ವಿದ್ಯಾರ್ಥಿ ಬಸ್ ಪಾಸ್ ವಿತರಿಸಲು ಪ್ರಾರಂಭಿಸಿದ ಬಿಎಂಟಿಸಿ; ಅರ್ಜಿ ಸಲ್ಲಿಸುವುದು ಹೇಗೆ ತಿಳಿಯಿರಿ...
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2023-24ನೇ ಸಾಲಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲು ಪ್ರಾರಂಭಿಸಿದೆ.

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) 2023-24ನೇ ಸಾಲಿಗೆ ಆನ್‌ಲೈನ್ ಮತ್ತು ಆಫ್‌ಲೈನ್‌ನಲ್ಲಿ ರಿಯಾಯಿತಿ ದರದಲ್ಲಿ ವಿದ್ಯಾರ್ಥಿ ಬಸ್ ಪಾಸ್‌ಗಳನ್ನು ವಿತರಿಸಲು ಪ್ರಾರಂಭಿಸಿದೆ.
ಈ ಹಿಂದೆ ಟಿಎನ್ಐಇ ವರದಿ ಮಾಡಿದಂತೆ, ವಿದ್ಯಾರ್ಥಿನಿಯರು ಶಕ್ತಿ ಯೋಜನೆಯಡಿಯಲ್ಲಿಯೇ ಉಚಿತವಾಗಿ ಪ್ರಯಾಣಿಸಲು ಬಸ್ ನಿಗಮ ಕೇಳಿದೆ. ಹೀಗಾಗಿ ಅವರು ವಿದ್ಯಾರ್ಥಿ ಬಸ್ ಪಾಸ್‌ಗಳಿಗೆ ಚಿಂತಿಸುವ ಅಗತ್ಯವಿಲ್ಲ.
ವಿದ್ಯಾರ್ಥಿಗಳು ತಮ್ಮ ಬಸ್ ಪಾಸ್‌ಗಳನ್ನು ಸೇವಾ ಸಿಂಧು ಪೋರ್ಟಲ್‌ನಿಂದ (https://sevasindhu.karnataka.gov.in) ಅಥವಾ BMTC ವೆಬ್‌ಸೈಟ್‌ಗೆ (https://mybmtc.karnataka.gov.in) ಲಾಗಿನ್ ಮಾಡುವ ಮೂಲಕ ಆನ್‌ಲೈನ್‌ನಲ್ಲಿ ಪಡೆಯಬಹುದು.
ಅರ್ಜಿ ಸಲ್ಲಿಸುವುದು ಹೇಗೆ?

https://sevasindhu.karnataka.gov.in ಅಥವಾ BMTC ವೆಬ್‌ಸೈಟ್‌ಗೆ https://mybmtc.karnataka.gov.in ಕ್ಕೆ ಭೇಟಿ ನೀಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಬಿಎಂಟಿಸಿ ವೆಬ್‌ಸೈಟ್‌ನಲ್ಲಿ ವಿದ್ಯಾರ್ಥಿ ಬಸ್‌ಪಾಸ್ ಆಯ್ಕೆಯನ್ನು ಕ್ಲಿಕ್ ಮಾಡಿದರೆ, ಮತ್ತೊಂದು ವಿಂಡೋ ತೆರೆಯಲಿದೆ. ಇಲ್ಲಿ ನಿಮ್ಮ ನಿಮ್ಮ ವ್ಯಾಸಂಗದ ಆಯ್ಕೆಯನ್ನು ಕ್ಲಿಕ್ಕಿಸಿದರೆ ನಂತರ ಅರ್ಜಿ ನಮೂನೆ ತೆರೆಯಲಿದೆ. ಅಲ್ಲಿ ಕೇಳಿದ ವಿವರಗಳನ್ನು ನಮೂದಿಸಿ, ನಿಮ್ಮ ಫೋಟೊ, ಶಾಲಾ/ಕಾಲೇಜು ರಸೀತಿ, ಅರ್ಜಿ ನಮೂನೆಯನ್ನು ಅಪ್‌ಲೋಡ್ ಮಾಡಬೇಕಾಗುತ್ತದೆ.

ಒಂದು ವೇಳೆ ಆಫ್‌ಲೈನ್‌ನಲ್ಲಿ ಪಡೆಯಲು ಇಚ್ಛಿಸುವವರು ಕೆಂಪೇಗೌಡ ಬಸ್ ನಿಲ್ದಾಣ, ಆನೇಕಲ್ ಬಸ್ ನಿಲ್ದಾಣ, ಕೆಂಗೇರಿ ಸಂಚಾರ ಮತ್ತು ಸಾರಿಗೆ ನಿರ್ವಹಣಾ ಕೇಂದ್ರಗಳು (ಟಿಟಿಎಂಸಿ), ಶಾಂತಿನಗರ ಟಿಟಿಎಂಸಿ, ಹೊಸಕೋಟೆ ಡಿಪೋ, ಎಲೆಕ್ಟ್ರಾನಿಕ್ ಸಿಟಿ ಡಿಪೋಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ಪಡೆಯಬಹುದಾಗಿದೆ.
ಶುಕ್ರವಾರದಿಂದ ಬಸ್ ಪಾಸ್ ನೀಡುವ ಪ್ರಕ್ರಿಯೆ ಆರಂಭವಾಗಿದ್ದು, ಶಾಲಾ-ಕಾಲೇಜುಗಳು ಪುನರಾರಂಭಗೊಂಡಿರುವುದರಿಂದ 1ನೇ ತರಗತಿಯಿಂದ 10ನೇ ತರಗತಿ, ಪಿಯುಸಿ, ಪದವಿ ಮತ್ತು ಪಿಜಿ ವಿದ್ಯಾರ್ಥಿಗಳು ಹಾಗೂ ಪಿಎಚ್‌ಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು 2022-23ನೇ ಸಾಲಿಗೆ ನೀಡಲಾದ ತಮ್ಮ ಹಳೆಯ ಪಾಸ್‌ಗಳನ್ನು ತೋರಿಸಿ ಅಥವಾ ಪ್ರಸಕ್ತ ವರ್ಷದ ಪ್ರವೇಶ ರಸೀದಿಗಳನ್ನು ತೋರಿಸುವ ಮೂಲಕ ಪ್ರಯಾಣಿಸಲು ಬಿಎಂಟಿಸಿ ಸದ್ಯಕ್ಕೆ ಅನುಮತಿ ನೀಡಿದೆ. ಜುಲೈ 15ರವರೆಗೆ ವಿದ್ಯಾರ್ಥಿಗಳು ಈ ಮಾರ್ಗವನ್ನು ಅನುಸರಿಸಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


