ದ್ವಿತೀಯ ಪಿಯು ಫಲಿತಾಂಶ: ಬೆಂಗಳೂರಿನ ಟಾಪರ್ ವಿದ್ಯಾರ್ಥಿಗಳು
ವಾಣಿಜ್ಯ, ವಿಜ್ಞಾನ ಮತ್ತು ಕಲಾ ವಿಭಾಗಗಳಲ್ಲಿ ಅಸಾಧಾರಣ ಅಂಕಗಳೊಂದಿಗೆ ಬೆಂಗಳೂರಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಟಾಪರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.

ಬೆಂಗಳೂರು: ವಾಣಿಜ್ಯ, ವಿಜ್ಞಾನ ಮತ್ತು ಕಲಾ ವಿಭಾಗಗಳಲ್ಲಿ ಅಸಾಧಾರಣ ಅಂಕಗಳೊಂದಿಗೆ ಬೆಂಗಳೂರಿನ ವಿದ್ಯಾರ್ಥಿಗಳು ದ್ವಿತೀಯ ಪಿಯು ಟಾಪರ್‌ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಜೈನ್ ಪಿಯು ಕಾಲೇಜಿನ ಮಾನವ್ ವಿನಯ್ ಕೇಜ್ರಿವಾಲ್, ನೀಲು ಸಿಂಗ್ (ಬಿಜಿಎಸ್ ಪಿಯು ಕಾಲೇಜು), ಆಕಾಶ್ ದಾಸ್ (ಸೇಂಟ್ ಕ್ಲಾರೆಟ್ ಕಾಂಪೋಸಿಟ್ ಪಿಯು ಕಾಲೇಜು) ಮತ್ತು ನೇಹಾ ಬಿಆರ್ (ಚಿಕ್ಕಬಳ್ಳಾಪುರದ ಎಸ್‌ಬಿಜಿಎನ್‌ಎಸ್ ಗ್ರಾಮೀಣ ಸಂಯುಕ್ತ ಪಿಯು ಕಾಲೇಜು) 596 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾರೆ.
ಬೆಂಗಳೂರಿನ ಆರ್‌ವಿ ಪಿಯು ಕಾಲೇಜಿನ ಸಿಮ್ರಾನ್ ಶೇಷರಾವ್ 598 ಅಂಕಗಳೊಂದಿಗೆ ವಿಜ್ಞಾನ ವಿಭಾಗದಲ್ಲಿ ಪ್ರಥಮ ರ್ಯಾಂಕ್ ಪಡೆದರೆ, ಬಳ್ಳಾರಿ ಜಿಲ್ಲೆಯ ಇಂಡು ಇಂಡಿಪೆಂಡೆಂಟ್ ಪಿಯು ಕಾಲೇಜಿನ ಶ್ವೇತಾ ಭೀಮಾಶಂಕರ ಭೈರಗೊಂಡ ಮತ್ತು ಮಡಿವಾಳರ ಸಹನಾ ಕಲಾ ವಿಭಾಗದಲ್ಲಿ 594 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.
ಶಿಕ್ಷಕರು ಒದಗಿಸಿದ ಅಧ್ಯಯನದ ಮೆಟಿರಿಯಲ್ ಜೊತೆಗೆ ಅವರ ಸ್ವಂತ ನೋಟ್ ಸಿದ್ಧಪಡಿಸಿಕೊಂಡು ಅಧ್ಯಯನ ನಡೆಸಿದ್ದರಿಂದ ಅಸಾಮಾನ್ಯ ಅಂಕಗಳನ್ನು ಪಡೆಯಲು ನೆರವಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
ಬೆಂಗಳೂರಿನ ಜೆಪಿ ನಗರ ಎರಡನೇ ಹಂತದ ನಿವಾಸಿಯಾಗಿರುವ ಅವರು ತಮ್ಮ ಪ್ರಾಂಶುಪಾಲರಾದ ಡಾ.ನಳಿನಿ ಸತೀಶ್ ಚಂದ್ರ, ಪೋಷಕರಾದ ಮಾಧುರಿ ಕೇಜ್ರಿವಾಲ್, ಗೃಹಿಣಿ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ವಿನಯ್ ಕೇಜ್ರಿವಾಲ್ ಅವರಿಗೆ ಕೃತಜ್ಞತೆ ಸಲ್ಲಿಸಿದರು.
ಕೇಜ್ರಿವಾಲ್ ಬಿಕಾಂ ಅಧ್ಯಯನಕ್ಕೆ ಸೇರಲು ಬಯಸಿದ್ದು, ಏಕಕಾಲದಲ್ಲಿ CA, CMA ಮುಂದುವರಿಸುವ ಇಚ್ಚೆ ವ್ಯಕ್ತಪಡಿಸಿದ್ದಾರೆ. ಹಣಕಾಸು ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಗುರಿಯಾಗಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


