ಹಿರಿಯ ಮಗ ಆದಿಲ್ ಹತ್ಯೆಗೂ ಯತ್ನಿಸಿದ್ದಾರೆ: ಮೊಹಮ್ಮದ್ ಫಾಜಿಲ್ ತಂದೆ ಆರೋಪ
ನನ್ನ ಹಿರಿಯ ಮಗ ಆದಿಲ್ ನನ್ನೂ ಹತ್ಯೆ ಮಾಡಲು ಯತ್ನ ನಡಸಿದ್ದಾರೆಂದು 2022ರ ಆಗಸ್ಟ್ನಲ್ಲಿ ಸುರತ್ಕಲ್ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಜಿಲ್ನ ತಂದೆ ಉಮ್ಮರ್ ಫಾರೂಕ್ ಅವರು ಆರೋಪಿಸಿದ್ದಾರೆ.

ಮಂಗಳೂರು: ನನ್ನ ಹಿರಿಯ ಮಗ ಆದಿಲ್ ನನ್ನೂ ಹತ್ಯೆ ಮಾಡಲು ಯತ್ನ ನಡಸಿದ್ದಾರೆಂದು 2022ರ ಆಗಸ್ಟ್ನಲ್ಲಿ ಸುರತ್ಕಲ್ನಲ್ಲಿ ಹತ್ಯೆಗೀಡಾದ ಮೊಹಮ್ಮದ್ ಫಾಜಿಲ್ನ ತಂದೆ ಉಮ್ಮರ್ ಫಾರೂಕ್ ಅವರು ಆರೋಪಿಸಿದ್ದಾರೆ.
ಈ ಸಂಬಂಧ ವಿಡಿಯೋ ಮೂಲಕ ಹೇಳಿಕೆ ನೀಡಿರುವ ಉಮ್ಮರ್ ಫಾರೂಖ್ ಅವರು, ಫಾಜಿಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಕೆಲಸಗಳಿಗೆ ಆದಿಲ್ ಉಲ್ಲಾಳಕ್ಕೆ ಹೋಗಿಲ್ಲ. ಕೆಲಸ ಬಳಿಕ ಮನೆಗೆ ಹಿಂತಿರುಗುತಿತದ್ದ ಗಣೇಶಪುರದಲ್ಲಿ ಕೆಲವರು ದಾಳಿ ನಡೆಸಿದ್ದಾರೆ. ಉದ್ದೇಶಪೂರ್ವಕವಾಗಿ ಕೆಲವರು ಕಾರಿಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ. ಇದನ್ನು ಸಣ್ಣ ಗಲಾಟೆಯೆಂದು ಬಿಂಬಿಸಲಾಗುತ್ತಿದೆ. ಆದರೆ, ಇದೊಂದು ಪೂರ್ವಯೋಜಿತ ಕೊಲೆ ಯತ್ನವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಕಾರಿನೊಳಗೆ ನುಗ್ಗಿದ್ದವರ ಕೈಯಗಳಲ್ಲಿ ಶಸ್ತ್ರಾಸ್ತ್ರಗಳು ಕಂಡು ಬಂದಿತ್ತು. ನನ್ನ ಮಗನ ಮುಖ ಹಾಗೂ ಎದೆ ಭಾಗದಲ್ಲಿ ಗಾಯಗಳಾಗಿವೆ. ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ್ ಕೂಡ ಘಟನೆಯನ್ನು ಸಣ್ಣ ಪ್ರಕರಣ ಎಂದು ಬಣ್ಣಿಸಿದ್ದಾರೆಂದು ತಿಳಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಹಿಂದುತ್ವವಾದಿಗಳು ಫಾಜಿಲ್ನನ್ನು ಹತ್ಯೆ ಮಾಡಿದ್ದಾರೆಂದು ಈ ಹಿಂದೆ ವಿಎಚ್ಪಿ ನಾಯಕ ಶರಣ್ ಪಂಪ್ವೆಲ್ ಹೇಳಿದ್ದರು. ಈ ಸಂಬಂಧ ನಾನು ಪೊಲೀಸರಿಗೆ ದೂರು ನೀಡಿದ್ದೇನೆಂದು ಹೇಳಿದ್ದಾರೆ.
ಈ ನಡುವೆ ದಾಳಿ ಸಂಬಂಧ ಆದಿಲ್ ಅವರು ದೂರು ನೀಡಿದ್ದು, ನಾಗೇಶ್ ಎಂಬಾತ ದಾಳಿ ವೇಳೆ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ದಾಳಿ ನಡೆಸಿದ ವ್ಯಕ್ತಿಗಳು ನನಗೆ ಜೀವ ಬೆದರಿಗೆ ಹಾಕಿದ್ದರು ಎಂದು ಹೇಳಿದ್ದು, ಪ್ರೀತನ್ ಶೆಟ್ಟಿ, ಆಕಾಶ್, ಪ್ರಕಾಶ್, ಹರ್ಷಿತ್ ಹಾಗೂ ಅಪರಿಚಿತ ವ್ಯಕ್ತಿಗಳ ಹೆಸರನ್ನು ಹೆಸರಿಸಿದ್ದಾರೆಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


