ರಾಮನಗರ ಪ್ರವಾಹ ಸಂತ್ರಸ್ತರ ರಕ್ಷಣೆಗೆ ಧಾವಿಸುವಲ್ಲಿ ಸರ್ಕಾರ ವಿಫಲ: ಎಂಎಲ್‌ಸಿ ರವಿ
ರಾಮನಗರದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ಆರೋಪಿಸಿದ್ದಾರೆ.

ಬೆಂಗಳೂರು: ರಾಮನಗರದಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡು ಸಂತ್ರಸ್ತರಾದವರಿಗೆ ನೆರವು ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಸ್. ರವಿ ಆರೋಪಿಸಿದ್ದಾರೆ.
ಅತಿವೃಷ್ಟಿ ಕುರಿತು ವಿಧಾನಪರಿಷತ್ತಿನಲ್ಲಿ ನಡೆದ ಚರ್ಚೆ ವೇಳೆ ಮಾತನಾಡಿದ ರವಿ, ಭಕ್ಷಿ ಕೆರೆ ಹೊಡೆದು ರಾಮನಗರ ಒಂದರಲ್ಲಿಯೇ ಸುಮಾರು 3,000 ಮನೆಗಳು ಜಲಾವೃತ್ತಗೊಂಡಿದ್ದವು. ರಾಮನಗರದ ಹಳೆಯ ಹಾಗೂ ಹೊಸ ಪ್ರದೇಶಗಳ ನಡುವೆ ಸಂಪರ್ಕ ಸಂಪರ್ಕ ಕಡಿತಗೊಂಡಿತ್ತು. ಅನೇಕ ಮನೆಗಳು ಭಾಗಶ: ಹಾನಿಯಾಗಿವೆ. ಭಾರೀ ಮಳೆಯಿಂದಾಗಿ ಸುಮಾರು 250 ಮನೆಗಳು ಕುಸಿತವಾಗಿವೆ ಎಂದು ಅವರು ತಿಳಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದರು. ಆದರೂ, ಇನ್ನೂ ಅನೇಕ ಸಂತ್ರಸ್ತರಿಗೆ ಇನ್ನೂ ಮನೆ ಇಲ್ಲದಂತಾಗಿದೆ. ಅನೇಕ ಮಂದಿ ಪರಿಹಾರ ಪಡೆದಿಲ್ಲ. ಅವರು ಜೀವನವನ್ನು ಮರು ಕಟ್ಟಿಕೊಡುವುದು ಪ್ರಮುಖವಾಗಿದೆ ಎಂದರು.
ಪ್ರವಾಹ ನಂತರ ಜಿಲ್ಲಾ ಉಸ್ತುವಾರಿ ಸಚಿವರು ಸಭೆ ನಡೆಸಿಲ್ಲ, ಪರಿಹಾರ ನೀಡಲು ಅಧಿಕಾರಿಗಳು ಸಾರ್ವಜನಿಕರ ಬಳಿ ಐಡಿ ಕಾರ್ಡ್ ತೋರಿಸಲು ಕೇಳುತ್ತಿದ್ದಾರೆ. ಜನರು ಮನೆ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಆಧಾರ್, ವೋಟರ್ ಐಡಿ ಕಾರ್ಡ್ ತೋರಿಸುವಂತೆ ಕೇಳುವುದು ಅಮಾನವೀಯವಾದದ್ದು, ಸರ್ಕಾರ ಆದಷ್ಟು ಬೇಗ ಜನರಿಗೆ ಪರಿಹಾರ ಒದಗಿಸಬೇಕು ಎಂದು ರವಿ ಒತ್ತಾಯಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


