ರಾಜ್ಯ

ಮೆಟ್ರೋ ಪ್ರಯಾಣಿಕರ ಗಮನಕ್ಕೆ: 1 ತಿಂಗಳವರೆಗೆ ಪ್ರತಿದಿನ 2 ಗಂಟೆ ಕಾಲ ಈ ಮಾರ್ಗದ ರೈಲು ಸಂಚಾರ ಸ್ಥಗಿತ!

ನಮ್ಮ ಮೆಟ್ರೋ ಸೇವೆಯಲ್ಲಿ ಒಂದು ತಿಂಗಳ ಕಾಲ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸೂಚನೆ ನೀಡಿದೆ.

ಮೆಟ್ರೋ ಪ್ರಯಾಣಿಕರ ಗಮನಕ್ಕೆ: 1 ತಿಂಗಳವರೆಗೆ ಪ್ರತಿದಿನ 2 ಗಂಟೆ ಕಾಲ ಈ ಮಾರ್ಗದ ರೈಲು ಸಂಚಾರ ಸ್ಥಗಿತ!
ಸಂಗ್ರಹ ಚಿತ್ರ
Published On :

ಬೆಂಗಳೂರು: ನಮ್ಮ ಮೆಟ್ರೋ ಸೇವೆಯಲ್ಲಿ ಒಂದು ತಿಂಗಳ ಕಾಲ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಸೂಚನೆ ನೀಡಿದೆ.

ಮೆಟ್ರೋ ರೈಲು ನಿಗಮವು ಜುಲೈ 10 ರಿಂದ ಆಗಷ್ಟ್​ 09ರ ವರೆಗೆ ಬೈಯಪ್ಪನಹಳ್ಳಿ ಹಾಗೂ ಕೃಷ್ಣರಾಜಪುರಂ ನಿಲ್ದಾಣಗಳನ್ನು ಸಂಪರ್ಕಿಸುವ ಸಿಗ್ನಲಿಂಗ್​ ಹಾಗೂ ಇತರ ಕಾಮಗಾರಿಗಳನ್ನು ಕೈಗೊಳ್ಳುತ್ತಿದ್ದು, ಬೆಳಗ್ಗೆ 5:00 ರಿಂದ ಬೆಳಿಗ್ಗೆ 7:00 ಘಂಟೆವರೆಗೂ ಈ ಮಾರ್ಗದ ರೈಲುಗಳ ಸೇವೆಯನ್ನು ಸ್ಥಗಿತಗೊಳಿಸುತ್ತಿದೆ.

ಬೈಯಪ್ಪನಹಳ್ಳಿ-ಸ್ವಾಮಿ ವಿವೇಕಾನಂದ ರಸ್ತೆ, ಕೃಷ್ಣರಾಜಪುರ-ವೈಟ್​ಫೀಲ್ಡ್​(ಕಾಡುಗೋಡಿ) ನಡುವಿನ ರೈಲು ಸಂಚಾರವನ್ನು ಬೆಳಗ್ಗೆ 5 ರಿಂದ 7 ಘಂಟೆವರೆಗೂ ಸ್ಥಗಿತಗೊಳಿಸುತ್ತಿದೆ.

ಬೆಳಗ್ಗೆ 7 ಘಂಟೆಯ ನಂತರ ಬೈಯಪ್ಪನಹಳ್ಳಿ-ಕೆಂಗೇರಿ, ಕೃಷ್ಣರಾಜಪುರ-ವೈಟ್​ಫೀಲ್ಡ್​(ಕಾಡುಗೋಡಿ) ನಡುವಿನ ರೈಲು ಸಂಚಾರವು ಎಂದಿನಂತೆ ರಾತ್ರಿ 11 ಘಂಟೆವರೆಗೆ ಇರಲಿದೆ.

ಹಸಿರು ಬಣ್ಣದ ಮಾರ್ಗದ ರೈಲು ಸೇವೆಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಬಿಎಂಆರ್'ಸಿಎಲ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.