ರಾಜ್ಯ

ನಮ್ಮ ಚಿಂತೆ ಬಿಡಿ, ಇನ್ನು 6 ತಿಂಗಳಲ್ಲಿ ಬಿಜೆಪಿಯಲ್ಲಿ ‌ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ: ಪ್ರಿಯಾಂಕ್ ಖರ್ಗೆ

ಇನ್ನು ಆರು ತಿಂಗಳಲ್ಲಿ ‌ಬಿಜೆಪಿ ಉಳಿಯಲ್ಲ. ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಮ್ಮ ಚಿಂತೆ ಬಿಡಿ, ಇನ್ನು 6 ತಿಂಗಳಲ್ಲಿ ಬಿಜೆಪಿಯಲ್ಲಿ ‌ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ: ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ
Published On :

ಕಲಬುರಗಿ: ಇನ್ನು ಆರು ತಿಂಗಳಲ್ಲಿ ‌ಬಿಜೆಪಿ ಉಳಿಯಲ್ಲ. ನಾನು ಇದಕ್ಕೆ ಗ್ಯಾರಂಟಿ ಕೊಡುತ್ತೇನೆ ಎಂದು‌ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ನಗರದಲ್ಲಿ ಸೋಮವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಆರೇಳು ತಿಂಗಳಲ್ಲಿ ಕಾಂಗ್ರೆಸ್‌ ಸರ್ಕಾರ ಪತನವಾಗುತ್ತದೆ ಎಂದಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು ನೀಡಿದ್ದಾರೆ

ನಮಗೂ ರಾಜಕೀಯ ‌ಮಾಡುವುದಕ್ಕೆ ಬರುತ್ತದೆ. ಅವರೊಬ್ಬರಿಗೆ ಮಾತ್ರ ಬರುತ್ತದೆಯಾ? ನಮಗೆ ಬರುವುದಿಲ್ಲವೇ? ನಾವೂ 140 ವರ್ಷಗಳಿಂದ ಪಕ್ಷವನ್ನು ಕಟ್ಟಿಕೊಂಡು ಬರುತ್ತಿದ್ದೇವೆ ಎಂದರು. ಕರ್ನಾಟಕದಲ್ಲಿ ಅವರದ್ದು (ಬಿಜೆಪಿ) ಏನೂ ನಡೆದಿಲ್ಲ. ಮುಂದೆಯೂ ನಡೆಯಲ್ಲ. ಇನ್ನು ಆರು ತಿಂಗಳಲ್ಲಿ ಎಷ್ಟು ಜನ ಉಳಿದುಕೊಳ್ಳುತ್ತಾರೆ ನೋಡಿ' ಎಂದರು.

ಎಷ್ಟು ಜನ ಸಂಪರ್ಕದಲ್ಲಿ ಇದ್ದಾರೆ ಪ್ರಶ್ನೆಗೆ,  ನನಗೆ ಗೊತ್ತಿಲ್ಲ. ಬಿಜೆಪಿಯವರನ್ನು ಕೇಳಿ. ಎಷ್ಟು ಜನ ಅಸಮಾಧಾನ ಇದ್ದಾರೆ ಎಂಬುದನ್ನು ಅವರನ್ನು ಕೇಳಿ ಎಂದು ಸಚಿವರು ಹೇಳಿದರು.  ನೀವು ನಮ್ಮ ಸರ್ಕಾರದ ಚಿಂತೆ ಬಿಡಿ, ಚಾಲೆಂಜ್ ಮಾಡ್ತೀನಿ ಇನ್ನಾರು ತಿಂಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಇರಲ್ಲ ಎಂದಿದ್ದಾರೆ. ಇನ್ನಾರು ತಿಂಗಳಲ್ಲಿ ಬಿಜೆಪಿಯಲ್ಲಿ ಎಷ್ಟು ಜನ ಉಳಿಯುತ್ತಾರೆ ನೋಡಿ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.