ರಾಜ್ಯ

ಬೆಂಗಳೂರು: ಚಾಕು ಇರಿತಕ್ಕೊಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಆಯೂಬ್ ಖಾನ್ ನಿಧನ

ನಿನ್ನೆ ಚಾಕು ಇರಿತಕ್ಕೆ ಒಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಅಯೂಬ್ ಖಾನ್ ಇಂದು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಕೊನೆಯುಸಿರೆಳೆದರು.

ಬೆಂಗಳೂರು: ಚಾಕು ಇರಿತಕ್ಕೊಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಆಯೂಬ್ ಖಾನ್ ನಿಧನ
ಅಯೂಬ್ ಖಾನ್
Published On :

ಬೆಂಗಳೂರು: ನಿನ್ನೆ ಚಾಕು ಇರಿತಕ್ಕೆ ಒಳಗಾಗಿದ್ದ ಮಾಜಿ ಕಾರ್ಪೊರೇಟರ್​ ಪತಿ ಅಯೂಬ್ ಖಾನ್ ಇಂದು ಸಾವನ್ನಪ್ಪಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೇ ಅಯೂಬ್ ಖಾನ್ ವಿಕ್ಟೋರಿಯಾ ಆಸ್ಪತ್ರೆಯ ಐಸಿಯುನಲ್ಲಿ ಕೊನೆಯುಸಿರೆಳೆದರು.

ಟಿಪ್ಪುನಗರದ ಮಾಜಿ ಕಾರ್ಪೊರೇಟರ್ ಆಯೂಬ್ ಖಾನ್‌ ಅವರನ್ನು ಚಾಕುವಿನಿಂದ ಇರಿದು ಹತ್ಯೆಯನ್ನು ಮಾಡಲಾಗಿದೆ. ಆಸ್ತಿ ಮತ್ತು ಮಸೀದಿ ಪ್ರೆಸಿಡೆಂಟ್ ಸ್ಥಾನ ಸಂಬಂಧಿಸಿದ ಕಲಹದಿಂದಾಗಿ ಉಂಟಾಗಿದ್ದ ಕಲಹದಲ್ಲಿ ಆಯುಬ್ ಖಾನ್‌ಗೆ ನಿನ್ನೆ (ಜುಲೈ13) ರಾತ್ರಿ ಚಾಕುವಿನಿಂದ ಇರಿಯಲಾಗಿತ್ತು. ಆಯೂಬ್ ಖಾನ್‌ನನ್ನು ತಕ್ಷಣವೇ ವಿಕ್ಟೋರಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ ಅಸುನೀಗಿದ್ದಾರೆ.

ಅಯೂಬ್ ಖಾನ್ ಸಾವನ್ನಪ್ಪಿರುವ ಹಿನ್ನೆಲೆ ವಿಕ್ಟೋರಿಯಾ ಆಸ್ಪತ್ರೆ ಬಳಿ ಪೊಲೀಸರಿಂದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಮೂರುಕೆಎಸ್ ಆರ್ ಪಿ ತುಕಡಿ ಹಾಗೂ ನೂರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಆಸ್ತಿ ವಿಚಾರವಾಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿದೆ. ಬಿಬಿಎಂಪಿ ಚುನಾವಣೆ ದೃಷ್ಟಿಯಿಂದ ಈ ಕೊಲೆ ನಡೆದಿದೆ ಎಂದು ಆಯೂಬ್ ಖಾನ್​​ ಬೆಂಬಲಿಗರು ಆರೋಪಿಸುತ್ತಿದ್ದಾರೆ. ಚಿಕ್ಕಪ್ಪನ ಮೇಲೆ ಅಣ್ಣನ ಮಗ ಮಥೀನ್​ ಖಾನ್​​ ದಾಳಿ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಕರಣ ದಾಖಲಿಸಿಕೊಂಡಿರೋ ಚಾಮರಾಜಪೇಟೆ ಪೊಲೀಸರು ಪ್ರಮುಖ ಆರೋಪಿ ಮಥೀನ್ ಖಾನ್ ಹಾಗೂ ಇತರೆ ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.