ರಾಜ್ಯ

ಪ್ರಭಾವಿ ಬಿಜೆಪಿ ಶಾಸಕನಿಗೆ ಹನಿ ಟ್ರ್ಯಾಪ್ ಯತ್ನ?: ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ; ಪ್ರಕರಣ ದಾಖಲು

ರಾಜ್ಯದ ಪ್ರಭಾವಿ ಬಿಜೆಪಿ ಶಾಸಕರೊಬ್ಬರಿಗೆ ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿರುವ ಯುವತಿ ಹನಿ ಟ್ರ್ಯಾಪ್ ಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಪ್ರಭಾವಿ ಬಿಜೆಪಿ ಶಾಸಕನಿಗೆ ಹನಿ ಟ್ರ್ಯಾಪ್ ಯತ್ನ?: ಬೆತ್ತಲೆ ವಿಡಿಯೋ ಕಾಲ್ ಮಾಡಿದ ಯುವತಿ; ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
Published On :

ಚಿತ್ರದುರ್ಗ: ರಾಜ್ಯದ ಪ್ರಭಾವಿ ಬಿಜೆಪಿ ಶಾಸಕರೊಬ್ಬರಿಗೆ ನಗ್ನವಾಗಿ ವಿಡಿಯೋ ಕಾಲ್ ಮಾಡಿ, ಅಶ್ಲೀಲ ವಿಡಿಯೋ ಕಳುಹಿಸಿರುವ ಯುವತಿ ಹನಿ ಟ್ರ್ಯಾಪ್ ಗೆ ಯತ್ನಿಸಿದ್ದಾಳೆ ಎಂಬ ಆರೋಪ ಕೇಳಿ ಬಂದಿದೆ.

ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಮೊಬೈಲ್​ಗೆ ಅಪರಿಚಿತ ಯುವತಿಯೋರ್ವಳು ವಿಡಿಯೋ ಕಾಲ್ ಹಾಗೂ ಅಶ್ಲೀಲ ವಿಡಿಯೋಗಳನ್ನ ಕಳುಹಿಸಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ. ಶಾಸಕರನ್ನ ಹನಿಟ್ರ್ಯಾಪ್‌ ಬಲೆಗೆ ಬೀಳಿಸಲು ವಿಫಲಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದ್ದು, ಈ ಸಂಬಂಧ ಚಿತ್ರದುರ್ಗ ಸೈಬರ್ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ತಿಪ್ಪಾರೆಡ್ಡಿ
ತಿಪ್ಪಾರೆಡ್ಡಿ

ಅಕ್ಟೋಬರ್ 31 ರಂದು ಶಾಸಕ ತಿಪ್ಪಾರೆಡ್ಡಿ ಮೊಬೈಲ್‌ಗೆ ಓರ್ವ ಅಪರಿಚಿತ ಯುವತಿಯಿಂದ ಫೋನ್ ಕರೆ ಬಂದಿದೆ. ಆರಂಭದಲ್ಲಿ ನಾರ್ಮಲ್ ಆಡಿಯೋ ಕಾಲ್ ಮಾಡಿದ್ದ ಯುವತಿ, ನಂತರ ವಾಟ್ಸ್​ಆ್ಯಪ್​ ಮೂಲಕ ವಿಡಿಯೋ ಕಾಲ್ ಮಾಡಿದ್ದಾಳೆ. ವಿಡಿಯೋ ಕಾಲ್ ರಿಸೀವ್ ಮಾಡಿದ್ದ ಶಾಸಕರಿಗೆ ಬಿಗ್ ಶಾಕ್ ಕಾದಿತ್ತು. ಯಾಕಂದ್ರೆ ವಿಡಿಯೋ ಕಾಲ್ ಮಾಡಿದ್ದ ಯುವತಿ ನಗ್ನವಾಗಿದ್ದಳು ಎನ್ನಲಾಗಿದೆ.

ಯುವತಿ ಹಿಂದಿಯಲ್ಲಿ ಮಾತನಾಡಿದ್ದಳಂತೆ. ಕೂಡಲೇ ಶಾಸಕರು ಫೋನ್ ಕಟ್ ಮಾಡಿದ್ದಾರೆ. ನಂತರ ಅದೇ ಅಪರಿಚಿತ ನಂಬರ್​ನಿಂದ ಅಶ್ಲೀಲ ವಿಡಿಯೋಗಳು ಬಂದಿವೆ. ಇದನ್ನ ನೋಡಿದ ಶಾಸಕರು ಅಶ್ಲೀಲ ವಿಡಿಯೋ ಡಿಲೀಟ್ ಮಾಡಿ, ನಂಬರ್ ಬ್ಲಾಕ್ ಮಾಡಿದ್ದಾರೆ. ಬಳಿಕ ಚಿತ್ರದುರ್ಗ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.