ನಂದಿ ಬೆಟ್ಟಕ್ಕೆ ಸೈಕ್ಲಿಂಗ್ ಹೋಗಿ ದುಬಾರಿ ಬೆಲೆಯ ಸ್ಫೋರ್ಟ್ಸ್ ಬೈಸಿಕಲ್ ಕಳೆದುಕೊಂಡ ಟೆಕ್ಕಿ!
ಹೈದರಾಬಾದ್‌ನಿಂದ ನಂದಿ ಬೆಟ್ಟದ ರಸ್ತೆಯಲ್ಲಿ ಮೊಟ್ಟಮೊದಲ ಬಾರಿಗೆ ಸೈಕ್ಲಿಂಗ್ ಮಾಡಲು ಬಂದಿದ್ದ ಸೈಕ್ಲಿಂಗ್ ಉತ್ಸಾಹಿ ಐಟಿ ವೃತ್ತಿಪರ ಪ್ರದೀಪ್ ಮಂಥನ (41) ಅವರು, ದುಬಾರಿ ಬೆಲೆಯ ಸ್ಫೋರ್ಟ್ಸ್ ಸೈಕಲ್ ನ್ನು ಕಳೆದುಕೊಂಡಿದ್ದಾರೆ.

ಬೆಂಗಳೂರು: ಹೈದರಾಬಾದ್‌ನಿಂದ ನಂದಿ ಬೆಟ್ಟದ ರಸ್ತೆಯಲ್ಲಿ ಮೊಟ್ಟಮೊದಲ ಬಾರಿಗೆ ಸೈಕ್ಲಿಂಗ್ ಮಾಡಲು ಬಂದಿದ್ದ ಸೈಕ್ಲಿಂಗ್ ಉತ್ಸಾಹಿ ಐಟಿ ವೃತ್ತಿಪರ ಪ್ರದೀಪ್ ಮಂಥನ (41) ಅವರು, ದುಬಾರಿ ಬೆಲೆಯ ಸ್ಫೋರ್ಟ್ಸ್ ಸೈಕಲ್ ನ್ನು ಕಳೆದುಕೊಂಡಿದ್ದಾರೆ.
ಪ್ರದೀಪ್ ಅವರು ತಮ್ಮ ಪುತ್ರ ಮತ್ತು ಇತರ ಕುಟುಂಬ ಸದಸ್ಯರೊಂದಿಗೆ ನಂದಿ ಬೆಟ್ಟಕ್ಕೆ ಬಂದಿದ್ದರು. ಈ ವೇಳೆ ರೂ.2.71 ಲಕ್ಷ ಮೌಲ್ಯದ ಟ್ರೆಕ್ ಡೊಮೇನ್ ಎಸ್‌ಎಲ್ 5 ಸ್ಪೋರ್ಟ್ಸ್ ಬೈಸಿಕಲ್ ಅನ್ನು ತಂದಿದ್ದರು. ಕಾರ್ ಸೈಕಲ್ ರ್ಯಾಕ್‌ನಲ್ಲಿ ಸೈಕಲ್ ಅನ್ನು ಸುರಕ್ಷಿತವಾಗಿ ಇರಿಸಿದ್ದು, ಈ ಸೈಕಲ್ ನ್ನು ಕಳ್ಳರು ಹೊತ್ತೊಯ್ದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರದೀಪ್ ಮಂಥನ ಅವರು, ಕಳೆದ ವಾರ ನಾನು ಮತ್ತು ನನ್ನ ಮಗ ನಂದಿ ಬೆಟ್ಟದ ರಸ್ತೆಯಲ್ಲಿ ಸೈಕಲ್ ಸವಾರಿ ಮಾಡಿದ್ದೆವು. ಈ ಸ್ಥಳವನ್ನು ಬಹಳ ಇಷ್ಟವಾಗಿತ್ತು, ಆದ್ದರಿಂದ ನಾವು ವಾರಾಂತ್ಯದಲ್ಲಿ ಮತ್ತೆ ಸೈಕಲ್ ಮಾಡಲು ನಿರ್ಧರಿಸಿದ್ದೆವು. ಕಾರಿನಲ್ಲಿ ಬೆಟ್ಟಗಳ ಕಡೆಗೆ ಹೋಗುತ್ತಿದ್ದಾಗ ಸೈಕಲ್ ರೇಸ್ ನಡೆಯುತ್ತಿರುವುದು ಕಂಡು ಬಂದಿತು. ಈ ವೇಳೆ ದೇವನಹಳ್ಳಿಯ ರಾಣಿ ಸರ್ಕಲ್‌ನಲ್ಲಿರುವ ಹಾಟ್‌ಪಾಟ್ ಹೋಟೆಲ್ ಬಳಿ ಕಾರನ್ನು ನಿಲ್ಲಿಸಿ, ಸೈಕಲ್ ಅನ್ನು ರ್ಯಾಕ್‌ನಲ್ಲಿ ಇರಿಸಿ ರೇಸ್ ನೋಡಲು ಹೋಗಿದ್ದೆವು.
