ಮೆಟ್ರೋ ನಿಲ್ದಾಣದ ಗ್ರಾನೈಟ್ ನೆಲದ ಮೇಲೆ ಜಾರಿಬಿದ್ದ ಮಹಿಳೆ, ಪಾದದ ಮೂಳೆ ಮುರಿತ
ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ 50 ವರ್ಷದ ಗೃಹಿಣಿಯೊಬ್ಬರು ಗ್ರಾನೈಟ್ ನೆಲದ ಮೇಲೆ ಜಾರಿ ಬಿದ್ದು ಎಡ ಪಾದದ ಮೂಳೆ ಮುರಿತಕ್ಕೊಳಗಾದ ಘಟನೆ ನಡೆದಿದೆ.

ಬೆಂಗಳೂರು: ರಾಜರಾಜೇಶ್ವರಿನಗರ ಮೆಟ್ರೋ ನಿಲ್ದಾಣದಲ್ಲಿ ಇತ್ತೀಚೆಗೆ 50 ವರ್ಷದ ಗೃಹಿಣಿಯೊಬ್ಬರು ಗ್ರಾನೈಟ್ ನೆಲದ ಮೇಲೆ ಜಾರಿ ಬಿದ್ದು ಎಡ ಪಾದದ ಮೂಳೆ ಮುರಿತಕ್ಕೊಳಗಾದ ಘಟನೆ ನಡೆದಿದೆ. ಆ ಮಹಿಳೆ ಈಗ ಸಂಪೂರ್ಣವಾಗಿ ಬ್ಯಾಂಡೇಜ್ ಮಾಡಿದ ಪಾದದೊಂದಿಗೆ ಮತ್ತು ಐದು ವಾರಗಳ ಬೆಡ್‌ರೆಸ್ಟ್‌ನಲ್ಲಿದ್ದಾಳೆ. ಮೆಟ್ರೋ ನಿಲ್ದಾಣಗಳ ಒಳಗೆ ಹೊಳೆಯುವ ಗ್ರಾನೈಟ್ ನೆಲದ ಮೇಲೆ ಬೀಳುವುದು ನಿತ್ಯದ ಘಟನೆಯಾಗಿದೆ ಎಂದು ಕೆಲವು ಪ್ರಯಾಣಿಕರು ಹೇಳುತ್ತಾರೆ.

ಕಳೆದ ಸೋಮವಾರ, ರಾಜರಾಜೇಶ್ವರಿ ನಗರದ ಮೆಟ್ರೋ ನಿಲ್ದಾಣದಿಂದ ತನ್ನ ಪೋಷಕರು ಕರೆದುಕೊಂಡು ಬರಲು ಹೋಗಿದ್ದಾಗ, ನನ್ನ ತಾಯಿ ಕಪ್ಪು ಗ್ರಾನೈಟ್ ನೆಲದ ಮೇಲೆ ನಡೆದಾಗ, ಜಾರಿಬಿದ್ದು ಪಾದದ ಮೂಳೆ ಮುರಿದಿತ್ತು. ಮರುದಿನ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ 2 ಇಂಚು ಆಳದ ಮೂಳೆ ಮುರಿತವಾಗಿರುವುದು ಪತ್ತೆಯಾಯಿತು. ಇದೇ ರೀತಿ ಹಲವು ಪ್ರಯಾಣಿಕರು ಬೀಳುತ್ತಿರುವುದನ್ನು ಆಗಾಗ್ಗೆ ನೋಡುತ್ತಿರುವುದಾಗಿ ಓರ್ವ ಮೆಟ್ರೋ ಸಿಬ್ಬಂದಿ ಹೇಳಿರುವುದಾಗಿ ಕೌಶಿಕ್ ತಿಳಿಸಿದರು.
ಮಂಗಳವಾರ ಆರ್ ಆರ್ ನಗರ ನಿಲ್ದಾಣವನ್ನು ಪರಿಶೀಲಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಮೈಸೂರು ಮೆಟ್ರೋ ನಿಲ್ದಾಣದಲ್ಲಿ ನಾನು ಕೂಡಾ ಕೆಟ್ಟದಾಗಿ ಬಿದಿದ್ದೆ. ನೇರಳೆ ಮಾರ್ಗದಲ್ಲಿ ಇಂತಹ ಘಟನೆಗಳು ಹೆಚ್ಚಾಗಿ ನಡೆಯುತ್ತಲೇ ಇವೆ ಎಂದು ಪ್ರಯಾಣಿಕರಾದ ರಾಣಿ ಕಾರ್ತಿಕ್ ಹೇಳಿದರು. ಆದರೆ, ಇಂತಹ ಘಟನೆಗಳ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಬಿಎಂಆರ್ ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಿಎಲ್ ಯಶವಂತ ಚವಾಣ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


