ಬುಡಕಟ್ಟು ಜನಾಂಗದ ಮಕ್ಕಳಿಗೆ ಈ ಆರು ತಿಂಗಳ ಪುಟ್ಟ ಆನೆ ಮರಿಯೇ ಆಟಕ್ಕೆ ಜೊತೆಗಾರ!
ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷದ ನಡುವೆ, ಬಿಳಿಗಿರಿರಂಗನ ಬೆಟ್ಟ ಸಮೀಪದ ಚಾಮರಾಜನಗರದ ಪುರಾಣಿಪೋಡು ಗ್ರಾಮದಲ್ಲಿ ಆರು ತಿಂಗಳ ಗಂಡು ಆನೆಯೊಂದು ಬುಡಕಟ್ಟು ಜನಾಂಗದ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿದ ಹೃದಯಸ್ಪರ್ಶಿ ಕಥೆ ಇಲ್ಲಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನುಷ್ಯ-ಪ್ರಾಣಿ ಸಂಘರ್ಷದ ನಡುವೆ, ಬಿಳಿಗಿರಿರಂಗನ ಬೆಟ್ಟ ಸಮೀಪದ ಚಾಮರಾಜನಗರದ ಪುರಾಣಿಪೋಡು ಗ್ರಾಮದಲ್ಲಿ ಆರು ತಿಂಗಳ ಗಂಡು ಆನೆಯೊಂದು ಬುಡಕಟ್ಟು ಜನಾಂಗದ ಶಾಲಾ ಮಕ್ಕಳು ಮತ್ತು ಶಿಕ್ಷಕರೊಂದಿಗೆ ಸ್ನೇಹ ಬೆಳೆಸಿದ ಹೃದಯಸ್ಪರ್ಶಿ ಕಥೆ ಇಲ್ಲಿದೆ.
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಆನೆಯ ಮರಿ ತನ್ನ ತಾಯಿಯಿಂದ ಬೇರ್ಪಟ್ಟು ಮಾನವ ವಾಸಕ್ಕೆ ಹೊಂದಿಕೊಂಡಿರಬಹುದು. ಕಾಡು ಪ್ರಾಣಿಯು ಮನುಷ್ಯರೊಂದಿಗೆ ಸ್ನೇಹ ಬೆಳೆಸುವುದು ಹಾಗೂ ಅವರಿಂದ ಕಾಳಜಿ ಮತ್ತು ಗಮನವನ್ನು ಬಯಸುವುದು ಸಾಮಾನ್ಯವಲ್ಲ ಎನ್ನುತ್ತಾರೆ.
'ಭಾನುವಾರ ಈ ಘಟನೆ ನಮಗೆ ತಿಳಿಯಿತು. ಯಳಂದೂರು ತಾಲೂಕಿನ ಬುಡಕಟ್ಟು ಜನಾಂಗದವರ ವ್ಯಾಪ್ತಿಯ ಗ್ರಾಮವೊಂದರ ಶಾಲಾ ಪ್ರದೇಶದಲ್ಲಿ ಈ ಆನೆಯ ಮರಿ ಓಡಾಡುತ್ತಿರುವುದು ಪತ್ತೆಯಾಗಿದೆ. ಇದರೊಂದಿಗೆ ಮಕ್ಕಳು ಮತ್ತು ವಯಸ್ಕರು ಆಟವಾಡುತ್ತಾ ಅದಕ್ಕೆ ತಿನ್ನಿಸುತ್ತಿರುವ ದೃಶ್ಯ ಕಂಡುಬಂದಿದೆ' ಎಂದು ಬಿಳಿಗಿರಿರಂಗನ ಬೆಟ್ಟದ ಪ್ರಭಾರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್ ಹೇಳಿದರು.
ಇದನ್ನೂ ಓದಿ: ಆನೆ ಮರಿಗೆ Z+++ ಭದ್ರತೆ: ವಿಡಿಯೋ ವೈರಲ್!
'ಕರುವಿಗೆ ಬಾಳೆಹಣ್ಣು ಮತ್ತು ಇತರ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿತ್ತು. ಆನೆ ಮರಿ ತುಂಬಾ ಸಂತೋಷವಾಗಿದ್ದರೂ, ಅಂತಹ ಸಾಮೀಪ್ಯವು ಅಪರೂಪ' ಎಂದು ಚಾಮರಾಜನಗರದ ಅರಣ್ಯಾಧಿಕಾರಿಯೊಬ್ಬರು ಹೇಳಿದರು.
ತನ್ನ ತಾಯಿ ಆನೆಯೊಂದಿಗೆ ಸೇರಿಸಲು ಪ್ರಯತ್ನಿಸುತ್ತಿರುವ ಅರಣ್ಯಾಧಿಕಾರಿಗಳು ಆನೆಯ ಮರಿಯನ್ನು ಕರೆದೊಯ್ದಿದ್ದಾರೆ.
ಸಿಎಂ ಸಭೆ ರದ್ದು
ಒಂದೂವರೆ ವರ್ಷಗಳ ನಂತರ ಸೆಪ್ಟೆಂಬರ್ 5 ರಂದು ನಡೆಯಬೇಕಿದ್ದ ರಾಜ್ಯ ವನ್ಯಜೀವಿ ಮಂಡಳಿಯ ಬಹುನಿರೀಕ್ಷಿತ ಸಭೆಯನ್ನು ಸಿಎಂ ರದ್ದುಗೊಳಿಸಿದ್ದಾರೆ. ಹೆಸರಘಟ್ಟವನ್ನು ಹುಲ್ಲುಗಾವಲು ಎಂದು ಘೋಷಿಸುವುದು, ಎಂಎಂ ಹಿಲ್ಸ್ ಮರುಮೌಲ್ಯಮಾಪನ ಮತ್ತಿತರ ವಿಷಯಗಳು ಸಭೆಯ ಅಜೆಂಡಾದಲ್ಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


