ರಾಜ್ಯ

ನಾಯಿಯನ್ನು ನಿರ್ದಯವಾಗಿ ಥಳಿಸಿದವರ ವಿರುದ್ಧ ಖಾಕಿಯಿಂದ ಪ್ರಕರಣ ದಾಖಲು

ಕೆಲವು ವ್ಯಕ್ತಿಗಳು ನಾಯಿಯನ್ನು ನಿರ್ದಯವಾಗಿ ಥಳಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಇಂತಹ ಕೃತ್ಯ ಎಸಗಿದ್ದ ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ.

ನಾಯಿಯನ್ನು ನಿರ್ದಯವಾಗಿ ಥಳಿಸಿದವರ ವಿರುದ್ಧ ಖಾಕಿಯಿಂದ ಪ್ರಕರಣ ದಾಖಲು
ನಾಯಿಗೆ ಥಳಿಸುತ್ತಿರುವ ವೀಡಿಯೋ ದೃಶ್ಯ
Published On :

ಬೆಂಗಳೂರು: ಕೆಲವು ವ್ಯಕ್ತಿಗಳು ನಾಯಿಯನ್ನು ನಿರ್ದಯವಾಗಿ ಥಳಿಸಿದ್ದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೆ ಇಂತಹ ಕೃತ್ಯ ಎಸಗಿದ್ದ ವ್ಯಕ್ತಿಗಳ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಲಿದ್ದಾರೆ. 

ಘಟನೆಯ ವೀಡಿಯೊದಲ್ಲಿ ಇಬ್ಬರು ಪುರುಷರು  ಕೋಲುಗಳಿಂದ ನಾಯಿಯನ್ನು ಕ್ರೂರವಾಗಿ ಹೊಡೆಯುವುದು ಸೆರೆಯಾಗಿತ್ತು. ಮಧ್ಯಪ್ರವೇಶಿಸಲು ಪ್ರಯತ್ನಿಸಿದ ವ್ಯಕ್ತಿಯೊಬ್ಬರನ್ನು ತಳ್ಳಿರುವುದು ಕೂಡ ಈ ವೀಡಿಯೋದಲ್ಲಿ ದಾಖಲಾಗಿದೆ.

ನೋವಿನಿಂದ ನೆಲದ ಮೇಲೆ ಮಲಗಿದ್ದ ನಾಯಿಯನ್ನು ಇಬ್ಬರು ವ್ಯಕ್ತಿಗಳು ಹೊಡೆಯುವುದನ್ನು ಮುಂದುವರೆಸಿದರು ಮತ್ತು ನಾಯಿಯ ಮಾಲೀಕರ ಕುಟುಂಬವು ಅವರನ್ನು ಎದುರಿಸಲು ಪ್ರಯತ್ನಿಸಿ ನಂತರ ಅಲ್ಲಿಂದ ಹೊರಟು ಹೋದರು.

ಸೋಮವಾರ ರಾತ್ರಿ ಸಾಕಿದ ನಾಯಿ ಬೊಗಳಿದ ಕಾರಣ ಆ ವ್ಯಕ್ತಿಗಳು ಅದರ ಮೇಲೆ ಹಲ್ಲೆ ನಡೆಸಿದ್ದಾರೆ. ನಾಯಿಯ ಮಾಲೀಕರು ಗಾಯಗೊಂಡ ನಾಯಿಯನ್ನು ಪಶು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಪೊಲೀಸರ ಪ್ರಕಾರ ಮಾಲೀಕರು ಶೀಘ್ರದಲ್ಲೇ ಅಧಿಕೃತ ದೂರು ದಾಖಲಿಸುತ್ತಾರೆ. ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ಪೂರ್ವ ಬೆಂಗಳೂರಿನ ಮಂಜುನಾಥ ಲೇಔಟ್ ನಲ್ಲಿ ಘಟನೆಯ ವರದಿಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.