7 ವರ್ಷಗಳ ಬಳಿಕ ಕಣ್ಮಿಣಿಕೆ ಹಂತ-1 ಯೋಜನೆ ಪುನರಾರಂಭಕ್ಕೆ ಬಿಡಿಎ ಮುಂದು!
ಅಪಾರ ನಷ್ಟ ಹಿನ್ನೆಲೆಯಲ್ಲಿ ಏಳು ವರ್ಷಗಳ ಹಿಂದೆ ಗುತ್ತಿಗೆದಾರರು ಕೈಬಿಟ್ಟಿದ್ದ ಮೈಸೂರು ರಸ್ತೆಯ ಕಣ್ಮಿಣಿಕೆ ಹಂತ-1 ಯೋಜನೆಗೆ ಮರುಜೀವ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ಬೆಂಗಳೂರು: ಅಪಾರ ನಷ್ಟ ಹಿನ್ನೆಲೆಯಲ್ಲಿ ಏಳು ವರ್ಷಗಳ ಹಿಂದೆ ಗುತ್ತಿಗೆದಾರರು ಕೈಬಿಟ್ಟಿದ್ದ ಮೈಸೂರು ರಸ್ತೆಯ ಕಣ್ಮಿಣಿಕೆ ಹಂತ-1 ಯೋಜನೆಗೆ ಮರುಜೀವ ನೀಡಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.
ಇತ್ತೀಚೆಗೆ ನಡೆದ ಬಿಡಿಎ ಆಡಳಿತ ಮಂಡಳಿ ಸಭೆಯಲ್ಲಿ ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಚುನಾವಣಾ ನೀತಿ ಸಂಹಿತೆ ತೆರವುಗೊಂಡ ಬಳಿಕ ಯೋಜನೆಗೆ ಗುತ್ತಿಗೆ ಕರೆಯಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.
ನಗರದಾದ್ಯಂತ ಪ್ರಾರಂಭವಾದ 167 ಕೋಟಿ ರೂ.ಗಳ ವಸತಿ ಯೋಜನೆಗಳ ಪೈಕಿ, ಈ ಯೋಜನೆಯೊಂದು ಹಳ್ಳ ಹಿಡಿದಿತ್ತು. ಯೋಜನೆಯಡಿಯಲ್ಲಿ ಒಟ್ಟು 608 1ಬಿಹೆಚ್'ಕೆ, 384 2ಬಿಹೆಚ್'ಕೆ ಮತ್ತು 320 3ಬಿಹೆಚ್'ಕೆ ಫ್ಲಾಟ್‌ಗಳು ನಿರ್ಮಾಣವಾಗಬೇಕಿತ್ತು. ಗುತ್ತಿಗೆದಾರರಾದ ದೀಪಕ್ ಕೇಬಲ್ಸ್ (ಭಾರತ) ಅವರು, ಯೋಜನೆಯನ್ನು ಡಿಸೆಂಬರ್ 2014 ರೊಳಗೆ ಪೂರ್ಣಗೊಳಿಸಬೇಕಿತ್ತು. 19 ಬ್ಲಾಕ್‌ಗಳ ಪೈಕಿ 7 ಬ್ಲಾಕ್‌ಗಳನ್ನು (ಪ್ರತಿ ಬ್ಲಾಕ್‌ಗೆ 40 ಫ್ಲಾಟ್‌ಗಳು) ಪೂರ್ಣಗೊಳಿಸಿದ್ದರು. ಎಲ್ಲವೂ 1ಬಿಹೆಚ್'ಕೆ ವರ್ಗದಲ್ಲಿವೆ ಎಂದು ಉನ್ನತ ಬಿಡಿಎ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಫ್ಲಾಟ್ ಗಳಲ್ಲಿ ಒಳಾಂಗಣವಿಲ್ಲದೆ ಮೂಲಭೂತ ರಚನೆಗಳಷ್ಟನ್ನೇ ನಿರ್ಮಾಣ ಮಾಡಲಾಗಿತ್ತು. ಇದಕ್ಕಾಗಿ ರೂ.20 ಕೋಟಿ ಗಳನ್ನು ನೀಡಲಾಗಿತ್ತು. ಆದರೆ, ನಷ್ಟವಾಗಿದೆ ಎಂದು ಹೇಳಿ, ಗುತ್ತಿಗೆಯಿಂದ ಹೊರ ನಡೆದರು ಎಂದು ಹೇಳಿದ್ದಾರೆ.
ಇದಾದ ಒಂದು ವರ್ಷದ ನಂತರ ಮೇವರಿಕ್ ಹೋಲ್ಡಿಂಗ್ಸ್ ಹೊಸ ಟೆಂಡರ್‌ಗೆ ಪ್ರತಿಕ್ರಿಯೆ ನೀಡಿ, ಯೋಜನೆ ಪೂರ್ಣಗೊಳಿಸಲು ಮುಂದೆ ಬಂದಿತು. ಆದರೆ, ಬಿಡಿಎ ಇದಕ್ಕೆ ಒಪ್ಪಿಗೆ ನೀಡಲಿಲ್ಲ.
ನಗರದಾದ್ಯಂತ ಹಲವಾರು ಫ್ಲಾಟ್‌ಗಳನ್ನು ಪೂರ್ಣಗೊಳಿಸಲಾಗಿದೆ. ಈ ಫ್ಲ್ಯಾಟ್ ಗಳ ಮಾರಾಟಕ್ಕೆ ಸಿದ್ಧತೆಗಳ ನಡೆಸಲಾಗುತ್ತಿದೆ. ಕಣ್ಮಿನಿಕೆ ಹಂತ-2, 3 ಮತ್ತು 4ದ ಫ್ಲಾಟ್‌ಗಳ ಖರೀದಿಗೆ ಜನರು ಮುಂದೆ ಬರುತ್ತಿಲ್ಲ. ಈ ಫ್ಲ್ಯಾಟ್ ಗಳ ಮಾರಾಟದತ್ತ ಗಮನಹರಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಸ್ಥಗಿತಗೊಂಡಿರುವ ಕಾಮಗಾರಿಯಿಂದಾಗಿ ಬಿಡಿಎ ಕೋಟಿಗಟ್ಟಲೆ ನಷ್ಟವನ್ನು ಅನುಭವಿಸಿದೆ. ಫ್ಲ್ಯಾಟ್ ಗಳ ಮಾರಾಟ ಮಾಡಿ ಆದಾಯ ಗಳಿಸಬೇಕಿತ್ತು. ಆಸ್ತಿ ತೆರಿಗೆಯನ್ನೂ ಸಂಗ್ರಹಿಸಬೇಕಿತ್ತು. ಹೀಗಾಗಿ ಫ್ಲ್ಯಾಟ್ ನಿರ್ಮಾಣ ಕಾರ್ಯವನ್ನು ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


