ಯುದ್ಧ ವಿಮಾನ ದುರಂತ: ಅಂತಿಮ ಸಂಸ್ಕಾರಕ್ಕಾಗಿ ಬೆಳಗಾವಿಗೆ ಬಂದ ವಿಂಗ್ ಕಮಾಂಡರ್ ಪಾರ್ಥಿವ ಶರೀರ
ಮಧ್ಯಪ್ರದೇಶದಲ್ಲಿ ಸುಖೋಯ್-30ಎಂಕೆಐ ಮತ್ತು ಮಿರಾಜ್-2000 ಯುದ್ಧ ವಿಮಾನಗಳ ನಡುವೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ವಿಂಗ್ ಕಮಾಂಡರ್ ಹನುಮಂತ್ ರಾವ್ ಸಾರಥಿ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಬೆಳಗಾವಿಗೆ ತರಲಾಗಿದೆ.

ಬೆಳಗಾವಿ: ಮಧ್ಯಪ್ರದೇಶದಲ್ಲಿ ಸುಖೋಯ್-30ಎಂಕೆಐ ಮತ್ತು ಮಿರಾಜ್-2000 ಯುದ್ಧ ವಿಮಾನಗಳ ನಡುವೆ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದ ವಿಂಗ್ ಕಮಾಂಡರ್ ಹನುಮಂತ್ ರಾವ್ ಸಾರಥಿ ಅವರ ಮೃತದೇಹವನ್ನು ಭಾನುವಾರ ಮಧ್ಯಾಹ್ನ ಬೆಳಗಾವಿಗೆ ತರಲಾಗಿದೆ.
ಭಾರತೀಯ ವಾಯುಪಡೆಯ (ಐಎಎಫ್) ಎರಡು ಮುಂಚೂಣಿ ಯುದ್ಧ ವಿಮಾನಗಳು ಶನಿವಾರ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯಲ್ಲಿ ತರಬೇತಿ ಕಾರ್ಯಾಚರಣೆಯ ಸಂದರ್ಭದಲ್ಲಿ ಪತನಗೊಂಡಿದ್ದವು. ಇದರ ಪರಿಣಾಮವಾಗಿ ವಿಂಗ್ ಕಮಾಂಡರ್ ಸಾರಥಿ ಸಾವಿಗೀಡಾಗಿದ್ದರು ಮತ್ತು ಇತರ ಇಬ್ಬರು ಪೈಲಟ್‌ಗಳು ಸುರಕ್ಷಿತವಾಗಿ ಬಂದರು.
ವಿಶೇಷ ಐಎಎಫ್ ವಿಮಾನದ ಮೂಲಕ ಸಾರಥಿ ಅವರ ಪಾರ್ಥಿವ ಶರೀರವನ್ನು ತರಲಾಗಿದ್ದು, ನಂತರ ಅದನ್ನು ಗಣೇಶಪುರದಲ್ಲಿರುವ ಅವರ ಮನೆಗೆ ಕೊಂಡೊಯ್ಯಲಾಗುತ್ತದೆ.
ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿರುವ ಟ್ಯಾಕ್ಟಿಕ್ಸ್ ಮತ್ತು ಏರ್ ಕಾಂಬಾಟ್ ಡೆವಲಪ್‌ಮೆಂಟ್ ಎಸ್ಟಾಬ್ಲಿಷ್‌ಮೆಂಟ್ (ಟಿಎಸಿ-ಡಿಇ) ಬೋಧಕ ವಿಂಗ್ ಕಮಾಂಡರ್ ಆಗಿದ್ದ ಸಾರಥಿ ಅವರ ನಿವಾಸದಲ್ಲಿ ಕತ್ತಲೆ ಕವಿದಿದೆ. ಅವರ ಅಕಾಲಿಕ ನಿಧನದಿಂದ ಕುಟುಂಬಸ್ಥರು ಮತ್ತು ಬಂಧುಗಳ ಆಕ್ರಂದನ ಮುಗಿಲು ಮುಟ್ಟಿದೆ.
35 ವರ್ಷದ ಸಾರಥಿ ಅವರಿಗೆ ಪತ್ನಿ, ಮೂರು ವರ್ಷದ ಮಗಳು ಮತ್ತು ಒಂದು ವರ್ಷದ ಮಗ ಇದ್ದಾರೆ.
ಸಾರಥಿ ಅವರ ತಂದೆ ರೇವಣಸಿದ್ದಪ್ಪ ಸಾರಥಿ ನಿವೃತ್ತ ಗೌರವ ಕ್ಯಾಪ್ಟನ್ ಮತ್ತು ಸಹೋದರ ಪ್ರವೀಣ್ ಸಾರಥಿ ಗ್ರೂಪ್ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


