ನಿಷೇಧಿತ ರೂ.500 ನೋಟುಗಳ ಬದಲಿಸಲು ಯತ್ನ: ಮೂವರು ಆರೋಪಿಗಳ ಬಂಧನ, ರೂ.88 ಲಕ್ಷ ಮೌಲ್ಯದ ನೋಟುಗಳು ವಶಕ್ಕೆ
ಕೆಲ ವರ್ಷಗಳ ಹಿಂದೆ ರದ್ದುಗೊಂಡಿರುವ ರೂ.500 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಕೆಲ ವರ್ಷಗಳ ಹಿಂದೆ ರದ್ದುಗೊಂಡಿರುವ ರೂ.500 ಮುಖಬೆಲೆಯ ನೋಟುಗಳನ್ನು ಬದಲಾಯಿಸಲು ಯತ್ನಿಸಿದ ಮೂವರು ಆರೋಪಿಗಳನ್ನು ಬನಶಂಕರಿ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಗಳನ್ನು ಪದ್ಮನಾಭನಗರ ನಿವಾಸಿ ಯೋಗಾನಂದಂ ಅಲಿಯಾಸ್ ಯೋಗೇಶ್ (39), ಆಂಧ್ರಪ್ರದೇಶದ ಪುಟ್ಟಪರ್ತಿ ಮೂಲದ ವೆಂಕಟ್ ನಾರಾಯಣ್ ಅಲಿಯಾಸ್ ರಾಜಣ್ಣ ಎಂ (60) ಮತ್ತು ಹರಿಪ್ರಸಾದ್ (53) ಎಂದು ಗುರುತಿಸಲಾಗಿದೆ.
ಕದಿರೇನಹಳ್ಳಿ ಸೇತುವೆ ಬಳಿ ನಿಷೇಧಿತ ನೋಚು ವಿನಿಮಯ ಮಾಡಿಕೊಳ್ಳಲು ಕಾರಿನಲ್ಲಿ ಕೆಲವರು ಕಾದು ಕುಳಿತಿದ್ದಾರೆ ಎಂಬ ಖಚಿತ ಮಾಹಿತಿಗಳು ತಿಳಿದುಬಂದಿತ್ತು. ಇದರಂತೆ ಸ್ಥಳಕ್ಕೆ ಧಾವಿಸಿ ಕಾರನ್ನು ಪರಿಶೀಲಿಸಿದಾಗ ನಿಷೇಧಿತ 40 ಲಕ್ಷ ರೂ ನೋಟುಗಳು ಪತ್ತೆಯಾಗಿತ್ತು. ಇದರಂತೆ ಮೂವರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಮನೆಯಲ್ಲಿ ಇನ್ನೂ ರೂ.48 ಲಕ್ಷ ನಿಷೇಧಿತ ನೋಟುಗಳನ್ನು ಇರಿಸಿರುವುದು ತಿಳಿದುಬಂದಿತ್ತು. ಆ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆರೋಪಿಗಳು ಯಾರೊಂದಿಗೆ ನಿಷೇಧಿತ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರು ಎಂಬುದರ ಕುರಿತು ತನಿಖೆ ನಡೆಸುತ್ತಿದ್ದೇವೆ. ಇದೀಗ ಆರೋಪಿಗಳ ವಿರುದ್ಧ 2017 ರ ನಿರ್ದಿಷ್ಟ ಬ್ಯಾಂಕ್ ನೋಟುಗಳ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


