ಬೆಂಗಳೂರು: ಯಶಸ್ಸಿಗಿಂತ ಸಾಧನೆ ಮುಖ್ಯ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಯಶಸ್ಸಿಗಿಂತ ಸಾಧನೆ ಮುಖ್ಯ. ನಿಮ್ಮ ಯಶಸ್ಸು ಇನ್ನಷ್ಟು ವ್ಯಕ್ತಿಗಳ ಸಾಧನೆಗೆ ಕಾರಣವಾಗುವುದೇ ನಿಜವಾದ ಸಾಧನೆ. ಹಾಗಾಗೀ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರು: ಯಶಸ್ಸಿಗಿಂತ ಸಾಧನೆ ಮುಖ್ಯ. ನಿಮ್ಮ ಯಶಸ್ಸು ಇನ್ನಷ್ಟು ವ್ಯಕ್ತಿಗಳ ಸಾಧನೆಗೆ ಕಾರಣವಾಗುವುದೇ ನಿಜವಾದ ಸಾಧನೆ. ಹಾಗಾಗೀ ಸಾಧಕನಿಗೆ ಸಾವು ಅಂತ್ಯವಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಮಹಾತ್ಮ ಗಾಂಧಿ ವಿದ್ಯಾ ಪೀಠ ಟ್ರಸ್ಟ್, ದಯಾನಂದ ಸಾಗರ್ ವಿದ್ಯಾಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯ ವತಿಯಿಂದ ಆಯೋಜಿಸಿದ್ದ ಬ್ಯಾರಿಸ್ಟರ್ ಆರ್. ದಯನಾಂದ್ ಸಾಗರ್ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕನಾಂದರು ಹೇಳಿದ್ದಾರೆ. ಇವತ್ತಿನ ಕ್ಷಣವನ್ನು ಸಾರ್ಥಕತೆಯಿಂದ ಬದುಕಿದರೆ ನಾವು ಇಲ್ಲದಿರುವಾಗಲೂ ಜನ ನಮ್ಮನ್ನು ನೆನಪಿಸುತ್ತಾರೆ ಎಂದರು.
ದಯಾನಂದ ಸಾಗರ್ ಹಾಕಿದ ಅಡಿಪಾಯವನ್ನು ಬಳಸಿ ಅವರ ಇಬ್ಬರೂ ಮಕ್ಕಳು ಶಿಕ್ಷಣದ ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ. ಅವರು ಸಾಧಕರು ಎಂದು ಕರೆದ ಮುಖ್ಯಮಂತ್ರಿ, ಕಲೆ, ಸಂಸ್ಕೃತಿಗಾಗಿ ಸಂಸ್ಥೆಗಳನ್ನು ಕಟ್ಟಿದ ದಯಾನಂದ ಸಾಗರ್ ಅವರು ಚಲನಚಿತ್ರ ರಂಗದಲ್ಲಿ ಸಂಸ್ಥೆಯನ್ನೇ ಕಟ್ಟಿದರು. ಅವರೊಬ್ಬ ಮುಂದಾಲೋಚನೆಯ ಸಾಂಸ್ಥಿಕ ವ್ಯಕ್ತಿಯಾಗಿದ್ದರು. ಲಕ್ಷಗಟ್ಟಲೇ ವಿದ್ಯಾರ್ಥಿಗಳಿಗೆ ದಾರಿ ದೀಪವಾದರು ಎಂದು ಸ್ಮರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


