ರಾಜ್ಯ

ಗಂಡ-ಹೆಂಡ್ತಿ ಜಗಳ: ಕೋಪದಿಂದ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಭೂಪ, FIR ದಾಖಲು

ಗಂಡ-ಹೆಂಡ್ತಿ ಜಗಳ ವಿಕೋಪಕ್ಕೆ ತಿರುಗಿ ಕೋಪದಿಂದ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಗಂಡ-ಹೆಂಡ್ತಿ ಜಗಳ: ಕೋಪದಿಂದ ಪತ್ನಿ ಕೈ ಬೆರಳನ್ನೇ ಕಚ್ಚಿತಿಂದ ಭೂಪ, FIR ದಾಖಲು
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಗಂಡ-ಹೆಂಡ್ತಿ ಜಗಳ ವಿಕೋಪಕ್ಕೆ ತಿರುಗಿ ಕೋಪದಿಂದ ಪತಿ ಮಹಾಶಯನೊಬ್ಬ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿರುವ ವಿಲಕ್ಷಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರಿನ ಕೊಣನಕುಂಟೆ (Konanakunte) ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಂಡ-ಹೆಂಡತಿ ಜಗಳದ ವೇಳೆ ಪತಿರಾಯ ತನ್ನ ಪತ್ನಿಯ ಕೈ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ಆರೋಪಿ ಪತಿಯನ್ನು ವಿಜಯಕುಮಾರ್ ಎಂದು ಗುರುತಿಸಲಾಗಿದ್ದು, ಸಂತ್ರಸ್ಥೆ ಪತ್ನಿ ಹೆಸರು ಪುಷ್ಪಾ ಎಂದು ಹೇಳಲಾಗಿದೆ. 

ಪೊಲೀಸರ ಪ್ರಕಾರ ಈ ಘಟನೆ ಜುಲೈ 28 ರಂದು ನಡೆದಿದೆ. ಪುಷ್ಪಾ ಎಂಬ ಮಹಿಳೆಯು ಗಂಡನ ಕಾಟ ತಾಳಲಾರದೇ ತನ್ನ ಮಗನ ಜೊತೆಗೆ ಬೇರೆ ಮನೆ ಮಾಡಿ ವಾಸವಿದ್ದರು. ಆದರೂ ಕೂಡ ಆಕೆಗೆ ಗಂಡನ ಕಾಟದಿಂದ ಮುಕ್ತಿ ಸಿಕ್ಕಿರಲಿಲ್ಲ. ಅದರಂತೆ ಇಬ್ಬರು ಜಗಳ ಮಾಡುತ್ತಿದ್ದಾರೆ. ಈ ವೇಳೆ ಏಕಾಎಕಿ ಪತಿ ವಿಜಯಕುಮಾರ್ ಪತ್ನಿಯ ಬೆರಳನ್ನೇ ಕಚ್ಚಿ ತಿಂದಿದ್ದಾನೆ. ನಂತರ ನಿನ್ನನ್ನೂ ಕೂಡ ಕೊಂದು ಇದೇ ರೀತಿಯಾಗಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಪುಷ್ಪಾ ಮತ್ತು ವಿಜಯ್​ಕುಮಾರ್​ಗೆ 23 ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಕೆಲ ವರ್ಷಗಳಿಂದ ಪತ್ನಿಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಿದ್ದ ಎನ್ನಲಾಗಿದೆ. ಈ ಹಿನ್ನಲೆ ಗಂಡನಿಂದ ಬೇಸತ್ತು ತನ್ನ ಮಗನ ಜೊತೆ ಬೇರೆಡೆ ಮನೆ ಮಾಡಿಕೊಂಡಿದ್ದರು. ಕಳೆದ‌ ತಿಂಗಳ ಜುಲೈ 28ನೇ ತಾರೀಖು ಪತಿ ವಿಜಯಕುಮಾರ್ ಪತ್ನಿ ಇದ್ದ ಮನೆಗೆ ಹೋಗಿ ಜಗಳ ತೆಗೆದಿದ್ದ. ಈ ವೇಳೆ ಪತ್ನಿಯ ಎಡಗೈ ಬೆರಳನ್ನೇ ಕಚ್ಚಿ ಕಚ್ಚಿ ತಿಂದಿದ್ದಾನಂತೆ. ಅಲ್ಲದೇ ರೌಡಿಶೀಟರ್​ಗಳನ್ನ ಬಿಟ್ಟು ಕೊಲೆ ಬೆದರಿಕೆ ಹಾಕಿರುವ ಆರೋಪದ ಮೇಲೆ ಪತ್ನಿ ಪುಷ್ಪ ಸದ್ಯ ಪತಿಯ ವಿರುದ್ಧ ಕೋಣನಕುಂಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.