ಟ್ವಿಟ್ಟರ್ ಖಾತೆದಾರರೊಬ್ಬರ ಟ್ವೀಟ್: ಚುನಾವಣಾ ಆಯೋಗಕ್ಕೆ ಜೆಡಿಎಸ್ ದೂರು
ಜಾತ್ಯತೀತ ಜನತಾದಳ(JD(S) ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಜೆಡಿಎಸ್ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ದೂರು ನೀಡಿದ್ದು ಟ್ವಿಟ್ಟರ್ ಬಳಕೆದಾರರ ಖಾತೆಯನ್ನು ತಡೆಹಿಡಿಯುವಂತೆ ಕೋರಿದೆ.

ಬೆಂಗಳೂರು: ಜಾತ್ಯತೀತ ಜನತಾದಳ(JD(S) ಮುಖ್ಯ ಚುನಾವಣಾಧಿಕಾರಿಗಳಿಗೆ ದೂರು ನೀಡಿದೆ. ಟ್ವಿಟ್ಟರ್ ಬಳಕೆದಾರರೊಬ್ಬರು ಜೆಡಿಎಸ್ ನಾಯಕರಾದ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ವಿರುದ್ಧ ಮಾಡಿರುವ ಟ್ವೀಟ್ ಗೆ ಸಂಬಂಧಿಸಿದಂತೆ ದೂರು ನೀಡಿದ್ದು ಟ್ವಿಟ್ಟರ್ ಬಳಕೆದಾರರ ಖಾತೆಯನ್ನು ತಡೆಹಿಡಿಯುವಂತೆ ಕೋರಿದೆ.
ಸೋಷಿಯಲ್ ಮೀಡಿಯಾದಲ್ಲಿ ಜೆಡಿಎಸ್ ಮತ್ತು ಅದರ ನಾಯಕರ ಬಗ್ಗೆ ತಪ್ಪು ಸುಳ್ಳು ಮಾಹಿತಿಯನ್ನು ಅಂಜನ್ ಎಂಬುವವರು ನೀಡುತ್ತಿದ್ದಾರೆ. ಅವರ ಅಕೌಂಟ್ ನ್ನು ತಡೆಹಿಡಿಯಬೇಕೆಂದು ಕೋರಿದೆ.

@Anjan94150697 ಎಂಬ ಖಾತೆದಾರರು ಇತ್ತೀಚೆಗೆ ಟ್ವೀಟ್ ಮಾಡಿ ಹೆಚ್ ಡಿ ಕುಮಾರಸ್ವಾಮಿಯವರು ಸಚಿವ ಆರ್ ಅಶೋಕ್ ಅವರನ್ನು ಶಾಸಕ ಸಾ ರಾ ಮಹೇಶ್ ಜೊತೆಗೆ ಭೇಟಿ ಮಾಡಿದ್ದಾರೆ. ಗುಪ್ತವಾಗಿ ಗುಜರಾತ್ ನ ಉದ್ಯಮಿಯ ಮೂಲಕ ಪಕ್ಷಕ್ಕೆ ಧನಸಹಾಯ ಪಡೆದು ಕಾಂಗ್ರೆಸ್ ವಿರುದ್ಧ ಹೋರಾಡಲು ನೋಡುತ್ತಿದ್ದಾರೆ ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


