ವಿಧಾನ ಸೌಧ, ವಿಕಾಸ ಸೌಧ ಸುರಕ್ಷತೆಗೆ ವಿಶೇಷ ಕ್ರಮ: ಗೃಹ ಸಚಿವ ಆರಗ ಜ್ಞಾನೇಂದ್ರ
ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು, ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.

ಬೆಂಗಳೂರು: ರಾಜ್ಯದ ಶಕ್ತಿಕೇಂದ್ರ ಕಟ್ಟಡಗಳಾದ ವಿಧಾನ ಸೌಧ ಹಾಗೂ ವಿಕಾಸ ಸೌಧಕ್ಕೆ ಆಗಮಿಸುವವರ ಬಗ್ಗೆ ಇಪ್ಪತ್ನಾಲ್ಕು ಗಂಟೆಗಳ ಕಣ್ಗಾವಲು ಇದ್ದು, ಭದ್ರತೆ ಬಗ್ಗೆ ಯಾವುದೇ ರೀತಿಯ ರಾಜಿಯಿಲ್ಲ, ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಇಂದು ವಿಧಾನ ಪರಿಷತ್ ನಲ್ಲಿ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಗೋವಿಂದರಾಜು ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಟ್ಟಡಗಳ ಪ್ರವೇಶ ಸ್ಥಳಗಳಲ್ಲಿ ಅಳವಡಿಸಿದ ತಪಾಸಣಾ ಯಂತ್ರೋಪಕರಣಗಳು, ಬಹಳ ಹಳೆಯ ಕಾಲದವುಗಳಾಗಿದ್ದು ಅವುಗಳನ್ನು ಬದಲಾಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
"ವಿಧಾನ ಸೌಧ ಹಾಗೂ ವಿಕಾಸ ಸೌಧ ಕಟ್ಟಡಗಳಿಗೆ ಪ್ರವೇಶ ಪಡೆಯುವವರ ಬಗ್ಗೆ, ಎಲ್ಲಾ ರಕ್ಷಣಾ ಪ್ರೋಟೋಕಾಲ್ ನಿಯಮಗಳ ಪ್ರಕಾರ ತಪಾಸಣೆ ನಡೆಸಲಾಗುತ್ತಿದ್ದು, ದಿನದ 24 ಗಂಟೆಗಳ ಲ್ಲಿಯೂ ಮೂರು ಪಾಳಿಗಳಲ್ಲಿ, ಪೊಲೀಸರು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದೂ ಸದನಕ್ಕೆ ತಿಳಿಸಿದರು.
ನೂತನ ತಪಾಸಣಾ ಯಂತ್ರೋಪಕರಣ ಗಳನ್ನು ಅಳವಡಿಸಲು, ಟೆಂಡರ್ ಕರೆಯಲಾಗಿದೆ ಎಂದೂ ಸಚಿವರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


