ರಾಜ್ಯ

ಕನ್ನಡ ಬೋಧನೆ ಕೈಬಿಟ್ಟಿಲ್ಲ, ವರದಿಗಳು ಸುಳ್ಳು: ಸೋಫಿಯಾ ಶಾಲೆ ಸ್ಪಷ್ಟನೆ

ಕನ್ನಡ ಬೋಧನೆ ಕೈಬಿಟ್ಟಿಲ್ಲ, ಈ ಕುರಿತ ಸುದ್ದಿಗಳು ಸುಳ್ಳು ಎಂದು ಸೋಫಿಯಾ ಶಾಲೆ ಸ್ಪಷ್ಟನೆ ನೀಡಿದೆ.

ಕನ್ನಡ ಬೋಧನೆ ಕೈಬಿಟ್ಟಿಲ್ಲ, ವರದಿಗಳು ಸುಳ್ಳು: ಸೋಫಿಯಾ ಶಾಲೆ ಸ್ಪಷ್ಟನೆ
ಸಂಗ್ರಹ ಚಿತ್ರ
Published On :

ಬೆಂಗಳೂರು: ಕನ್ನಡ ಬೋಧನೆ ಕೈಬಿಟ್ಟಿಲ್ಲ, ಈ ಕುರಿತ ಸುದ್ದಿಗಳು ಸುಳ್ಳು ಎಂದು ಸೋಫಿಯಾ ಶಾಲೆ ಸ್ಪಷ್ಟನೆ ನೀಡಿದೆ.

ಪೋಷಕರ ಆಗ್ರಹದ ಮೇರೆಗೆ ಕನ್ನಡ ಕೈಬಿಡುವ ಕುರಿತು ನಗರದ ಸೋಫಿಯಾ ಶಾಲೆ ಚಿಂತನೆ ನಡೆಸುತ್ತಿದೆ ಎಂಬ ಪೋಸ್ಟ್ ವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಕನ್ನಡ ಕೈಬಿಡುವಂತೆ ಇಲಾಖೆಗೆ ಆಗ್ರಹಿಸುವಂತೆ ಪೋಷಕರ ಮೇಲೆ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಅಲ್ಪನಾ ಅವರು ಒತ್ತಡ ಹೇರುತ್ತಿದ್ದಾರೆಂಬ ಆರೋಪಗಳು ಕೇಳಿ ಬಂದಿದ್ದವು.

ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಅವರು, ಶಾಲೆಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದರು. ಈ ಕುರಿತು  ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದರು.

ಆರೋಪಗಳ ಬಗ್ಗೆ ಮಾಹಿತಿ ಇತ್ತು. ಆದರೆ, ಕನ್ನಡ ಕೈಬಿಡುತ್ತಿರುವ ಕುರಿತು ಯಾವುದೇ ಔಪಚಾರಿಕ ಪತ್ರವಾಗಲೀ, ದೂರುಗಳಾಗಲಿ ಇಲಾಖೆಗೆ ಬಂದಿರಲಿಲ್ಲ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ (ಡಿಎಸ್‌ಇಎಲ್) ಮೂಲಗಳು ತಿಳಿಸಿವೆ.

ಈ ಎಲ್ಲಾ ಬೆಳವಣಿಗೆ, ಆರೋಪಗಳ ಕುರಿತು ಕೊನೆಗೂ ಶಾಲೆಯ ಪ್ರಾಂಶುಪಾಲರಾದ ಸಿಸ್ಟರ್ ಅಲ್ಪನಾ ಅವರು ಸ್ಪಷ್ಟನೆ ನೀಡಿದ್ದಾರೆ.

ಕನ್ನಡ ಭಾಷಾ ಕಲಿಕೆಯ ನಿಯಮಗಳು, 2017 ರ ಪ್ರಕಾರ, ನಾವು ನಮ್ಮ ಎಲ್ಲಾ ವಿದ್ಯಾರ್ಥಿಗಳಿಗೆ ಕನ್ನಡವನ್ನು ಎರಡನೇ ಭಾಷೆಯಾಗಿ ಕಡ್ಡಾಯವಾಗಿ ಕಲಿಸುತ್ತಿದ್ದೇವೆ. ಕನ್ನಡವನ್ನು ಎರಡನೇ ಭಾಷೆಯನ್ನಾಗಿ ಕೈಬಿಡುವ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಸುದ್ದಿಗಳು ಸುಳ್ಳು. ಇದು ಸತ್ಯಕ್ಕೆ ದೂರವಾಗಿವೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.