ದ್ರಾಕ್ಷಿ ಸಂಗ್ರಹಿಸಿಡಲು ಕೋಲ್ಡ್ ಸ್ಟೋರೆಜ್ ಕೊರತೆ; ರಾಜ್ಯಕ್ಕೆ ಸಾವಿರಾರು ಕೋಟಿ ರೂ. ವ್ಯಾಪಾರ ನಷ್ಟ: ಜೆಡಿಎಸ್
ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.

ಬೆಂಗಳೂರು: ದ್ರಾಕ್ಷಿ ಸಂಗ್ರಹಿಸಿಡಲು ಅಗತ್ಯವಾಗಿರುವ ಕೋಲ್ಡ್ ಸ್ಟೋರೆಜ್ ಗಳ ಅಲಭ್ಯತೆಯಿಂದಾಗಿ ನಮ್ಮ ರಾಜ್ಯವು ಸಾವಿರಾರು ಕೋಟಿ ರೂ. ಗಳ ವ್ಯಾಪಾರ-ವಹಿವಾಟು ಕಳೆದುಕೊಳ್ಳುತ್ತಿದೆ. ಇದರಿಂದಾಗಿ ಬೆಳೆಗಾರರು ಅನಿವಾರ್ಯವಾಗಿ ಹಣ್ಣನ್ನು ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದಾರೆ ಎಂದು ಜೆಡಿಎಸ್ ಹೇಳಿದೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ರಾಜ್ಯದಲ್ಲಿ ವರ್ಷಕ್ಕೆ ಬೆಳೆಯುವ ದ್ರಾಕ್ಷಿಯಲ್ಲಿ 73%ನಷ್ಟು ವಿಜಯಪುರ ಜಿಲ್ಲೆಯೊಂದರಿಂದಲೇ ಬರುತ್ತಿದೆ. ಕೋಲ್ಡ್ ಸ್ಟೋರೆಜ್ ಗಳಿಲ್ಲದಿರುವುದರಿಂದ ರೈತರು ದ್ರಾಕ್ಷಿಯನ್ನು ಜಿಲ್ಲೆಯಿಂದ ನೆರೆ ರಾಜ್ಯಕ್ಕೆ ಕಳಿಸುತ್ತಿದ್ದಾರೆ ಎಂದು ಪಕ್ಷದ ಶಾಸಕ ದೇವನಾಂದ್ ಚವ್ಹಾಣ್ ಅವರು ಸದನದಲ್ಲಿ ಪ್ರಶ್ನಿಸುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರ ಈ ಕಡೆ ಗಮನಹರಿಸಬೇಕಿದೆ ಎಂದು ಒತ್ತಾಯಿಸಿದೆ.
ಇಷ್ಟು ದೊಡ್ಡ ಮೊತ್ತದ ವ್ಯಾಪಾರ ನಮ್ಮ ರಾಜ್ಯದಲ್ಲೆ ನಡೆದರೆ ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಳ್ಳಬಹುದು. ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಗುತ್ತದೆ. ರಾಜ್ಯ ಸರ್ಕಾರದ ಖಜಾನೆಗೆ ತೆರಿಗೆ ಹರಿದು ಬರಲಿದೆ. ಈ ನಿಟ್ಟಿನಲ್ಲಿ ಸರ್ಕಾರ ಇಷ್ಟೊತ್ತಿಗಾಗಲೆ, ಕೋಲ್ಡ್ ಸ್ಟೋರೆಜ್ ಗಳನ್ನು ನಿರ್ಮಿಸಬೇಕಿತ್ತು ಎಂದು ಜೆಡಿಎಸ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


