"ಈಗಾಗಲೇ ನನಗೆ ವಯಸ್ಸಾಗಿದೆ, ಕಾಂಕ್ರೀಟ್ ರಸ್ತೆಯಿಂದ ನನ್ನನ್ನು ರಕ್ಷಿಸಿ": ಗೋಕರ್ಣದ ರಥದ ಮನವಿ!
ಕಾಂಕ್ರೀಟ್ ರಸ್ತೆ ನಿರ್ಮಾಣದ ವಿರುದ್ಧವಾಗಿ ಗೋಕರ್ಣ ಮಠದ ಐತಿಹಾಸಿಕ ರಥದ ಮನವಿಯ ಫೋಟೊ ಎಲ್ಲೆಡೆ ವೈರಲ್ ಆಗತೊಡಗಿದೆ.

ಗೋಕರ್ಣ: ಕಾಂಕ್ರೀಟ್ ರಸ್ತೆ ನಿರ್ಮಾಣದ ವಿರುದ್ಧವಾಗಿ ಗೋಕರ್ಣ ಮಠದ ಐತಿಹಾಸಿಕ ರಥದ ಮನವಿಯ ಫೋಟೊ ಎಲ್ಲೆಡೆ ವೈರಲ್ ಆಗತೊಡಗಿದೆ.
ರಥಬೀದಿಗೆ ಕಾಂಕ್ರೀಟ್ ಹಾಕದಂತೆ ಅಧಿಕಾರಿಗಳಿಗೆ ಈ ಐತಿಹಾಸಿಕ ರಥ ಮನವಿ ಮಾಡಿದ್ದು, ರಥದ ಸಹಿತ ಇರುವ ಈ ಮನವಿಯ ಫೋಟೋ ವೈರಲ್ ಆಗತೊಡಗಿದೆ.
ರಥಬೀದಿಗೆ ಕಾಂಕ್ರೀಟ್ ಹಾಕುವ ಅಧಿಕಾರಿಗಳ ನಿರ್ಧಾರದ ಬಗ್ಗೆ ಗೋಕರ್ಣದಲ್ಲಿ ಅಭಿಪ್ರಾಯಭೇದ ಉಂಟಾಗಿದೆ.
ಕೆಲವು ಮಂದಿಯ ಪ್ರಕಾರ ಕಾಂಕ್ರೀಟ್ ರಸ್ತೆ ರಥಕ್ಕೆ ಉತ್ತಮವಾದುದ್ದಾಗಿದ್ದರೆ, ಕೆಲವರು ಬೃಹತ್ ರಥಕ್ಕೆ ಕಾಂಕ್ರೀಟ್ ರಸ್ತೆ ಸರಿಹೊಂದಿರುವುದಿಲ್ಲ ಎಂದು ಹೇಳುತ್ತಾರೆ.
ಕಾಂಕ್ರೀಟ್ ರಸ್ತೆಯಲ್ಲಿ ಅಂಚುಗಳಲ್ಲಿ ಇಳಿಜಾರುಗಳನ್ನು ಹೊಂದಿದೆ. ಗೋಕರ್ಣ ಮಠದಲ್ಲಿ ಎರಡು ರಥಗಳಿದ್ದು, ಬೃಹತ್ ರಥವೊಂದರ ವಿನ್ಯಾಸ, ಆ ರಥ ಕಾಂಕ್ರೀಟ್ ರಸ್ತೆಯಲ್ಲಿ ಚಾಲನೆ ಮಾಡುವುದಕ್ಕೆ ಹೊಂದಾಣಿಕೆಯಾಗುವುದಿಲ್ಲ. ಗೋಕರ್ಣ ರಥದಲ್ಲಿ ಬೀಳದಂತೆ ಸಮತೋಲನ ಕಾಯ್ದುಕೊಳ್ಳಲು ಮಧ್ಯದಲ್ಲಿ ಚಕ್ರಗಳಿವೆ.
ಜನರ ಸುರಕ್ಷತೆಗಾಗಿ ಎರಡು ಪ್ರತ್ಯೇಕ ಚಕ್ರಗಳನ್ನು ಅಳವಡಿಸಲಾಗಿದ್ದು, ಒಂದು ವೇಳೆ ರಥ ಚಲನೆಯ ಸಮಯದಲ್ಲಿ ಓರೆಯಾದರೂ ಉರುಳಿಕೊಳ್ಳುವುದಿಲ್ಲ. ಆದರೆ ಕಾಂಕ್ರಿಟ್ ರಸ್ತೆಗಳಲ್ಲಿ ರಥ ಓರೆಯಾದರೆ ಇಡೀ ಒತ್ತಡ ಮದ್ಯದಲ್ಲಿರುವ ಚಕ್ರಗಳ ಮೇಲೆ ಬೀಳುತ್ತದೆ. ಈ ವಿಷಯವನ್ನು ದೇವಾಲಯದ ಅಧಿಕಾರಿಗಳಿಗೆ ತಿಳಿಸಿದ್ದೇವೆ ಎಂದು ಗೋಕರ್ಣದ ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
ಗೋಕರ್ಣದ ಮಂದಿ ಸರಿಯಾದ ಚರಂಡಿ ವ್ಯವಸ್ಥೆಗೆ ಬೇಡಿಕೆ ಇಡುತ್ತಿದ್ದಾರೆ. ಕೆಲವು ವರ್ಷಗಳಿಂದ ಗೋಕರ್ಣದಲ್ಲಿ ಹೋಟೆಲ್ ಗಳು ಈಟರಿಗಳು ಹೆಚ್ಚಾಗಿದೆ. ಪರಿಣಾಮ ರಥಬೀದಿಯಲ್ಲಿ ಇರುವ ಹಲವು ಬಾವಿಗಳು ಕಲುಶಿತಗೊಂಡಿದೆ. ರಥಬೀದಿಯಲ್ಲಿ ಅರ್ಚಕರ ಹಲವು ಕುಟುಂಬಳಿದ್ದು, ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ. ಕಾಂಕ್ರಿಟ್ ರಸ್ತೆ ಮಾಡುವ ಬದಲು ಗೋಕರ್ಣದಲ್ಲಿ ಚರಂಡಿ ವ್ಯವಸ್ಥೆ ಉತ್ತಮಗೊಳಿಸುವತ್ತ ಗಮನ ಹರಿಸಬೇಕು ಎಂದು ಕಾರ್ಯಕರ್ತರೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


