ರಾಜ್ಯ

ಬೆಂಗಳೂರಿನಲ್ಲಿ ಮಳೆ, ಬಿಸಿಲು, ಶೆಕೆ, ಚಳಿ: ಹವಾಮಾನ ತಜ್ಞರೂ ಕಕ್ಕಾಬಿಕ್ಕಿ!

ದೇಶದ ಟೆಕ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಹಬ್, ಆರೋಗ್ಯಕರ ಹವಾಮಾನ ಹೀಗೆ ಹಲವು ಕಾರಣಗಳಿಂದ ಬೆಂಗಳೂರಿಗೆ ಹಲವು ಹೆಮ್ಮೆಯ ಗರಿಗಳಿವೆ.

ಬೆಂಗಳೂರಿನಲ್ಲಿ ಮಳೆ, ಬಿಸಿಲು, ಶೆಕೆ, ಚಳಿ: ಹವಾಮಾನ ತಜ್ಞರೂ ಕಕ್ಕಾಬಿಕ್ಕಿ!
ಬೆಂಗಳೂರು ಮಳೆ
Published On :

ಬೆಂಗಳೂರು: ದೇಶದ ಟೆಕ್ ಕ್ಯಾಪಿಟಲ್, ಸ್ಟಾರ್ಟ್ ಅಪ್ ಹಬ್, ಆರೋಗ್ಯಕರ ಹವಾಮಾನ ಹೀಗೆ ಹಲವು ಕಾರಣಗಳಿಂದ  
ಬೆಂಗಳೂರಿಗೆ ಹಲವು ಹೆಮ್ಮೆಯ ಗರಿಗಳಿವೆ. 

ಆದರೆ ಈಗ ಬೆಂಗಳೂರಿನ ಆಗಸ, ಹವಾಮಾನ ತಜ್ಞರಿಗೆ ಅನೂಹ್ಯವಾದ ವಿಚಿತ್ರವಾಗಿ ಕಾಣುವ ಅಧ್ಯಯನ ಪ್ರದೇಶವೂ ಆಗಿ ಬದಲಾಗತೊಡಗಿದೆ.

ದೇಶಾದ್ಯಂತ ಇರುವ ಭಾರತೀಯ ಹವಾಮಾನ ಇಲಾಖೆ ಅಧಿಕಾರಿಗಳು, ಬೆಂಗಳೂರಿನ ಹವಾಮಾನವದ ಅಧ್ಯಯನಕ್ಕೆ ಉತ್ಸುಕರಾಗಿದ್ದು, ತಾಪಮಾನ ವ್ಯತ್ಯಾಸ, ಮಳೆಯ ಪ್ಯಾಟ್ರನ್, ಬದಲಾವಣೆಗಳು, ಸ್ಥಳಾಕೃತಿಗಳನ್ನು ಅಧ್ಯಯನ ಮಾಡಲು ಆಸಕ್ತಿ ತೋರುತ್ತಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಮಳೆ: ಐಟಿ ಸಿಟಿ ಬಂಡವಾಳ ಬಹಿರಂಗಪಡಿಸಿದ ದಾಖಲೆ ಮಳೆ; ಜಲಾವೃತಗೊಂಡ ಮನೆಯಲ್ಲಿ ಸಿಲುಕಿ ವೃದ್ಧ ಸಾವು

ಬೆಂಗಳೂರಿನ ಒಂದು ಭಾಗದಲ್ಲಿ 15 ಸೆಂಟೀಮೀಟರ್ ಮಳೆಯಾದರೆ, ಸಿಬಿಡಿಯಂತಹ ಮತ್ತೊಂದು ಭಾಗದಲ್ಲಿ ಶೂನ್ಯ ಮಳೆಯಾಗಿರುತ್ತದೆ. ವಿಶಿಷ್ಟ ಹವಾಮಾನ ಬದಲಾವಣೆಗಳಿಂದ ಬೆಂಗಳೂರಿನ ಹವಾಮಾನ ಅಧ್ಯಯನ ಯೋಗ್ಯವಾಗಿದೆ. ನಗರದಲ್ಲಿ  ಅತ್ಯಂತ ಕಡಿಮೆ ದೂರವಿರುವ ಎರಡು ಪ್ರದೇಶಗಳ ನಡುವೆಯೂ ಮಳೆಯಲ್ಲಿ ವ್ಯತ್ಯಾಸ ಕಂಡುಬರುತ್ತಿರುವುದು ಮಾತ್ರವಲ್ಲದೇ, ತಾಪಮಾನವೂ ವ್ಯತ್ಯಾಸವಾಗುತ್ತಿದೆ. ಈ ರೀತಿಯ ಬದಲಾವಣೆಗಳು ಸಾಮಾನ್ಯವಾಗಿ ಗಿರಿಧಾಮಗಳಲ್ಲಿ ಕಂಡುಬರುತ್ತದೆ. ಆದರೆ ಬೆಂಗಳೂರಿನ ರಚನೆ ಈ ರೀತಿಯಾಗಿಲ್ಲ. ಆದ್ದರಿಂದ ಬೆಂಗಳೂರಿನ ಹವಾಮಾನ ಎಲ್ಲರ ಗಮನ ಸೆಳೆಯುತ್ತಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.