ಸೈಕಲ್ ಸರಿಯಾಗಿ ಲಾಕ್ ಮಾಡಲಾಗಿತ್ತು. ಆದರೆ ರೇಸ್ ನೋಡಿ ಹಿಂತಿರುಗಿದ ಐದೇ ನಿಮಿಷಗಳಲ್ಲಿ ಸೈಕಲ್ ಕಳವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಪೊಲೀಸ್ ಠಾಣೆಯ ಬಗ್ಗೆ ಮಾಹಿತಿ ತಿಳಿದಿರಲಿಲ್ಲ. ನಂತರ ದೇವನಹಳ್ಳಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದೆವು. "ಕಳೆದ ಶನಿವಾರ ಬೆಳಗ್ಗೆ 9.45 ರಿಂದ 9.50 ರ ನಡುವೆ ಕಳ್ಳತನವಾಗಿದೆ, ಆರೋಗ್ಯಕರವಾಗಿರಲು ನಾನು ಕಳೆದ 4 ವರ್ಷಗಳಿಂದ ಸೈಕ್ಲಿಂಗ್ ಮಾಡುತ್ತಿದ್ದೇನೆಂದು ಹೇಳಿದ್ದಾರೆ.
“ಕಳ್ಳತನದ ಹಿಂದೆ ಕೆಲವು ಸ್ಥಳೀಯರು ಇರುವ ಸಾಧ್ಯತೆಯನ್ನು ನಾವು ತಳ್ಳಿಹಾಕುವುದಿಲ್ಲ. ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆಂದು ಪೊಲೀಸರು ಹೇಳಿದ್ದಾರೆ.
ಸೈಕಲ್ ಮಾಲೀಕತ್ವದ ದಾಖಲೆಗಳನ್ನು ಮಂಥನ ಅವರು ಪೊಲೀಸರಿಗೆ ನೀಡಿದ್ದಾರೆ. ಆರೋಪಿಗಳು ಬೀಗಗಳನ್ನು ಒಡೆದಿರುವುದು ಮಾತ್ರವಲ್ಲದೆ ರ‍್ಯಾಕ್‌ನಲ್ಲಿದ್ದ ಹಗ್ಗವನ್ನು ಕತ್ತರಿಸಿ ಸೈಕಲ್ ಕದಿಯುತ್ತಿದ್ದಾರೆಂದು ತನಿಖೆಯ ಭಾಗವಾಗಿರುವ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಂಬಂಧ ದೇವನಹಳ್ಳಿ ಪೊಲೀಸರು ಐಪಿಸಿ ಸೆಕ್ಷನ್ 379 ರ ಅಡಿಯಲ್ಲಿ ಕಳ್ಳತನ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


