ಸಲಿಂಗಕಾಮಿ ಸಂಗಾತಿಯ ಸಾವು: ಲ್ಯಾಬ್ ಟೆಕ್ನೀಷಿಯನ್ ಬಂಧನ
ಸಲಿಂಗಕಾಮಿ ಸಂಗಾತಿಯ ಸಾವಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನೀಷಿಯನ್ ನನ್ನು ಬಂಧಿಸಲಾಗಿದೆ.

ಬೆಂಗಳೂರು: ಸಲಿಂಗಕಾಮಿ ಸಂಗಾತಿಯ ಸಾವಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಲ್ಯಾಬ್ ಟೆಕ್ನೀಷಿಯನ್ ನನ್ನು ಬಂಧಿಸಲಾಗಿದೆ.
ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಲ್ಯಾಬ್ ಟೆಕ್ನಿಷಿಯನ್ 24 ವರ್ಷದ ತನ್ನ ಸಲಿಂಗಕಾಮಿ ಸಂಗಾತಿಯ ಸಾವಿಗೆ ಸಂಬಂಧಿಸಿದಂತೆ ಬಂಧಿಸಲಾಗಿದೆ ಎಂದು ತಿಳಿಗುಬಂದಿದೆ. ತಮಿಳುನಾಡು ಮೂಲದ ಆರೋಪಿ ಮತ್ತು ಮೃತ ವ್ಯಕ್ತಿ ಕಳೆದ ನಾಲ್ಕು ವರ್ಷಗಳಿಂದ ಸಂಬಂಧ ಹೊಂದಿದ್ದರು ಮತ್ತು ಆಗಾಗ್ಗೆ ನಗರದ ಲಾಡ್ಜ್‌ಗಳಲ್ಲಿ ಭೇಟಿಯಾಗುತ್ತಿದ್ದರು ಪೊಲೀಸ್ ಮೂಲಗಳು ತಿಳಿಸಿವೆ.
ಪೊಲೀಸ್ ಮೂಲಗಳ ಪ್ರಕಾರ ಇದೇ ಜುಲೈ 4 ರಂದು, ತಮಿಳು ಮಣಿವಣ್ಣನ್ ಎಂಬಾತ ಮಾರತ್ತಹಳ್ಳಿಯ ರಿಲ್ಯಾಕ್ಸ್ ಲಾಡ್ಜ್‌ನಲ್ಲಿ ಒಂದು ದಿನದ ಮಟ್ಟಿಗೆ ರೂಂ ಅನ್ನು ಕಾಯ್ದಿರಿಸಿದ್ದ. ಈ ವೇಳೆ ತನ್ನ ಗೆಳೆಯ ರಾಜಗೋಪಾಲ್ ಎಂಬಾತನನ್ನು ರೂಮಿಗೆ ಆಹ್ವಾನಿಸಿದ್ದ. ರಾಜಗೋಪಾಲ್ ಲೈಂಗಿಕ ಕ್ರಿಯೆಯಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ತಮಿಳು ಮಣಿವಣ್ಣನ್ ಕೊಠಡಿಗೆ ಹೊರಗಿನಿಂದ ಬೀಗ ಹಾಕಿ ಪರಾರಿಯಾಗಿದ್ದಾನೆ. ಕೊಠಡಿಯು ಬೀಗ ಹಾಕಲ್ಪಟ್ಟಿದ್ದರಿಂದ, ಬುಕಿಂಗ್ ಅನ್ನು ವಿಸ್ತರಿಸದಿದ್ದರೂ, ಲಾಡ್ಜ್ ಹುಡುಗರು ಜುಲೈ 7 ರಂದು ಒಳಗೆ ಹೋಗಲು ಪರ್ಯಾಯ ಕೀಲಿಯನ್ನು ಬಳಸಿದ್ದರು. ಈ ವೇಳೆ ಕೊಲೆ ವಿಚಾರ ಬೆಳಕಿಗೆ ಬಂದಿದೆ.
ಕೂಡಲೇ ಲಾಡ್ಜ್ ಸಿಬ್ಬಂದಿ ಮಾರತ್ತಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳು ಮತ್ತು ಕೊಠಡಿ ಕಾಯ್ದಿರಿಸುವ ಸಮಯದಲ್ಲಿ ಒದಗಿಸಲಾದ ವಿವರಗಳನ್ನು ಆಧರಿಸಿ, ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
“ಇಬ್ಬರೂ ಮೊದಲು ತಮಿಳುನಾಡಿನ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಮದುವೆಯ ನಂತರವೂ ತಮ್ಮ ಸಂಬಂಧವನ್ನು ಮುಂದುವರೆಸಿದ್ದರು. ಆದಾಗ್ಯೂ, ಅವರ ಸಂಬಂಧದ ಬಗ್ಗೆ ಅವರ ಹೆಂಡತಿಯರು ತಿಳಿದ ನಂತರ ಅವರ ಮದುವೆ ಮುರಿದುಹೋಯಿತು. ತಮಿಳು ಮಣಿವಣ್ಣನ್ ನಂತರ ಬೆಂಗಳೂರಿಗೆ ತೆರಳಿ ಇಲ್ಲಿ ಕೆಲಸ ಮಾಡಲು ಆರಂಭಿಸಿದ. ಅವರು ಆಗಾಗ್ಗೆ ವಿವಿಧ ಲಾಡ್ಜ್‌ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ ರಾಜಗೋಪಾಲ್ ನನ್ನು ಆಹ್ವಾನಿಸುತ್ತಿದ್ದ ಎಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಸಂತ್ರಸ್ತನನ್ನು ಆರೋಪಿ ಕೊಲೆ ಮಾಡಿಲ್ಲ. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಆತ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಐಪಿಸಿ ಸೆಕ್ಷನ್ 304 ರ ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ' ಎಂದು ವೈಟ್‌ಫೀಲ್ಡ್ ವಿಭಾಗದ ಡಿಸಿಪಿ ಎಸ್ ಗಿರೀಶ್ ಟಿಎನ್‌ಐಇಗೆ ತಿಳಿಸಿದ್ದಾರೆ. ಮಾರತ್ತಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


