ರಾಜ್ಯ

ಬೆಂಗಳೂರು: ಹೊಸಕೋಟೆ ಬಳಿ ಗೋಡೆ ಕುಸಿದು ನಾಲ್ವರು ವಲಸೆ ಕಾರ್ಮಿಕರು ದುರ್ಮರಣ

ಭಾರೀ ಮಳೆಗೆ ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನ ಗೋಡೆ ಕುಸಿದು ನಾಲ್ವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ಹೊಸಕೋಟೆಯ ತಿರುಮಲ ಶೆಟ್ಟಿಯಲ್ಲಿ ನಡೆದಿದೆ.

ಬೆಂಗಳೂರು: ಹೊಸಕೋಟೆ ಬಳಿ ಗೋಡೆ ಕುಸಿದು ನಾಲ್ವರು ವಲಸೆ ಕಾರ್ಮಿಕರು ದುರ್ಮರಣ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಭಾರೀ ಮಳೆಗೆ ನಿರ್ಮಾಣ ಹಂತದ ಅಪಾರ್ಟ್ ಮೆಂಟ್ ನ ಗೋಡೆ ಕುಸಿದು ನಾಲ್ವರು ವಲಸೆ ಕಾರ್ಮಿಕರು ದುರ್ಮರಣ ಹೊಂದಿರುವ ಘಟನೆ ಹೊಸಕೋಟೆಯ ತಿರುಮಲ ಶೆಟ್ಟಿಯಲ್ಲಿ ನಡೆದಿದೆ.

ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರಲ್ಲಿ ಇಬ್ಬರ ಸ್ಥಿತಿ ಗಂಭೀರವಾಗಿದೆ. ಮೃತ ಹಾಗೂ ಗಾಯಗೊಂಡ ಕಾರ್ಮಿಕರು ಉತ್ತರ ಭಾರತದ ಮೂಲದವರು ಎನ್ನಲಾಗಿದೆ. ತಡೆಗೋಡೆ ಪಕ್ಕದಲ್ಲಿ ಹಾಕಲಾಗಿದ್ದ ಶೆಡ್ ನಲ್ಲಿ ಮಲಗಿದ್ದ ವೇಳೆ ಅವರ ಮೇಲೆ ಗೋಡೆ ಕುಸಿದ ಈ ದುರ್ಘಟನೆ ಸಂಭವಿಸಿದೆ.

ಗೋಡೆಯಡಿ ಸಿಲುಕಿದ್ದ ನಾಲ್ವರು ಕಾರ್ಮಿಕರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.  ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಅಪಾರ್ಟ್ ಮೆಂಟ್ ಮಾಲೀಕ ಹಾಗೂ ಗುತ್ತಿಗೆದಾರನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.