ಜೀವಂತ ಗುಂಡು ಪತ್ತೆ; ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಮೆರಿಕಾ ಪ್ರಜೆ ಬಂಧನ
ತಮ್ಮ ಬ್ಯಾಗೇಜ್ ನೊಂದಿಗೆ ಜೀವಂತ ಗುಂಡು ತಂದಿದ್ದ ಅಮೆರಿಕ ಮೂಲದ ಪ್ರಜೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

ಬೆಂಗಳೂರು: ತಮ್ಮ ಬ್ಯಾಗೇಜ್ ನೊಂದಿಗೆ ಜೀವಂತ ಗುಂಡು ತಂದಿದ್ದ ಅಮೆರಿಕ ಮೂಲದ ಪ್ರಜೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.
ಅಮೆರಿಕದ ಟೆಕ್ಸಾಸ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಕೌಬಾಯ್ ಅಸಾಲ್ಟ್ ರೈಫಲ್ ನ ಜೀವಂತ ಗುಂಡು ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಅಧಿಕಾರಿಗಳು ಬಂಧಿಸಿದ್ದಾರೆ. ಬೆಂಗಳೂರಿನಿಂದ ಕೋಲ್ಕತ್ತಾಗೆ ಸಂಜೆ 5.55ಕ್ಕೆ ಹೊರಡುವ ಏರ್‌ಏಷ್ಯಾ ಇಂಡಿಯಾ ವಿಮಾನವನ್ನು ಹತ್ತಲು ಅಮೆರಿಕ ಪ್ರಜೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ತಪಾಸಣೆ ನಡೆಸಿದಾಗ ಜೀವಂತ ಗುಂಡು ಪತ್ತೆಯಾದ ಹಿನ್ನಲೆಯಲ್ಲಿ ಅವರಿಗೆ ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬ ಅಮೆರಿಕ ಪ್ರಜೆಯನ್ನು ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
ಮೂಲಗಳ ಪ್ರಕಾರ ಹ್ಯೂಸ್ 15 ಜನರ ತಂಡದೊಂದಿಗೆ ಕೋಲ್ಕತ್ತಾಗೆ ಅಧಿಕೃತ ಸಭೆಗೆ ಹೋಗುತ್ತಿದ್ದರು. ಅವರು ಮಾನ್ಯವಾದ ಬಂದೂಕು ಪರವಾನಗಿಯನ್ನು ಹೊಂದಿದ್ದಾರೆಂದು ಹೇಳಿಕೊಂಡರೂ, ಭಾರತದಲ್ಲಿನ ವಿಮಾನ ನಿಲ್ದಾಣಗಳಿಗೆ ಅನ್ವಯವಾಗುವ ನಿಯಮಗಳ ಅಡಿಯಲ್ಲಿ ವಿಮಾನ ನಿಲ್ದಾಣ ಅಥವಾ ವಿಮಾನದೊಳಗೆ ಮದ್ದುಗುಂಡುಗಳನ್ನು ಸಾಗಿಸಲು ಅಗತ್ಯವಾದ ದಾಖಲೆಗಳನ್ನು ಅವರು ಹೊಂದಿರಲಿಲ್ಲ. ಹೀಗಾಗಿ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಬ್ಯಾಗೇಜ್ ಸ್ಕ್ರೀನಿಂಗ್ ತಪಾಸಣೆಯ ಸಮಯದಲ್ಲಿ, ಫ್ಲೈಟ್ ನಂ. I5-592 ಮೂಲಕ ಕೋಲ್ಕತ್ತಾಗೆ ಪ್ರಯಾಣಿಸಲಿದ್ದ ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬ ಅಮೆರಿಕ ಪ್ರಜೆಯ ಸಾಮಾನು ಸರಂಜಾಮುಗಳಲ್ಲಿ .30 ಎಂಎಂ ಕ್ಯಾಲಿಬರ್ ಜೀವಂತ ಗುಂಡು ಪತ್ತೆಯಾಗಿವೆ. ಹೀಗಾಗಿ ಅವರನ್ನು ವಶಕ್ಕೆ ಪಡೆದು ವಿಮಾನ ನಿಲ್ದಾಣದ ಪೊಲೀಸರ ಬಳಿ ಕರೆದೊಯ್ಯಲಾಯಿತು. ಈ ಸಂಬಂಧ ಹೆಚ್ಚಿನ ತನಿಖೆಗಳು ಮತ್ತು ಕಾನೂನು ಔಪಚಾರಿಕತೆಗಳು ನಡೆಯುತ್ತಿವೆ ಎಂದು ಅಧಿಕಾರಿಯೊಬ್ಬರು ಹೇಳಿದರು.
2 ವರ್ಷಗಳ ಹಿಂದೆ ಬಳಸಿದ್ದ ಗನ್ ಬುಲೆಟ್
ಇನ್ನು ಹ್ಯೂಸ್ ಹೇಳುವಂತೆ ತನ್ನ ಬ್ಯಾಗ್ ನಲ್ಲಿ ಗನ್ ಬುಲೆಟ್ ಇರುವುದು ತನಗೆ ಗೊತ್ತಿರಲಿಲ್ಲ. ಅಧಿಕಾರಿಗಳು ತಪಾಸಣೆ ಮಾಡಿದ ಬಳಿಕ ಅವರು ನನಗೆ ತಿಳಿಸಿದಾಗಲೇ ಅದರ ಅರಿವು ನನಗಾಗಿದೆ. ಇದನ್ನು ನಾನು 2 ವರ್ಷಗಳ ಹಿಂದೆ ಬೇಟೆಯಲ್ಲಿ ಬಳಸಿದ್ದೆ. ತನ್ನ ಬ್ಯಾಗ್‌ನೊಳಗೆ ಬುಲೆಟ್ ಇರುವ ಸುಳಿವು ನನಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ವಿಚಿತ್ರವೆಂದರೆ, ಅದೇ ಬ್ಯಾಗ್‌ನಲ್ಲಿರುವ ಬುಲೆಟ್ ಅವರು ಭಾರತಕ್ಕೆ ಅಂತರರಾಷ್ಟ್ರೀಯ ವಿಮಾನವನ್ನು ತೆಗೆದುಕೊಂಡಾಗ ಪತ್ತೆಯಾಗಿರಲಿಲ್ಲ ಆದರೆ ಬೆಂಗಳೂರು ವಿಮಾನ ನಿಲ್ದಾಣದ ತಪಾಸಣೆ ವೇಳೆ ಪತ್ತೆಯಾಗಿದೆ. ಈ ಬಗ್ಗೆ ಏರ್ ಏಷ್ಯಾ ಇಂಡಿಯಾ ಈ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ ಎಂದು ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


