ಕಾರಾಗೃಹಗಳಲ್ಲಿ ಕೈದಿಗಳಿಗೆ ಸ್ಥಳಾವಕಾಶದ ಕೊರತೆ, ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ: ಗೃಹ ಸಚಿವ
ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ಸ್ಥಳಾವಕಾಶ ಕೊರತೆಯಿದ್ದು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.

ಬೆಂಗಳೂರು: ರಾಜ್ಯದ ಬಹುತೇಕ ಕಾರಾಗೃಹಗಳಲ್ಲಿ ಸ್ಥಳಾವಕಾಶ ಕೊರತೆಯಿದ್ದು. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜೈಲುಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಪರಮೇಶ್ವರ್ ಅವರು ಗುರುವಾರ ಹೇಳಿದ್ದಾರೆ.
ಬಿಜೆಪಿ ಎಂಎಲ್ಸಿ ಪ್ರತಾಪ್ ಸಿಂಹ ನಾಯಕ್ ಕೆ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ರಾಜ್ಯದಲ್ಲಿ 54 ಕಾರಾಗೃಹಗಳಿದ್ದು, ಅವುಗಳಲ್ಲಿ 9 ಕೇಂದ್ರ, 21 ಜಿಲ್ಲಾ ಕಾರಾಗೃಹ, 29 ತಾಲೂಕು ಕಾರಾಗೃಹಗಳಿವೆ. ಪ್ರಸ್ತುತ 14,237 ಬಂಧಿಗಳಿಗೆ ಅವಕಾಶವಿದೆಯಾದರೂ, ಈಗ 16,053 ಮಂದಿ ಕೈದಿಗಳು ಇದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿಯೇ ಅತಿ ದೊಡ್ಡದಾದ ಬೆಂಗಳೂರು ಕೇಂದ್ರ ಕಾರಾಗೃಹದ ಸಾಮರ್ಥ್ಯ 4,146 ಆಗಿದೆ. ಆದರೆ, ಆ ಕಾರಾಗೃಹದಲ್ಲಿ 5,261 ಕೈದಿಗಳನ್ನು ಅಲ್ಲಿ ಇರಿಸಲಾಗಿದೆ, ಸಾಮರ್ಥ್ಯಕ್ಕಿಂತಲೂ ಶೇ.26.89 ಹೆಚ್ಚಿನ ಕೈದಿಗಳನ್ನು ಕಾರಾಗೃಹದಲ್ಲಿ ಇರಿಸಲಾಗಿದೆ. 48 ಕೈದಿಗಳನ್ನು ಇರಿಸಬಹುದಾದ ಗದಗ ಜಿಲ್ಲಾ ಕಾರಾಗೃಹದಲ್ಲಿ 124 ಕೈದಿಗಳನ್ನು ಇರಿಸಲಾಗಿದೆ, ಅದೇ ರೀತಿ 40 ಕೈದಿಗಳನ್ನು ಇರಿಸಬಹುದಾದ ಸಾಮರ್ಥ್ಯವಿರುವ ಗೋಕಾಕ ಜೈಲಿನಲ್ಲಿ 83 ಕೈದಿಗಳನ್ನು ಇರಿಸಲಾಗಿದೆ.
ರಾಮನಗರ ಜಿಲ್ಲಾ ಕಾರಾಗೃಹ (ಶೇ.39.91), ಕೋಲಾರ ಜಿಲ್ಲಾ ಕಾರಾಗೃಹ (ಶೇ.68.29), ಮೈಸೂರು ಕೇಂದ್ರ ಕಾರಾಗೃಹ (ಶೇ.48.58), ಮಂಗಳೂರು ಜಿಲ್ಲಾ ಕಾರಾಗೃಹ (ಶೇ.75.71), ಚಿಕ್ಕಮಗಳೂರು ಜಿಲ್ಲಾ ಕಾರಾಗೃಹ (ಶೇ.74.50%), ಕಲಬುರಗಿ ಕೇಂದ್ರೀಯ ಕಾರಾಗೃಹಗಳ (ಶೇ.64.04).ಸೇರಿದಂತೆ ಇತರ ಕೆಲವು ಜೈಲುಗಳಲ್ಲಿ ಹೆಚ್ಚಿನ ಸಾಮರ್ಥ್ಯಕ್ಕಿಂತಲೂ ಹೆಚ್ಚಿನ ಕೈದಿಗಳನ್ನು ಇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೀದರ್‌ನಲ್ಲಿ 1,000 ಸಾಮರ್ಥ್ಯದ ಕಾರಾಗೃಹಗಳ ನಿರ್ಮಾಣವನ್ನು ಕ್ರಮ ಕೈಗೊಳ್ಳಲಾಗಿದೆ, ಜೊತೆಗೆ 8 ಕಾರಾಗೃಹಗಳಲ್ಲಿ ಹೆಚ್ಚುವರಿ ಬ್ಯಾರಕ್‌ಗಳನ್ನು ನಿರ್ಮಿಸಲಾಗುತ್ತಿದೆ, ಇದರಲ್ಲಿ ಇನ್ನೂ 1,345 ಕೈದಿಗಳು ಇರಬಹುದಾಗಿದೆ ಎಂದು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


