ಮಂಗಳೂರು: ಪಿಎಫ್ ಐ, ಸಿಎಫ್ ಐ ಸಂಘಟನೆಯ 12 ಕಚೇರಿಗಳಿಗೆ ಬೀಗ ಜಡಿದ ಪೊಲೀಸರು
ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವುದರೊಂದಿಗೆ ಮಂಗಳೂರು ಒಂದರಲ್ಲಿಯೇ ಅದರ 12 ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.

ಮಂಗಳೂರು: ಕೇಂದ್ರ ಸರ್ಕಾರ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವುದರೊಂದಿಗೆ ಮಂಗಳೂರು ಒಂದರಲ್ಲಿಯೇ ಅದರ 12 ಕಚೇರಿಗಳನ್ನು ಪೊಲೀಸರು ಸೀಲ್ ಮಾಡಿದ್ದಾರೆ.
ಬುಧವಾರ ಸಂಜೆಯಿಂದ ಪಿಎಫ್ ಐ ಸಂಘಟನೆಯ 10 ಕಚೇರಿಗಳು, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ (ಸಿಎಫ್ ಐ) ಮತ್ತು ಸಂಘಟನೆಯ ಮಾಹಿತಿ ಅಂಡ್ ಎಂಪವರ್ಮೆಂಟ್ ಕಚೇರಿಗಳನ್ನು ಬಂದ್ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನಗರದ ಕಸಬಾ ಬೆಂಗರೆ, ಚೊಕ್ಕಬೆಟ್ಟು, ಕಾಟಿಪಳ್ಳ ಎರಡನೆ ಬ್ಲಾಕ್, ಅಡ್ಡೂರ್, ಕಿನ್ನಿಪದವು, ಕೆ.ಸಿ.ರೋಡ್, ಇನೋಳಿ, ಮಲ್ಲೂರು, ಕುದ್ರೋಳಿಯ ಪಿಎಫ್ಐ ಹಾಗೂ ನಗರದ ರಾವ್ ಸರ್ಕಲ್ ಬಳಿಯ ಇನ್ಫೋರ್ಮೇಶನ್ ಆಯಂಡ್ ಎಂಪವರ್ಮೆಂಟ್ ಕಚೇರಿಗೆ ಬೀಗ ಜಡಿಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


