'ಎಲಿವೇಟರ್' ಪದ ಕನ್ನಡವಲ್ಲ, ಬೆಂಗಳೂರು ಏರ್ ಪೋರ್ಟ್ ನಲ್ಲಿ ಬರಹಕ್ಕೆ ಕನ್ನಡಿಗರ ಆಕ್ಷೇಪ, ಲೇಖಕ-ಪತ್ರಕರ್ತ ಸುಗತ ಶ್ರೀನಿವಾಸರಾಜು ಏನಂತಾರೆ?
ಬೆಂಗಳೂರು ಏರ್ ಪೋರ್ಟ್ ನ ಎಲಿವೇಟರ್ ಎಂಬ ಇಂಗ್ಲಿಷ್ ಶಬ್ದವನ್ನು ತರ್ಜುಮೆ ಮಾಡಿ ಕನ್ನಡದಲ್ಲಿ ಏರಿಳಿ ತೇರು ಎಂಬ ಶಬ್ದ ಬರೆದಿದ್ದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವರು ಈ ಶಬ್ದವನ್ನು ಸ್ವಾಗತಿಸಿದ್ದರು.

ಬೆಂಗಳೂರು: ಬೆಂಗಳೂರು ಏರ್ ಪೋರ್ಟ್ ನ ಎಲಿವೇಟರ್ ಎಂಬ ಇಂಗ್ಲಿಷ್ ಶಬ್ದವನ್ನು ತರ್ಜುಮೆ ಮಾಡಿ ಕನ್ನಡದಲ್ಲಿ ಏರಿಳಿ ತೇರು ಎಂಬ ಶಬ್ದ ಬರೆದಿದ್ದು ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಹಲವರು ಈ ಶಬ್ದವನ್ನು ಸ್ವಾಗತಿಸಿದ್ದರು.
ಆದರೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಾಗೂ ಖ್ಯಾತ ಪತ್ರಕರ್ತ ಸುಗತ ಶ್ರೀನಿವಾಸರಾಜು ಅವರು ಹದಿನೈದು ದಿನಗಳ ಹಿಂದೆ ಬೆಂಗಳೂರು ವಿಮಾನ ನಿಲ್ದಾಣದ ನಿರ್ವಾಹಕರನ್ನು `ಎಲಿವೇಟರ್~ ಪದಕ್ಕೆ ಕನ್ನಡದಲ್ಲಿ ಸರಿಯಾದ ಪದ ಬಳಸಬೇಕು ಎಂದು ಒತ್ತಾಯಿಸಿದ್ದು, ಏರಿಳಿ ತೇರು ಶಬ್ದ ಪ್ರಯೋಗ ಸರಿಯಿಲ್ಲ ಎಂದು ಹೇಳಿರುವುದು ಭಾಷಾ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಅಕ್ಷರಶಃ ಕನ್ನಡದಲ್ಲಿ ಪುನಃ ಬರೆಯಲಾಗಿದೆ.
ಡಿಸೆಂಬರ್ 14 ರಂದು, ಶ್ರೀನಿವಾಸರಾಜು ಹೀಗೆ ಟ್ವೀಟ್ ಮಾಡಿದ್ದಾರೆ: “ಎಲಿವೇಟರ್ ನ್ನು ಕನ್ನಡಕ್ಕೆ `ಏರಿಳಿ ತೇರು’ ಎಂದು ಅನುವಾದಿಸಲಾಗಿದೆ, ಅಂದರೆ ರಥವು ಏರುತ್ತದೆ ಮತ್ತು ಇಳಿಯುತ್ತದೆ ಎಂದ ಹಾಗಾಯಿತು, ರಥವು ಯಾವಾಗ ಏರಿಳಿಯುತ್ತದೆ, ಅದು ಮುಂದೆ ಸಾಗುತ್ತದೆ ಹೊರತು ಹಿಂದೆ ಕೂಡ ಬರುವುದಿಲ್ಲ. ಈ ಶಬ್ಧಪ್ರಯೋಗ ತಪ್ಪಿದೆ, ಹೀಗೆ ಬರೆಯುವುದಕ್ಕಿಂತ ಕನ್ನಡದಲ್ಲಿ `ಲಿಫ್ಟ್' ಎಂದು ಸರಳವಾಗಿ ಬರೆಯಬಾರದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಪ್ರಶ್ನಿಸಿದ್ದರು.
ಇದಾದ ನಂತರ, ಬೆಂಗಳೂರು ಇಂಟರ್ನ್ಯಾಷನಲ್ ಏರ್ಪೋರ್ಟ್ ಲಿಮಿಟೆಡ್ ಮಂಗಳವಾರ ಅಂದರೆ ಮೊನ್ನೆ ಡಿಸೆಂಬರ್ 27ರಂದು ಯೇರಿಲಿ ತೇರುವನ್ನು ತೆಗೆದು ಎಲಿವೇಟರ್ ಎಂದು ಬದಲಿಸಿತು. ಇದನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದಗಳು, ನಮ್ಮ ಕಾರ್ಯಾಚರಣೆ ತಂಡವು ಪರಿಶೀಲಿಸಿ ಸರಿಪಡಿಸುವ ಬದಲಾವಣೆಗಳನ್ನು ಮಾಡಿದೆ ಎಂದು ಟ್ವೀಟ್ ಮಾಡಿದೆ. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಶ್ರೀನಿವಾಸರಾಜು ಧನ್ಯವಾದ ಹೇಳಿದರು.
ಆದರೆ ಯಥಾವತ್ ಇಂಗ್ಲಿಷ್ ಶಬ್ದವನ್ನು ಕನ್ನಡಕ್ಕೆ ಬದಲಾಯಿಸಿದ್ದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕನ್ನಡ ಭಾಷೆಗೆ ಮಾಡಿರುವ ಅವಮಾನ ಎಂದಿದ್ದಾರೆ. ಈ ಬಗ್ಗೆ TNIE ಸುಗತ ಶ್ರೀನಿವಾಸರಾಜು ಅವರನ್ನು ಮಾತನಾಡಿಸಿದಾಗ, ವಿಮಾನ ನಿಲ್ದಾಣಕ್ಕೆ ಕೇವಲ ಕನ್ನಡಿಗರು ಮಾತ್ರವಲ್ಲದೆ ಜಗತ್ತಿನಿಂದ ಜನರು ಬರುತ್ತಿರುತ್ತಾರೆ. ಕೆಲವು ಶಬ್ದಗಳಿಗೆ ಸರಿಯಾದ ಕನ್ನಡ ಶಬ್ದವಿರುವುದಿಲ್ಲ. ಭಾಷೆಗಳು ಎರವಲು ಮತ್ತು ವಿಕಸನದ ಮೂಲಕ ಮಾತ್ರ ಬೆಳೆಯುತ್ತವೆ, ಉದಾಹರಣೆಗೆ, ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆಗಳು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


