ಹುಬ್ಬಳ್ಳಿ: ಎಲ್ಲರ ಗಮನ ಸೆಳೆಯುತ್ತಿರುವ ಆನೆ ಆಕೃತಿಯ ಈ ಮರ, ಈಗ ಸೆಲ್ಫಿ ಕೇಂದ್ರ!
ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ?

ಹುಬ್ಬಳ್ಳಿ: ಹುಬ್ಬಳ್ಳಿಯ ದಾಜಿಬಾನ್ ಪೇಟೆಯಲ್ಲಿರುವ ಮರವೊಂದು ಈಗ ಸ್ಥಳೀಯರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಅಂಥದ್ದೇನಿದೆ ಈ ಮರದಲ್ಲಿ ಅಂತೀರಾ? ಆ ಮರ ಆನೆಯ ಆಕೃತಿಯಲ್ಲಿದ್ದು ಸೆಲ್ಫಿ ಪ್ರಿಯರಿಗೆ ಫೋಟೋ ಕ್ಲಿಕ್ಕಿಸಿಕೊಳ್ಳುವುದಕ್ಕೆ ಅತ್ಯುತ್ತಮ ತಾಣವಾಗಿ ಮಾರ್ಪಾಡಾಗಿದೆ.
ಆನೆಯ ಸೊಂಡಿಲ ಮಾದರಿಯಲ್ಲಿ ಈ ಮರ ಬೆಳೆದಿದ್ದು, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವವರ ಜೊತೆಗೆ ಈ ಮರಕ್ಕೆ ಪೂಜೆ ಸಲ್ಲಿಸುವ ಭಕ್ತಾದಿಗಳ ಸಂಖ್ಯೆಯೂ ಹೆಚ್ಚಳವಾಗಿದೆ. ಈ ಮರಕ್ಕೆ ಜನರು ಹಣ್ಣು, ಹೂವುಗಳನ್ನು ಅರ್ಪಿಸಲು ಪ್ರಾರಂಭಿಸಿದ್ದಾರೆ.
ಈ ಬೇವಿನ ಮರ ಹಲವು ವರ್ಷಗಳಿಂದ ಇದೆ. ಆದರೆ ಬೆಳೆಯುತ್ತಾ ಅದು ಆನೆಯ ಸೊಂಡಿಲ ಆಕೃತಿ ಪಡೆದಿದ್ದರಿಂದ ಸ್ಥಳೀಯ ವರ್ತಕರು ಅದಕ್ಕೆ ಕಣ್ಣು ಹಾಗೂ ದಂತಗಳನ್ನು ಬರೆದಿದ್ದಾರೆ. ಕೆಲವು ತಿಂಗಳ ಹಿಂದೆ ಬಣ್ಣ ಹಾಕಿದ ನಂತರ ಈ ಮರ ಮತ್ತಷ್ಟು ಜನಪ್ರಿಯತೆ/ ಖ್ಯಾತಿ ಗಳಿಸಿದ್ದು, ಆ ಪ್ರದೇಶದಲ್ಲಿ ಸಂಚರಿಸುವ ಮಂದಿ ವಾಹನ ನಿಲ್ಲಿಸಿ ತಲೆಬಾಗಿ ನಮಿಸಿ ಮುಂದೆ ಸಾಗುತ್ತಾರೆ.
ಈ ಬಗ್ಗೆ ಮಾತನಾಡಿರುವ ಕಲಬುರಗಿ ಮ್ಯಾಚಿಂಗ್ ಸೆಂಟರ್ ನ ಮಾಲಿಕರಾಗಿರುವ ಉದಯ್ ಕಲಬುರಗಿ, ಈ ಮರ ತಮ್ಮ ಮಳಿಗೆಯ ಪಕ್ಕದಲ್ಲೇ ಇದ್ದು, ಬಾಲ್ಯದಿಂದಲೂ ಈ ಮರವನ್ನು ನೋಡುತ್ತಿರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಜನರಿಗೆ ಎಚ್ಚರಿಕೆ ನೀಡಲು ವಿಶಿಷ್ಟ ಉಪಾಯ: 'ಒಡೆದ ದೇವರ ಫೋಟೋ ಫ್ರೇಮ್ ಮರದ ಕೆಳಗೆ ಇಟ್ಟರೆ ನಿಮಗೆ...'!
ಆನೆ ಆಕೃತಿಯನ್ನು ಹೊಂದಿರುವ ಮರ ಬೇವಿನ ಮರವಾಗಿದ್ದು, ಪಕ್ಕದಲ್ಲೇ ಆಲದ ಮರವೂ ಇದೆ. ಎರಡೂ ಮರಗಳೂ ಕನಿಷ್ಟ 100 ವರ್ಷಗಳಷ್ಟು ಹಳೆಯದ್ದಾಗಿದೆ ಎಂಬ ಮಾಹಿತಿ ನೀಡಿದ್ದಾರೆ.
ನಾಲ್ಕು ವರ್ಷಗಳ ಹಿಂದೆಯೂ ಈ ಮರ ಆನೆಯ ಸೊಂಡಿಲ ಆಕೃತಿಯಲ್ಲಿ ಬೆಳೆಯತ್ತಿರುವುದನ್ನು ಯಾರೂ ಗಮನಿಸಿರಲಿಲ್ಲ. ಏಕಾ ಏಕಿ ಈ ಪ್ರದೇಶದಲ್ಲಿ ಮರ ಇಷ್ಟೊಂದು ಜನಪ್ರಿಯವಾಗಿದೆ ಎನ್ನುತ್ತಾರೆ ಉದಯ್ ಕಲಬುರಗಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


