡನ್ ಮಾಡಲಿದ್ದೇವೆ ಎಂದು ಕೇಳಿದ್ದಾರೆ.
ಅಜ್ಜಿ ಇಲ್ಲವೆಂದು ಬಾಗಿಲು ತೆಗೆದಿಲ್ಲ. ಮತ್ತೆ ಸಂಜೆ ಆರು ಗಂಟೆಗೆ ವಾಪಸ್ಸು ಹೋಗಿದ್ದಾರೆ. ಈ ವೇಳೆ ಈ ಹಿಂದೆ ಬಂದಿದ್ದವರೆ ಅಲ್ಲವಾ ಎಂದು ಅಜ್ಜಿ ಬಾಗಿಲು ತೆಗೆದಿದ್ದಾರೆ. ಬಾಗಿಲು ತೆಗೆಯುತಿದ್ದಂತೆ ಅಜ್ಜಿಗೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ನಂತರ ಅಜ್ಜಿ ಬಳಿಯಿದ್ದ ಎರಡು ಚಿನ್ನದ ಸರ ಮತ್ತು ಎರಡು ಬಂಗಾರದ ಬಳೆ ದೋಚಿ ಪರಾರಿಯಾಗಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಸೆರೆಗೆ ಬಲೆ ಬಿಸಿದ್ದರು. ಈ ಕೊಲೆ ಪಾತಕಿಗಳ ಜಾಡು ಹಿಡಿದು ಹೊರಟ ಪೊಲೀಸರಿಗೆ ಆರೋಪಿಗಳು ಮೈಸೂರಿನಲ್ಲಿರುವ ಮಾಹಿತಿ ಆಧಾರದ ಮೇಲೆ ಮೈಸೂರಿಗೆ ಹೋಗಿ ಅಲ್ಲಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಅರೋಪಿಗಳನ್ನು ಬಂಧಿಸಿ ತೀವ್ರ ವಿಚಾರಣೆ ಕೈಗೊಂಡಿದ್ದಾರೆ.ಕೊಲೆಯಾದ ಕಮಲ ಅವರ ಪತಿ ಆರು ತಿಂಗಳ ಹಿಂದೆ ಮೃತಪಟ್ಟಿದ್ದು. ಇವರ ಮೂವರು ಮಕ್ಕಳು ನಗರದ ಬೇರೆಡೆ ಪ್ರತ್ಯೇಕವಾಗಿ ನೆಲೆಸಿದ್ದಾರೆ. ಹೀಗಾಗಿ ಮನೆಯಲ್ಲಿ ಕಮಲಾ ಒಂಟಿಯಾಗಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


