ರಾಜ್ಯ

ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ನಾಯಕರು ಸಂಯಮ ಕಾಯ್ದುಕೊಳ್ಳಬೇಕು; ಗೃಹ ಸಚಿವ ಆರಗ ಜ್ಞಾನೇಂದ್ರ

ಗಡಿ ವಿವಾದ ಸಂಬಂಧ ರಾಜಕೀಯ ನಾಯಕರು ಜನಜೀವನ ಅಸ್ತವ್ಯಸ್ತಗೊಳಿಸುವ ಹೇಳಿಕೆಗಳನ್ನು ನೀಡಬಾರದು. ಎರಡೂ ರಾಜ್ಯಗಳ ನಾಯಕರು ಸಂಯಮ ಕಾಯ್ದುಕೊಳ್ಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದರು.

ಗಡಿ ವಿವಾದ: ಮಹಾರಾಷ್ಟ್ರ, ಕರ್ನಾಟಕ ನಾಯಕರು ಸಂಯಮ ಕಾಯ್ದುಕೊಳ್ಳಬೇಕು; ಗೃಹ ಸಚಿವ ಆರಗ ಜ್ಞಾನೇಂದ್ರ
ಗೃಹ ಸಚಿವ ಆರಗ ಜ್ಞಾನೇಂದ್ರ
Published On :

ಬೆಳಗಾವಿ: ಗಡಿ ವಿವಾದ ಸಂಬಂಧ ರಾಜಕೀಯ ನಾಯಕರು ಜನಜೀವನ ಅಸ್ತವ್ಯಸ್ತಗೊಳಿಸುವ ಹೇಳಿಕೆಗಳನ್ನು ನೀಡಬಾರದು. ಎರಡೂ ರಾಜ್ಯಗಳ ನಾಯಕರು ಸಂಯಮ ಕಾಯ್ದುಕೊಳ್ಳಬೇಕೆಂದು ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಬುಧವಾರ ಹೇಳಿದರು.

ಚೀನಾ ಭಾರತದ ಗಡಿ ಹೇಗೆ ಪ್ರವೇಶಿಸಿತ್ತೋ ಹಾಗೆಯೇ ಮಹಾರಾಷ್ಟ್ರ ಕೂಡ ಕರ್ನಾಟಕದ ಗಡಿ ನುಗ್ಗಲಿದೆ ಎಂಬ ಶಿವಸೇನ ನಾಯಕ ಸಂಜಯ್ ರಾವತ್ ಅವರ ಹೇಳಿಕೆಗೆ ಗೃಹ ಸಚಿವರು ನಿನ್ನೆ ಪ್ರತಿಕ್ರಿಯೆ ನೀಡಿದರು.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಉಭಯ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ನಡೆಸಿದ ಸಭೆಯನ್ನು ಸ್ಮರಿಸಿದ ಸಚಿವರು, ಇಂತಹ ಕ್ಷಣಗಳಲ್ಲಿ ನಾಯಕರು ಸಂಯಮ ತೋರಿಸಬೇಕು ಮತ್ತು ಎರಡೂ ರಾಜ್ಯಗಳ ನಾಯಕರು ಕಾನೂನು ಖಾತ್ರಿಪಡಿಸಲು ಕಠಿಣ ಕ್ರಮಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು.

ಇತ್ತೀಚೆಗೆ ನವದೆಹಲಿಯಲ್ಲಿ ನಡೆದ ಸಭೆಯಲ್ಲಿ, ಗೊಂದಲಕ್ಕೆ ಕಾರಣವಾದ ವಿವಾದಾತ್ಮಕ ಹೇಳಿಕೆಗಳನ್ನು ನೀಡದಂತೆ ಅಮಿತ್ ಶಾ ಅವರು ಎರಡೂ ರಾಜ್ಯಗಳಿಗೆ ಮನವಿ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.