ರಾಜ್ಯ

ಧರೆಗುರುಳುತ್ತಿದ್ದ ಮರದ ಕೆಳಗೆ ಸಿಲುಕಿ ಗಂಭೀರ ಗಾಯ: ಜಾನಪದ ಕಲಾವಿದ ನರಸಿಂಹಮೂರ್ತಿ ಸ್ಥಿತಿ ಗಂಭೀರ

ಭಾರೀ ಮಳೆಯಿಂದಾಗಿ ಧರೆಗುರುಳುತ್ತಿದ್ದ ಮರಳ ಕೆಳಗೆ ಸಿಲುಕಿ ಜಾನಪದ ಕಲಾವಿದ ಹಾಗೂ ಹಾರ್ಮೋನಿಯಂ ವಾದಕ ನರಸಿಂಹಮೂರ್ತಿ (50) ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.

ಧರೆಗುರುಳುತ್ತಿದ್ದ ಮರದ ಕೆಳಗೆ ಸಿಲುಕಿ ಗಂಭೀರ ಗಾಯ: ಜಾನಪದ ಕಲಾವಿದ ನರಸಿಂಹಮೂರ್ತಿ ಸ್ಥಿತಿ ಗಂಭೀರ
ಜಾನಪದ ಕಲಾವಿದ ಹಾಗೂ ಹಾರ್ಮೋನಿಯಂ ವಾದಕ ನರಸಿಂಹಮೂರ್ತಿ
Published On :

ಬೆಂಗಳೂರು: ಭಾರೀ ಮಳೆಯಿಂದಾಗಿ ಧರೆಗುರುಳುತ್ತಿದ್ದ ಮರಳ ಕೆಳಗೆ ಸಿಲುಕಿ ಜಾನಪದ ಕಲಾವಿದ ಹಾಗೂ ಹಾರ್ಮೋನಿಯಂ ವಾದಕ ನರಸಿಂಹಮೂರ್ತಿ (50) ಗಂಭೀರವಾಗಿ ಗಾಯಗೊಂಡಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ. 

ಅಕ್ಟೋಬರ್ 12 ರಂದು ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಹೆಸರಘಟ್ಟದಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಪ್ರಸ್ತುತ ನರಸಿಂಹ ಮೂರ್ತಿಯವರು ಫ್ರೇಜರ್ ಟೌನ್ ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ವರದಿಗಳಉ ತಿಳಿಸಿವೆ. 

ನರಸಿಂಹ ಮೂರ್ತಿಯವರ ಸಂಬಂಧಿ ರಘು ಅವರು ಮಾತನಾಡಿ, ಮೂರ್ತಿಯವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಕುಟುಂಬದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಘಟನೆ ಬಗ್ಗೆ ಹೆಸರಘಟ್ಟ ಗ್ರಾಮ ಪಂಚಾಯಿತಿಗಾಗಲಿ, ಶಾಸಕರ ಕಚೇರಿಗಾಗಲಿ ತಿಳಿಯದಿರುವುದು ವಿಪರ್ಯಾಸದ ಸಂಗತಿ. ಪ್ರಕರಣ ಸಂಬಂಧ ಸೋಲದೇವನಹಳ್ಳಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆಂದು ಹೇಳಿದ್ದಾರೆ. 

ಘಟನೆಯಿಂದ ಪ್ರಾಣಾಪಾಯದಿಂದ ಪಾರಾಗಿರುವ ಮೊಟ್ಟೆ ವ್ಯಾಪಾರಿ ಎಂ.ಆರ್. ಶಿವರಾಜು ಅವರು ಮಾತನಾಡಿ, ಈ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುರಿಂದ ಹಳೆಯ ಮರಗಳು, ಅದರ ಕೊಂಬೆಗಳು ಕೆಳಗೆ ಬೀಳುತ್ತಿವೆ. ಅರಳೀಮರ ಬುಡಮೇಲಾಗಿ ವ್ಯಕ್ತಿಯೊಬ್ಬರ ಮೇಲೆ ಬಿದ್ದಿತು. ಇದು ನನ್ನ ಕಣ್ಣೆದುರೇ ನಡೆಯಿತು. ನಾನು ನಿಂತಿದ್ದ ಸ್ಥಳದಿಂದ ಕೇವಲ 10 ಅಡಿಗಳಷ್ಟು ದೂರದಲ್ಲಿ ಮರ ಬಿದ್ದಿದ್ದು. ಘಟನೆಯಿಂದ ಆಘಾತಗೊಂಡಿದ್ದೆ ಎಂದು ತಿಳಿಸಿದ್ದಾರೆ. 

ಕೂಡಲೇ ಗ್ರಾಮಸ್ಥರು ಆ್ಯಂಬುಲೆನ್ಸ್'ಗೆ ಕರೆ ಮಾಡಿದರು. ಇತರರ ಸಹಾಯದೊಂದಿಗೆ ಗಾಯಾಳುವನ್ನು ನಾನು ವಾಹನಕ್ಕೆ ಸ್ಥಳಾಂತರಿಸಿದೆ ಎಂದಿದ್ದಾರೆ. 

ಕಲಾವಿದನ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿ, ಆಸ್ಪತ್ರೆಗಳ ಬಿಲ್ ಗಳನ್ನು ಸಲ್ಲಿಸಿದರೆ ಚಿಕಿತ್ಸಾ ವೆಚ್ಚ ಮರುಪಾವತಿಗೆ ವ್ಯವಸ್ಥೆ ಮಾಡಬಹುದು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.