ಫೆಮಾ ಪ್ರಕರಣ: ಮಂಗಳೂರಿನ ಕೆ ಮೊಹಮ್ಮದ್ ಹಾರಿಸ್ ಆಸ್ತಿ ವಶಪಡಿಸಿಕೊಂಡ ಇಡಿ
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಂಸ್ಥೆ ಮಂಗಳವಾರ ತಿಳಿಸಿದೆ.

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) 1999 ರ ಅಡಿಯಲ್ಲಿ ಮಂಗಳೂರಿನ ಕೆ ಮೊಹಮ್ಮದ್ ಹ್ಯಾರಿಸ್ ಹೆಸರಿನಲ್ಲಿದ್ದ 17.34 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ (ಇಡಿ) ವಶಪಡಿಸಿಕೊಂಡಿದೆ ಎಂದು ಕೇಂದ್ರ ಸಂಸ್ಥೆ ಮಂಗಳವಾರ ತಿಳಿಸಿದೆ.
ವಶಪಡಿಸಿಕೊಂಡ ಆಸ್ತಿಗಳಲ್ಲಿ ಮಂಗಳೂರಿನಲ್ಲಿರುವ ಎರಡು ವಸತಿ ಮನೆಗಳು ಮತ್ತು ಒಂದು ಕೈಗಾರಿಕಾ ಪ್ಲಾಟ್ ಸೇರಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಅಧಿಕಾರಿಗಳು ಫೆಮಾ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿ ಪ್ರಕರಣವನ್ನು ತನಿಖೆ ಮಾಡಿದ್ದಾರೆ. “ಮಂಗಳೂರಿನ ನಿವಾಸಿ ಮುಕ್ಕಾ ಗ್ರೂಪ್ ಆಫ್ ಕಂಪನೀಸ್‌ನ ಹ್ಯಾರಿಸ್ ಅವರು ನಿಬಂಧನೆಗಳನ್ನು ಉಲ್ಲಂಘಿಸಿ ಸ್ಥಿರ ಆಸ್ತಿ, ವ್ಯಾಪಾರ ಘಟಕಗಳನ್ನು ಸಂಪಾದಿಸಿದ್ದಾರೆ ಮತ್ತು ಭಾರತದ ಹೊರಗೆ ವಿದೇಶೀ ವಿನಿಮಯ ವಹಿವಾಟು ನಡೆಸಿದ್ದಾರೆ ಎಂಬ FEMA ಮಾಹಿತಿಯ ಆಧಾರದ ಮೇಲೆ ಇದೀಗ ಅವರ ಆಸ್ತಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಸಂಸ್ಥೆ ಹೇಳಿದೆ.
ತನಿಖೆಯ ಸಂದರ್ಭದಲ್ಲಿ, ಹ್ಯಾರಿಸ್ ಅಜ್ಮಾನ್ ಯುಎಇಯಲ್ಲಿ ಫ್ಲಾಟ್ ಅನ್ನು ಖರೀದಿಸಿದ್ದು, ವಿದೇಶಿ ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ ಮತ್ತು ಯುಎಇಯಲ್ಲಿ ವಿದೇಶಿ ವ್ಯಾಪಾರ ಘಟಕದಲ್ಲಿ ಹೂಡಿಕೆಗಳು/ಷೇರುಗಳನ್ನು ಹೊಂದಿದ್ದಾರೆ, ಇದರ ಸಂಪೂರ್ಣ ಮೌಲ್ಯ 17,34,80,746 ರೂ ಆಗಿದೆ. ಇದು FEMA ನ ವಿಭಾಗ 4 ರ ಉಲ್ಲಂಘನೆಯಾಗಿದೆ.
FEMA ದ ಸೆಕ್ಷನ್ 37A ಅಡಿಯಲ್ಲಿ ನಿಬಂಧನೆಗಳ ಪ್ರಕಾರ, ಭಾರತದ ಹೊರಗೆ ಇರುವ ಯಾವುದೇ ವಿದೇಶಿ ವಿನಿಮಯ, ವಿದೇಶಿ ಭದ್ರತೆ ಅಥವಾ ಸ್ಥಿರ ಆಸ್ತಿಯನ್ನು FEMA ದ ಸೆಕ್ಷನ್ 4 ರ ವಿರುದ್ಧ ಎಂದು ಹೇಳಲಾಗಿದೆ. ಅಲ್ಲದೆ ED ಗೆ ಭಾರತದೊಳಗೆ ಅಂತಹ ವಿದೇಶಿ ವಿನಿಮಯ, ವಿದೇಶಿ ಭದ್ರತೆ ಅಥವಾ ಸ್ಥಿರ ಆಸ್ತಿ ಗೆ ಸಮಾನ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲು ಅಧಿಕಾರವಿದೆ ಎಂದು ಇಡಿ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


