ಮೈಸೂರು ವಿಶ್ವ ಯೋಗ ದಿನಾಚರಣೆ: ಓಂಕಾರದೊಂದಿಗೆ ಯೋಗಸನ ಆರಂಭಿಸಿದ ಪ್ರಧಾನಿ ಮೋದಿ
ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ನಡೆದಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.

ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಅಂಗಳದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಉಪಸ್ಥಿತಿಯಲ್ಲಿ ಮಂಗಳವಾರ ಅಂತರಾಷ್ಟ್ರೀಯ ಯೋಗ ದಿನಾಚರಣೆ ಆಚರಣೆ ಮಾಡಲಾಗಿದ್ದು, ಮೋದಿಯವರು ಓಂಕಾರ ಉಚ್ಛಾರಣೆ ಮತ್ತು ಸಂಸ್ಕತ ಶ್ಲೋಕದೊಂದಿಗೆ ಯೋಗಭ್ಯಾಸ ನಡೆಸಿದರು.
ಕುತ್ತಿಗೆ ಸಡಿಲಗೊಳಿಸುವ, ಕುತ್ತಿಗೆ ತಿರುಗಿಸುವ ಮತ್ತು ಇತರ ಸರಳ ಉಸಿರಾಟದ ವ್ಯಾಯಾಮಗಳೊಂದಿಗೆ ಮೈಸೂರಿನಲ್ಲಿ ಇಂದು ಯೋಗಾಭ್ಯಾಸ ಆರಂಭವಾಯಿತು. ನಂತರ ತಾಡಾಸನ, ವೃಕ್ಷಾಸನ, ಅರ್ಧ ಚಕ್ರಾಸನ ಸೇರಿದಂತೆ ಹಲವು ಯೋಗಾಸನಗಳನ್ನು ಸಾವಿರಾರು ಜನರೊಂದಿಗೆ ಮೋದಿ ಅವರೂ ಮಾಡಿದರು. ವೃಕ್ಷಾಸನವು ತಾಯಿ ಚಾಮುಂಡಿಗೆ ಶರಣಾಗತಿ ಮತ್ತು ಆರಾಧನೆಯ ಭಾವವನ್ನು ಪ್ರದರ್ಶಿಸಿತು.
ಬಳಿಕ ಕಾರ್ಯಕ್ರಮವು ಕಪಾಲಭಾತಿ, ಪ್ರಾಣಾಯಾಮಗಳ ಅಭ್ಯಾಸದೊಂದಿಗೆ ಕೊನೆಯ ಘಟ್ಟಕ್ಕೆ ತಲುಪಿತು. ದೇಶದ ವಿಕಾಸಕ್ಕಾಗಿ ತನುಮನಧನಗಳ ಅರ್ಪಣೆಯ ಸಂಕಲ್ಪದೊಂದಿಗೆ ಶಾಂತಿಪಾಠವನ್ನು ಪ್ರಧಾನಿ ಮೋದಿ ಉಚ್ಛರಿಸಿದರು.
ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಃ, ಸರ್ವೇ ಭದ್ರಾಣಿ ಪಶ್ಯಂತು, ಮಾ ಕಶ್ಚಿತ್ ದುಃಖ ಭಗ್ ಭವೇತ್ ಎಂದು ಮೋದಿಯವರು ಸಂಕಲ್ಪ ಮತ್ತು ಶಾಂತಿಪಾಠವನ್ನು ಉಚ್ಚರಿಸಿದರು.
ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ಮಹಾರಾಜರಾದ ಯಧುವೀರ್, ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರು, ಉಸ್ತುವಾರಿ ಸಚಿವರು ಹಾಗೂ ಆಯುಷ್ ಇಲಾಖೆಯ ಸಚಿವರು ಹಾಗೂ ಸುಮಾರು 15 ಸಾವಿರ ಜನರೂ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


