ರಾಜ್ಯ

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕರ್ನಾಟಕದ ಶಿಶಿರ್ ಪ್ರಥಮ ಸ್ಥಾನ: ಮುಖ್ಯಮಂತ್ರಿ ಬೊಮ್ಮಾಯಿ ಅಭಿನಂದನೆ

ಜೆಇಇ ಅಡ್ವಾನ್ಸ್ಡ್‌ 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಬೆಂಗಳೂರಿನ ವಿದ್ಯಾರ್ಥಿ ಆರ್ ಕೆ ಶಿಶಿರ್ ಪ್ರಥಮ ಸ್ಥಾನ ಪಡೆದಿದ್ದಾರೆ.

ಜೆಇಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಕರ್ನಾಟಕದ ಶಿಶಿರ್ ಪ್ರಥಮ ಸ್ಥಾನ: ಮುಖ್ಯಮಂತ್ರಿ ಬೊಮ್ಮಾಯಿ ಅಭಿನಂದನೆ
ಶಿಶಿರ್ ಆರ್ ಕೆ ಮತ್ತು ತನಿಷ್ಕಾ ಕಾಬ್ರಾ
Published On :

ಬೆಂಗಳೂರು: ಜೆಇಇ ಅಡ್ವಾನ್ಸ್ಡ್‌ 2022 ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕದ ಬೆಂಗಳೂರಿನ ವಿದ್ಯಾರ್ಥಿ ಆರ್ ಕೆ ಶಿಶಿರ್ ಪ್ರಥಮ ಸ್ಥಾನ ಪಡೆದಿದ್ದಾರೆ, ಇವರು ಐಐಟಿ ಝೋನ್​ನಿಂದ ಪರೀಕ್ಷೆ ಬರೆದವರು. ಹಾಗೆಯೇ ಪೋಲು ಲಕ್ಷ್ಮೀ ಸಾಯಿ  ಲೋಹಿತ್ ರೆಡ್ಡಿ ಎರಡನೇ ಮತ್ತು ಥಾಮಸ್ ಬಿಜು ಚೀರಂವೇಲಿಲ್ ಮೂರನೇ ಶ್ರೇಯಾಂಕ ಪಡೆದಿದ್ದಾರೆ. ಕಳೆದ ತಿಂಗಳು ಆಗಸ್ಟ್ 28ರಂದು ಪರೀಕ್ಷೆ ನಡೆದಿತ್ತು, ಜೆಇಇ ಅಡ್ವಾನ್ಸ್ಡ್‌ 2022 ಫಲಿತಾಂಶ – jeeadv.ac.in ಅಧಿಕೃತ ವೆಬ್‌ಸೈಟ್‌ನಲ್ಲಿ ಲಭ್ಯವಿದೆ.

ಈ ಬಾರಿ ಟಾಪ್ 10ರಲ್ಲಿ ಹುಡುಗರೇ ಇರುವುದು ವಿಶೇಷ. ಹುಡುಗಿಯರಲ್ಲಿ 16ನೇ ರ್ಯಾಂಕ್​ ನ್ನು ಐಐಟಿ ದೆಹಲಿ ಝೋನ್​ನ ತನಿಷ್ಕಾ ಕಾಬ್ರಾ ಮೊದಲ ಸ್ಥಾನ ಪಡೆದಿದ್ದಾರೆ. ವಂಗಪಲ್ಲಿ ಸಾಯಿ ಸಿದ್ಧಾರ್ಥ್​ 4ನೇ ಸ್ಥಾನ, ಮಯಾಂಕ್ ಮೋಟ್ವಾನಿ 5ನೇ ಸ್ಥಾನ, ಪೋಲಿಸೆಟ್ಟಿ ಕಾರ್ತಿಕೇಯ 6ನೇ ಸ್ಥಾನ, ಪ್ರತೀಕ್ ಸಾಹೂ 7ನೇ ಸ್ಥಾನ, ಧೀರಜ್ ಕುರುಕುಂದಾ 8ನೇ ಸ್ಥಾನ, ಮಹಿತ್ 9ನೇ ಸ್ಥಾನ ಹಾಗೂ ಮಹೇಶ್ 10ನೇ ಸ್ಥಾನ ಪಡೆದಿದ್ದಾರೆ.

ಜೆ.ಇ.ಇ ಅಡ್ವಾನ್ಸ್ಡ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಗಳಿಸಿರುವ ಶಿಶಿರ್ ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ  ಅಭಿನಂದನೆ ಸಲ್ಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.