ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ 3 ಫುಲ್ ಬಾಡಿ ಸ್ಕ್ಯಾನರ್ ಅಳವಡಿಕೆ!
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ 3 ಫುಲ್ ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ.

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ 3 ಫುಲ್ ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ.
ವಿಮಾನ ನಿಲ್ದಾಣದ ಟರ್ಮಿನಲ್ 2ನಲ್ಲಿ ಈ ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ. ಪ್ರಯಾಣಿಕರ ತ್ವರಿತ ತಪಾಸಣೆ ಮತ್ತು ಸುರಕ್ಷಿತ ವಿಮಾನ ಹಾರಾಟದ ದೃಷ್ಟಿಯಿಂದ ಇದು ಸಹಕಾರಿಯಾಗಲಿದೆ.
ಎರಡನೇ ಟರ್ಮಿನಲ್ನ ಮೊದಲ ಹಂತವನ್ನು ರೂ. 5,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ರೋಹ್ಡೆ & ಸ್ಕವಾರ್ಜ್ ಕಂಪನಿಯಿಂದ ಸ್ಕ್ಯಾನರ್ಗಳನ್ನು ಖರೀದಿಸಲಾಗಿದೆ. ಪ್ರತಿಯೊಂದು ಸ್ಕ್ಯಾನರ್ಗೂ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ ಎಂದು ವಿಮಾನ ನಿಲ್ದಾಣದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏರ್ಪೋರ್ಟ್ನ ಸೆಕ್ಯುರಿಟಿ ಕ್ಲಿಯರೆನ್ಸ್ ವಿಭಾಗದದಲ್ಲಿ ಈ ಮೂರು ಫುಲ್ ಬಾಡಿ ಸ್ಕ್ಯಾನರ್ಗಳನ್ನು ಅಳವಡಿಸಲಾಗಿದೆ. ಇದರಿಂದಾಗಿ ಪ್ರಯಾಣಿಕರಿಗೆ ನಿಲ್ದಾಣದಲ್ಲಿ ಮೆಟಲ್ ಡಿಟೆಕ್ಟರ್ ಚೌಕಟ್ಟು ಇರುವ ಬಾಗಿಲನ್ನು ದಾಟಿ ಒಳಗೆ ಪ್ರವೇಶಿಸಿದ ಬಳಿಕ, ಮತ್ತೆ ಎರಡನೇ ಸುತ್ತಿನಲ್ಲಿ ಭದ್ರತಾ ಸಿಬ್ಬಂದಿಯಿಂದ ಮೆಟಲ್ ಡಿಟೆಕ್ಟರ್ ಮೂಲಕ ತಪಾಸಣೆಯ ಅಗತ್ಯ ಇರುವುದಿಲ್ಲ ಎಂದು ತಿಳಿಸಿದ್ದಾರೆ.
ಸ್ಕ್ಯಾನರ್ ಗಳ ಬಳಕೆ ಆರಂಭ ಕುರಿತ ಪ್ರಶ್ನೆಗೆ ಉತ್ತರಿಸಿ, ಮೊದಲಿಗೆ ಪರೀಕ್ಷಾರ್ಥ ಪ್ರಯೋಗ ನಡೆಸಬೇಕಿದೆ ಎಂದಿದ್ದಾರೆ.
ಟರ್ಮಿನಲ್–2 ಬೃಹತ್ ವಿಸ್ತಾರವಾಗಿ ನಿರ್ಮಾಣ ಮಾಡಲಾಗಿದ್ದು, ಇದು ನಾಡಿನ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಕಲಾಕೃತಿಗಳು ನಿಲ್ದಾಣದ ಮೆರಗು ಹೆಚ್ಚಿಸಿದೆ. ಸೌರ ವಿದ್ಯುತ್ ಬಳಕೆಯೊಂದಿಗೆ ಸುಸ್ಥಿರತೆಗೆ ಮಹತ್ವ ನೀಡಲಾಗಿದೆ.
ವಿಮಾನ ನಿಲ್ದಾಣ ಪ್ರವೇಶದಿಂದ ಆರಂಭವಾಗಿ ವಿಮಾನ ಹತ್ತುವ ತನಕ ಪ್ರತಿ ಹಂತದಲ್ಲೂ ಪ್ರಯಾಣಿಕರಿಗೆ ತಂತ್ರಜ್ಞಾನದ ಸ್ಪರ್ಶವಾಗುತ್ತದೆ. ಪೇಸ್ ಬಯೋಮೆಟ್ರಿಕ್, ಬಾಡಿ ಸ್ಕ್ಯಾನಿಂಗ್, ಬ್ಯಾಗ್ ಟ್ರ್ಯಾಕಿಂಗ್, ತೂಗು ಉದ್ಯಾನಗಳಿಗೆ ನೀರುಣಿಸಲು ಸೆನ್ಸಾರ್ ವ್ಯವಸ್ಥೆ ಸೇರಿ ಎಲ್ಲದಕ್ಕೂ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


