ಕಾಂತಾರ ವಿವಾದ: ನಟ ಚೇತನ್‌ಗೆ ದಲಿತ ಸಂಘಟನೆಗಳ ಬೆಂಬಲ
ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿರೋಧಗಳನ್ನು ಎದುರಿಸುತ್ತಿರುವ ನಟ ಚೇತನ್ ಅವರಿಗೆ ದಲಿತ ಸಂಘಟನೆಗಳು ಶನಿವಾರ ಬೆಂಬಲ ವ್ಯಕ್ತಪಡಿಸಿವೆ.

ಮೈಸೂರು: ಕಾಂತಾರ ಚಿತ್ರದ ವಿರುದ್ಧ ಮಾತನಾಡಿ ವಿರೋಧಗಳನ್ನು ಎದುರಿಸುತ್ತಿರುವ ನಟ ಚೇತನ್ ಅವರಿಗೆ ದಲಿತ ಸಂಘಟನೆಗಳು ಶನಿವಾರ ಬೆಂಬಲ ವ್ಯಕ್ತಪಡಿಸಿವೆ.
ರಿಷಬ್ ಶೆಟ್ಟಿ ಮಾತು ಸುಳ್ಳು, ನಮ್ಮ ಪಂಬದ, ನಲಿಕೆ, ಪರವರ ಬಹುಜನ ಸಂಪ್ರದಾಯಗಳು. ವೈದಿಕ ಬ್ರಾಹ್ಮಣೀಯ ಹಿಂದೂ ಧರ್ಮಕ್ಕಿಂತ ಹಿಂದಿನವು. ಮೂಲ ನಿವಾಸಿ ಸಂಸ್ಕೃತಿಗಳನ್ನು ಪರದೆ ಮೇಲೆ ಮತ್ತು ಹೊರಗೆ ಸತ್ಯದೊಂದಿಗೆ ಪ್ರದರ್ಶಿಸಬೇಕು ಎಂದು ಚೇತನ್ ಅವರು ಹೇಳಿದ್ದರು. ಈಗಾಗಲೇ ಚಿತ್ರ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಜನರಿಂದಲಷ್ಟೇ ಅಲ್ಲದೆ, ಸ್ಟಾರ್ ನಟ-ನಟಿಯರಿಂದಲು ಪ್ರಶಂಸೆ ಪಡೆಯುತ್ತಿದೆ. ಈ ಸಂದರ್ಭದಲ್ಲಿ ಚಿತ್ರದ ಕುರಿತು ವಿವಾದ ಸೃಷ್ಟಿಸಿರುವ ನಟ ಚೇತನ್ ಅವರ ವಿರುದ್ಧ ಹಲವರು ಕಿಡಿಕಾರುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿ ಚೇತನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ದಲಿತ ಮುಖಂಡ ಮತ್ತು ಮಾಜಿ ಮೇಯರ್ ಪುರುಷೋತ್ತಮ ಅವರು, “ಪೂಜೆ ಮಾಡುವುದು ಹಿಂದೂ ಸಂಸ್ಕೃತಿಯಾಗಿರಲಿಲ್ಲ. ಸುಮಾರು 3,500 ವರ್ಷಗಳ ಹಿಂದೆ ಮಧ್ಯ ಏಷ್ಯಾದಿಂದ ಬಂದ ಆರ್ಯರು ಇದನ್ನು ಪರಿಚಯಿಸಿದರು ಮತ್ತು ವೈದಿಕ ಸಂಸ್ಕೃತಿಯನ್ನು ಪ್ರಾರಂಭಿಸಿದರು. ದ್ರಾವಿಡರು ಮತ್ತು ಮೂಲ ವಂಶಸ್ಥರ ಸಂಸ್ಕೃತಿ ಮತ್ತು ಸಂಪ್ರದಾಯಗಳು ವೈದಿಕ ಸಂಸ್ಕೃತಿಗಿಂತ ಹಳೆಯದು, ”ಎಂದು ಅವರು ಹೇಳಿದರು
ಆರ್ಯರು ಭಾರತಕ್ಕೆ ಬರುವ ಮೊದಲು ಯಾವುದೇ ಪೂಜೆ ಇರಲಿಲ್ಲ ಎಂದು ಕನ್ನಡ ಲೇಖಕ ಕೆ.ಎಸ್.ಭಗವಾನ್ ಹೇಳಿದ್ದಾರೆ."ಚೇತನ್ ಅವರು ಹೇಳಿದ್ದು ಸರಿಯಿದೆ. ಮೂಲ ವಂಶಸ್ಥರು ಭೂತ ಕೋಲವನ್ನು ಅಭ್ಯಾಸ ಮಾಡಲಿಲ್ಲ, ಆದರೆ, ಇದು ವೈದಿಕ ಆಚರಣೆಗಳಿಂದ ಪ್ರಾರಂಭವಾಯಿತು ತಿಳಿಸಿದರು.
ಇದೇ ವೇಳೆ ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, 'ಹಿಂದೂ ದೇವರುಗಳು ಮತ್ತು ಆಚಾರ ವಿಚಾರಗಳ ಬಗ್ಗೆ ವಿವಾದ ಹುಟ್ಟುಹಾಕಲು ಚೇತನ್‌ಗೆ ಮುಸ್ಲಿಮರಿಂದ ಹಣ ನೀಡಲಾಗಿದೆ' ಎಂದು ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


