ಬೆಂಗಳೂರಿನಲ್ಲಿ ಕೊರೋನಾ ಅಬ್ಬರ: ಕ್ಲಸ್ಟರ್'ಗಳ ಸಂಖ್ಯೆ 18ಕ್ಕೆ ಹೆಚ್ಚಳ
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟಿಸುತ್ತಿದ್ದು, ಕ್ಲಸ್ಟರ್ ಗಳ ಸಂಖ್ಯೆ ಇದೀಗ 18ಕ್ಕೆ ಏರಿಕೆಯಾಗಿದೆ.

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಾಮಾರಿ ಕೊರೋನಾ ಆರ್ಭಟಿಸುತ್ತಿದ್ದು, ಕ್ಲಸ್ಟರ್ ಗಳ ಸಂಖ್ಯೆ ಇದೀಗ 18ಕ್ಕೆ ಏರಿಕೆಯಾಗಿದೆ.
ದಾಸರಹಳ್ಳಿಯ ಎರಡು ಶಾಲೆಗಳನ್ನು ಹೊರತುಪಡಿಸಿ, ಮಹದೇವಪುರದಲ್ಲಿ 12 ಮತ್ತು ಯಲಹಂಕದಲ್ಲಿ ಎರಡು ಕ್ಲಸ್ಟರ್ ಗಳು ವರದಿಯಾಗಿದ್ದರೆ, ಉಳಿದ ಕ್ಲಸ್ಟರ್ ಗಳು ಅಪಾರ್ಟ್'ಮೆಂಟ್ ಹಾಗೂ ವಿಲ್ಲಾಗಳಲ್ಲಿ ಪತ್ತೆಯಾಗಿವೆ ಎಂದು ತಿಳಿದುಬಂದಿದೆ.
ಮಹದೇವಪುರದ 11 ಕ್ಲಸ್ಟರ್ಗಳಲ್ಲಿ ಐದಕ್ಕಿಂತ ಕಡಿಮೆ ಪ್ರಕರಣಗಳು ಕಂಡು ಬಂದಿದ್ದು, ಮತ್ತೊಂದು ಅಪಾರ್ಟ್ಮೆಂಟ್ನಲ್ಲಿ ಒಂದು ಕ್ಲಸ್ಟರ್ ಪತ್ತೆಯಾಗಿದೆ. ಇನ್ನು ದಾಸರಹಳ್ಳಿಯ ಒಂದು ಶಾಲೆಯಲ್ಲಿ ತಲಾ ಐದರಿಂದ 14 ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ನಡುವೆ ಶುಕ್ರವಾರ ರಾಜ್ಯದಲ್ಲಿ ಒಟ್ಟಾರೆ 634 ಸೋಕು ಪ್ರಕರಣಗಳು ಪತ್ತೆಯಾಗಿದ್ದು ಇಬ್ಬರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಸಕ್ರಿಯಗಳ ಪ್ರಕರಣಗಳ ಪ್ರಮಾಣ ಶೇ.4.3ಕ್ಕೆ ತಲುಪಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


