ಸಿಎಂ ಬೊಮ್ಮಾಯಿ ವಿರುದ್ಧ ಸ್ಪರ್ಧಿಸದಂತೆ ಯಾವ ಸ್ವಾಮೀಜಿಗಳು ನನಗೆ ಸಲಹೆ ನೀಡಿಲ್ಲ: ವಿನಯ್ ಕುಲಕರ್ಣಿ
ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸದಂತೆ ಪಂಚಮಸಾಲಿ ಮಠಾಧೀಶರು ಸಲಹೆ ನೀಡಿದ್ದಾರೆ ಎಂಬ ವರದಿಯನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಅಲ್ಲಗಳೆದಿದ್ದಾರೆ.

ಹುಬ್ಬಳ್ಳಿ: ಶಿಗ್ಗಾವಿ ವಿಧಾನಸಭಾ ಕ್ಷೇತ್ರದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಸ್ಪರ್ಧಿಸದಂತೆ ಪಂಚಮಸಾಲಿ ಮಠಾಧೀಶರು ಸಲಹೆ ನೀಡಿದ್ದಾರೆ ಎಂಬ ವರದಿಯನ್ನು ಮಾಜಿ ಸಚಿವ ವಿನಯ್ ಕುಲಕರ್ಣಿ ಅಲ್ಲಗಳೆದಿದ್ದಾರೆ.
ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ವಿನಯ್ ಕುಲಕರ್ಣಿ, ಶಿಗ್ಗಾವಿಯಿಂದ ಸ್ಪರ್ಧಿಸುವ ಸಂಬಂಧ ಯಾವುದೇ ಶ್ರೀಗಳು ತಮಗೆ ಏನನ್ನೂ ಹೇಳಿಲ್ಲ ಎಂದು ತಿಳಿಸಿದ್ದಾರೆ. ಶಿಗ್ಗಾವಿ ಅಥವಾ ಪಕ್ಷ ಬಯಸುವ ಯಾವುದೇ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ತಿಳಿಸಿದರು.
ಸೋಮವಾರ ಪಂಚಮಸಾಲಿ ಶ್ರೀಗಳ ನಿರ್ದೇಶನದ ಮೇರೆಗೆ ಕುಲಕರ್ಣಿ ಬೊಮ್ಮಾಯಿ ವಿರುದ್ಧ ಸ್ಪರ್ಧಿಸಲು ನಿರಾಕರಿಸಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಕುಲಕರ್ಣಿ ಅವರನ್ನು ಸಿಎಂ ವಿರುದ್ಧ ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಪಂಚಮಸಾಲಿ ಮುಖಂಡವನ್ನಾಗಿ ಬಿಂಬಿಸಲಿದೆ ಎಂಬ ಊಹಾಪೋಹಾಗಳು ಕಳೆದ ಕೆಲ ತಿಂಗಳಿನಿಂದ ಹರಿದಾಡುತ್ತಿವೆ. ಈ ಸಮುದಾಯಕ್ಕೆ 2ಎ ವರ್ಗದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಮುಂಚೂಣಿಯಲ್ಲಿದೆ.
ಎಲ್ಲಿಂದಲಾದರೂ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದರೂ, ಕುಲಕರ್ಣಿ ಅವರು ತಮ್ಮ ತವರು ಕ್ಷೇತ್ರ ಧಾರವಾಡದಿಂದ ಸ್ಪರ್ಧಿಸಲು ಹೆಚ್ಚು ಒಲವು ತೋರಿದ್ದಾರೆ ಎಂಬ ವರದಿಗಳಿವೆ, ಅವರು ಈ ಹಿಂದೆ ಎರಡು ಬಾರಿ ಆಯ್ಕೆಯಾಗಿದ್ದಾರೆ. ಅಲ್ಲದೆ, ಜಿಲ್ಲೆ ಪ್ರವೇಶಕ್ಕೆ ನ್ಯಾಯಾಲಯ ನಿಷೇಧ ಹೇರಿದ್ದರೂ ಧಾರವಾಡದಿಂದ ಅವರನ್ನು ಕಣಕ್ಕಿಳಿಸುವಂತೆ ಅವರ ಬೆಂಬಲಿಗರು ನಾಯಕತ್ವದ ಮೇಲೆ ಒತ್ತಡ ಹೇರುತ್ತಿದ್ದಾರೆ.
ಪಕ್ಷದ ಮೂಲಗಳ ಪ್ರಕಾರ ಶಿಗ್ಗಾಂವಿಯಿಂದ ಸ್ಪರ್ಧಿಸುವಂತೆ ನಾಯಕತ್ವ ಕೇಳಿದಾಗ ಧಾರವಾಡದಿಂದ ಪತ್ನಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದರು. ಆದರೆ ಪಕ್ಷ ಪತಿ-ಪತ್ನಿ ಇಬ್ಬರಿಗೂ ಟಿಕೆಟ್ ನೀಡಲು ನಿರಾಕರಿಸಿದೆ. ಹಾಗಾಗಿ ಶಿಗ್ಗಾಂವಿಯಿಂದ ಸ್ಪರ್ಧಿಸಬೇಕೋ ಬೇಡವೋ ಎಂಬ ಗೊಂದಲದಲ್ಲಿ ಕುಲಕರ್ಣಿ ಇದ್ದಾರೆ ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


