ರಾಜ್ಯ

ಕಲಬುರಗಿ: ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ; ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಅಮಾನತು

ಕಲಬುರಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಕರೆ ವಿವರಗಳನ್ನು(ಸಿಡಿಆರ್) ಸೋರಿಕೆ ಮಾಡಿದ್ದಕ್ಕಾಗಿ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಕಲಬುರಗಿ: ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ; ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ ಅಮಾನತು
ಸಾಂದರ್ಭಿಕ ಚಿತ್ರ
Published On :

ಕಲಬುರಗಿ: ಕಲಬುರಗಿ ನಗರದಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರ ಕರೆ ವಿವರಗಳನ್ನು(ಸಿಡಿಆರ್) ಸೋರಿಕೆ ಮಾಡಿದ್ದಕ್ಕಾಗಿ ಮಹಿಳಾ ಅಧಿಕಾರಿ ಸೇರಿದಂತೆ ಇಬ್ಬರು ಪೊಲೀಸ್ ಹೆಡ್ ಕಾನ್‌ಸ್ಟೆಬಲ್‌ಗಳನ್ನು ಬುಧವಾರ ಅಮಾನತುಗೊಳಿಸಲಾಗಿದೆ.

ಕಲಬುರಗಿ ಮಹಿಳಾ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ತುಕಾರಾಂ ಮತ್ತು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವೇದ ರತ್ನ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಪೊಲೀಸ್ ಆಯುಕ್ತ ಚೇತನ್ ಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

ಆರೋಪಿ ಹೆಡ್ ಕಾನ್ ಸ್ಟೇಬಲ್ ಗಳು ಸಿಡಿಆರ್ ಅನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದರು. ಮಹಿಳಾ ಪೊಲೀಸ್ ಪೇದೆಯ ಭಾವಿ ಪತಿಗೆ ಸಿಡಿಆರ್ ನೀಡಲಾಗಿತ್ತು. ಈ ಬೆಳವಣಿಗೆಯ ನಂತರ ಮದುವೆ ರದ್ದುಗೊಳಿಸಲಾಗಿದೆ.

ಸಿಡಿಆರ್ ಪಡೆದ ವ್ಯಕ್ತಿ ತಾನು ಮಹಿಳಾ ಪೊಲೀಸ್ ಪೇದೆಯನ್ನು ಪ್ರೀತಿಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದು, ಅದಕ್ಕಾಗಿಯೇ ಅವರ ಭಾವಿ ಪತಿಗೆ ಕಳುಹಿಸಿದ್ದಾಗಿ ಮೂಲಗಳು ತಿಳಿಸಿವೆ.

ಮಹಿಳಾ ಪೊಲೀಸ್ ಪೇದೆಯ ಸಿಡಿಆರ್ ಸೋರಿಕೆ ಘಟನೆ ಡಿಸೆಂಬರ್ 22 ರಂದು ಕಲಬುರಗಿ ನಗರದಲ್ಲಿ ಬೆಳಕಿಗೆ ಬಂದಿತ್ತು.

ಸಂತ್ರಸ್ತ ಮಹಿಳಾ ಪೊಲೀಸ್ ಪೇದೆ, ಕಲಬುರಗಿ ನಗರದ ಪೊಲೀಸ್ ಕಮಿಷನರ್ ಆರ್.ಚೇತನ್ ಕುಮಾರ್ ಅವರಿಗೆ ದೂರು ನೀಡಿದ್ದು, ತಮಗೆ ‘ಮಾನಸಿಕ ಕಿರುಕುಳ’ ನೀಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.