ರಾಜ್ಯ

ಡ್ರಂಕ್ ಅಂಡ್ ಡ್ರೈವ್​​ ಆಕ್ಸಿಡೆಂಟ್: ಸಿಎಆರ್ ಇನ್ಸ್​ಪೆಕ್ಟರ್ ಪತಿ-ಪತ್ನಿ ಕಿರಿಕ್..! ದೂರು ದಾಖಲು

ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಇನ್ಸ್​ಪೆಕ್ಟರ್ ಪತಿ-ಪತ್ನಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಡ್ರಂಕ್ ಅಂಡ್ ಡ್ರೈವ್​​ ಆಕ್ಸಿಡೆಂಟ್: ಸಿಎಆರ್ ಇನ್ಸ್​ಪೆಕ್ಟರ್ ಪತಿ-ಪತ್ನಿ ಕಿರಿಕ್..! ದೂರು ದಾಖಲು
ಕುಡಿದು ವಾಹನ ಚಾಲನೆ
Published On :

ಬೆಂಗಳೂರು; ಕುಡಿದ ಮತ್ತಿನಲ್ಲಿ ಕಾರು ಚಾಲನೆ ಮಾಡಿ ಅಪಘಾತ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಆರ್ ಇನ್ಸ್​ಪೆಕ್ಟರ್ ಪತಿ-ಪತ್ನಿ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ನಿನ್ನೆ ರಾತ್ರಿ ಚಾಮರಾಜಪೇಟೆಯಲ್ಲಿ ಘಟನೆ ನಡೆದಿದ್ದು, ಒನ್​ ವೇಯಲ್ಲಿ ಕಾರು ಚಲಾಯಿಸಿ ಸಿಎಆರ್ ಇನ್ಸ್​​ಪೆಕ್ಟರ್​ ಸಂಜೀವ್ ಅಪಘಾತ ಮಾಡಿದ್ದಾರೆ ಎನ್ನಲಾಗಿದೆ. ನಿನ್ನೆ ರಾತ್ರಿ 12 ಗಂಟೆಯಲ್ಲಿ ಜಾಲಿ ರೈಡ್ ಬಂದಿದ್ದ ಸಂಜೀವ್ ಮತ್ತು ಅವರ  ಪತ್ನಿ ಉಷಾ ಕಿರಿಕ್ ಮಾಡಿಕೊಂಡಿದ್ದಾರೆ.

ಕಾರು ಚಲಾಯಿಸುತ್ತಿದ್ದ ಪತ್ನಿ ಉಷಾ, ಚಾಮರಾಜಪೇಟೆಯ 6ನೇ ಮುಖ್ಯರಸ್ತೆ ಬಳಿ ಬೇರೊಂದು ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಸಂಜೀವ್ ದಂಪತಿ ಜೊತೆ ಕಾರು ಚಾಲಕ, ಸ್ಥಳೀಯರಿಂದ ಗಲಾಟೆ ಮಾಡಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಚಾಮರಾಜಪೇಟೆ ಪೊಲೀಸ್ ಠಾಣೆಗೆ ಉಷಾ ದೂರು ನೀಡಿದ್ದಾರೆ.  ಸಂಜೀವ್ ದಂಪತಿ ವಿರುದ್ಧ ಸ್ಥಳೀಯರಿಂದಲೂ ಪ್ರತಿದೂರು ನೀಡಲಾಗಿದೆ.

ಡ್ರಿಂಕ್ ಅಂಡ್ ಡ್ರೈವ್: ಪ್ರಕರಣ ದಾಖಲು
ಈ ವೇಳೆ ಉಭಯ ದೂರುದಾರರಿಂದ ದೂರು ದಾಖಲಿಸಿಕೊಂಡ ಪೊಲೀಸರು, ಸಂಜೀವ್ ಮತ್ತು ಉಷಾರ ಮೆಡಿಕಲ್ ಚೆಕ್ ಅಪ್ ಮಾಡಿಸಲು ಮುಂದಾಗಿದ್ದಾರೆ. ತಪಾಸಣೆ ವೇಳೆ ಇನ್ಸ್ ಪೆಕ್ಟರ್ ಸಂಜೀವ್ ಮತ್ತು ಉಷಾ ಮದ್ಯಸೇವನೆ ಧೃಡಪಟ್ಟಿದೆ. ಮದ್ಯ ಸೇವಿಸಿ ಕಾರು ಚಲಾಯಿಸಿ, ಒನ್ ವೇ ನಲ್ಲಿ ಡ್ರೈವ್ ಮಾಡಿ ಆಕ್ಸಿಡೆಂಡ್ ಮಾಡಿದ್ದಾರೆ. ಡ್ರಿಂಕ್ ಅಂಡ್ ಡ್ರೈವ್ ಹಿನ್ನಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ದಂಪತಿ ವಿರುದ್ದ ಡಿಡಿ ಕೇಸ್ ದಾಖಲು ಮಾಡಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.