ಮಳೆಹಾನಿ: ಹೆಚ್ಚುವರಿ ಪರಿಹಾರ ನಿಗದಿಪಡಿಸಿ ರಾಜ್ಯ ಸರ್ಕಾರ ಆದೇಶ
ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.

ಬೆಂಗಳೂರು: ರಾಜ್ಯದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆಗಿರುವ ಹಾನಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೆಚ್ಚುವರಿ ಪರಿಹಾರ ನಿಗದಿಪಡಿಸಿ ಆದೇಶ ಹೊರಡಿಸಿದೆ.
ಹೌದು.. ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ನದಿಗಳು ಅಪಾಯಮಟ್ಟ ಮೀರಿ ಹರಿಯುತ್ತಿವೆ. ಮನೆಗಳು ಕುಸಿದಿದ್ದು, ಜೀವ ಹಾನಿ, ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಇನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿ, ಕೊಡಗು, ಮಡಿಕೇರಿ ಸುತ್ತಮುತ್ತಲು ತೆರಳಿ ಹಾನಿಗೊಳಗಾದ ಪ್ರದೇಶಗಳನ್ನು ವೀಕ್ಷಿಸಿದ್ದಾರೆ.
ಇದರ ಬೆನ್ನಲ್ಲೇ ರಾಜ್ಯದಲ್ಲಿ ನೆರೆ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಈ ಬಾರಿಯೂ ಕೇಂದ್ರ ಸರ್ಕಾರದ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿಗಿಂತ ಹೆಚ್ಚುವರಿ ಪರಿಹಾರ ನಿಗದಿ ಪಡಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ ಮತ್ತು ಪರಿಷ್ಕೃತ ದರ ಹೀಗಿದೆ.
* ಮಾನವ ಜೀವಹಾನಿಗೆ ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ 4 ಲಕ್ಷ ರೂ. ಇದ್ದು, ಪರಿಷ್ಕೃತ ದರ 5 ಲಕ್ಷ ರೂ ನಿಗದಿಪಡಿಸಿದೆ.
* ಪ್ರವಾಹ ನೀರು ನುಗ್ಗಿರುವ ಮನೆಗಳು ಗೃಹೋಪಯೋಗಿ ವಸ್ತುಗಳು ಹಾಗೂ ಬಟ್ಟೆ ಬರೆ ಹಾನಿಗೆ ರೂ 3,800 (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 10,000 ರೂ.
* ಶೇ 75ಕ್ಕಿಂತ ಹೆಚ್ಚು ಸಂಪೂರ್ಣ ಹಾನಿ ಎಂ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 5 ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ಕೆಡವಿ ಹೊಸದಾಗಿ ನಿರ್ಮಿಸುವುದು) ಬಿ೨ ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ ೫ ಲಕ್ಷ ರೂ.
* ಶೇ. 25 ರಿಂದ ಶೇ 75ರಷ್ಟು ತೀವ್ರ ಮನೆಹಾನಿ (ದುರಸ್ಥಿ), ಬಿ1 ವರ್ಗಕ್ಕೆ 95,೧೦೦ (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 3 ಲಕ್ಷ ರೂ.
* ಶೇ. 15 ರಿಂದ 25ರಷ್ಟು ಭಾಗಶಃ ಮನೆ ಹಾನಿ ಸಿ ವರ್ಗಕ್ಕೆ 5200 ರೂ. (ಎಸ್ ಡಿಆರ್ ಎಫ್/ಎನ್ ಡಿಆರ್ ಎಫ್ ಮಾರ್ಗಸೂಚಿ ದರ), ಪರಿಷ್ಕೃತ ದರ 50 ಸಾವಿರ ರೂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


